alex Certify
ಕನ್ನಡ ದುನಿಯಾ       Mobile App
       

Kannada Duniya

ಹನುಮಂತನ ಈ ಮೂರ್ತಿಗಳನ್ನು ಮನೆಯಲ್ಲಿಡಬೇಡಿ

ಶಾಸ್ತ್ರಗಳ ಪ್ರಕಾರ ದೇವರ ಕೆಲವೊಂದು ಮೂರ್ತಿ ಹಾಗೂ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಅಥವಾ ಯುದ್ಧದ ಫೋಟೋಗಳನ್ನು ಮನೆಯಲ್ಲಿ ಹಾಕಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಕಲಿಯುಗದಲ್ಲಿ ಭಕ್ತರ ಭಕ್ತಿಗೆ ಬೇಗ ಕೃಪೆ ತೋರುವ ದೇವರೆಂದರೆ ಹನುಮಂತ. ಆದ್ರೆ ಹನುಮಂತನ ಕೆಲ ಮೂರ್ತಿ ಅಥವಾ ಫೋಟೋವನ್ನು ಕೂಡ ಮನೆಯಲ್ಲಿ ಹಾಕುವುದು ಶುಭವಲ್ಲ.

ಹನುಮಂತ ಅಸ್ಥಿರವಾಗಿದ್ದು, ಸಂಜೀವಿನಿ ಜೊತೆ ಹಾರುತ್ತಿರುವ ಚಿತ್ರವನ್ನು ಹಾಕಬೇಡಿ.

ದುಷ್ಟರನ್ನು ದಹನ ಮಾಡುತ್ತಿರುವ ಮೂರ್ತಿಯನ್ನು ಮನೆಯಲ್ಲಿ ಹಾಕಬಾರದು.

ರಾಮ-ಲಕ್ಷ್ಮಣರನ್ನು ಹೊತ್ತಿರುವ ಫೋಟೋ, ಲಂಕಾ ದಹನ ಮಾಡಿದ ಮೂರ್ತಿಗಳನ್ನು ಹಾಕಬೇಡಿ.

ಅಪಾರ ಶಕ್ತಿಯುಳ್ಳವನಂತೆ ಬಿಂಬಿತವಾಗಿರುವ ಹನುಮಂತನ ಮೂರ್ತಿಯನ್ನು ಮನೆಯಲ್ಲಿಡಿ.

ಹಳದಿ ಬಣ್ಣದ ಬಟ್ಟೆ ತೊಟ್ಟಿರುವ ಯುವ ಹನುಮಂತನ ಚಿತ್ರವನ್ನು ಮನೆಯಲ್ಲಿಡಬೇಕು.

ಓದುತ್ತಿರುವ ಮಕ್ಕಳ ಕೋಣೆಯಲ್ಲಿ ಹಳದಿ ಬಣ್ಣದ ಲಂಗೋಟಿ ಹಾಕಿರುವ ಹನುಮಂತನ ಫೋಟೋ ಹಾಕುವುದು ಶುಭ.

ಶ್ರೀರಾಮನ ಪಾದದಡಿ ಕುಳಿತಿರುವ ಫೋಟೋ ಅಥವಾ ಮೂರ್ತಿ ಶುಭ ತರುತ್ತದೆ.

ಬೆಡ್ ರೂಂನಲ್ಲಿ ಹನುಮಂತನ ಯಾವುದೇ ಫೋಟೋವನ್ನು ಹಾಕಬೇಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...