alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರ್ಯ ಹಾಗೂ ಚಂದ್ರನನ್ನು ಈ ಸಮಯದಲ್ಲಿ ನೋಡಬೇಡಿ

ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗೂ ಚಂದ್ರನ ಪಾತ್ರ ಮಹತ್ವದ್ದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ಕಾಡಲು ಶುರುವಾಗುತ್ತದೆ. ಸೂರ್ಯ ದೋಷದಿಂದ ತಲೆ ನೋವು, ಜ್ವರ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆ, ನೌಕರಿಯಲ್ಲಿ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ. ಚಂದ್ರನ ದೋಷದಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ, ಧನ ಹಾನಿ, ಖಿನ್ನತೆ ಕಾಡುತ್ತದೆ.

ಶಾಸ್ತ್ರದ ಪ್ರಕಾರ ಕೆಲವೊಂದು ಸಮಯದಲ್ಲಿ ಸೂರ್ಯ ಹಾಗೂ ಚಂದ್ರನನ್ನು ನೋಡಬಾರದು. ಇದು ಕೂಡ ದೋಷಕ್ಕೆ ಕಾರಣವಾಗುತ್ತದೆ. ಸೂರ್ಯ ಹಾಗೂ ಚಂದ್ರ ಮುಳುಗುವ ವೇಳೆ ನೋಡಬಾರದು. ಇದ್ರಿಂದ ಕಣ್ಣಿನ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಶಾಸ್ತ್ರದಲ್ಲಿ ಅಪಶಕುನವೆಂದು ಪರಿಗಣಿಸಲಾಗಿದೆ. ಸೂರ್ಯೋದಯ ನೋಡುವುದು ಶುಭಕರ.

ಸೂರ್ಯನ ಉದಯವಾಗ್ತಿದ್ದಂತೆ ದಿನ ಆರಂಭವಾಗುತ್ತದೆ. ಸೂರ್ಯಾಸ್ತದ ನಂತ್ರ ದಿನ ಮುಗಿಯುತ್ತದೆ. ಸೂರ್ಯೋದಯವಾಗ್ತಿದ್ದಂತೆ ನಿದ್ರೆಯಿಂದ ಏಳಬೇಕು. ಸೂರ್ಯೋದಯವಾದ ಮೇಲೂ ತುಂಬಾ ಸಮಯ ಮಲಗುವವರಿಗೆ ತಾಯಿ ಲಕ್ಷ್ಮಿ ಕೃಪೆ ಸಿಗುವುದಿಲ್ಲ.

ನವಗ್ರಹಗಳಲ್ಲಿ ಚಂದ್ರನಿಗೆ ಮಹತ್ವದ ಸ್ಥಾನವಿದೆ. ಹುಣ್ಣಿಮೆಯಂದು ಚಂದ್ರೋದಯ ನೋಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಆ ಸಂದರ್ಭದಲ್ಲಿ ಚಂದ್ರನಿಗೆ ವಿಶೇಷ ಪೂಜೆ ಮಾಡುವುದು ಮಂಗಳಕರವೆಂದು ಭಾವಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...