alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ. 25ರಂದು ನೀರನ್ನು ಕುಡಿಯದೆ ವೃತ ಮಾಡಿದ್ರೆ ಪ್ರಸನ್ನನಾಗ್ತಾನೆ ಶಿವ

2017_3image_11_52_073015129shani-shiv-ll

ಮಾರ್ಚ್ 25ರ ಶನಿವಾರ ಪ್ರದೋಷ ವೃತವಿದೆ. ಇದನ್ನು ಶನಿ ಪ್ರದೋಷ ಎಂದೇ ಕರೆಯಲಾಗುತ್ತದೆ. ಸನಾತನ ಧರ್ಮದಲ್ಲಿ ಇದನ್ನು ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಭೋಲೆ ಶಂಕರನ ಪೂಜೆ ಮಾಡಲಾಗುತ್ತದೆ. ಶನಿವಾರ ಶನಿದೇವರಿಗೆ ಪ್ರಿಯವಾದ ದಿನ. ಭಗವಂತ ಶಿವ ಶನಿದೇವರ ಗುರು. ಈ ದಿನ ಭೋಲೆನಾಥನ ಪೂಜೆ ಮಾಡಿದ್ರೆ ಶನಿ ಸಂತೋಷಗೊಳ್ತಾನೆ. ಹಾಗಾಗಿ ಈ ದಿನ ಕಟ್ಟುನಿಟ್ಟಿನ ವೃತ ಮಾಡಿದವರಿಗೆ ಶನಿ ಕೃಪೆ ತೋರಲಿದ್ದಾನೆ. ಹನಿ ನೀರನ್ನೂ ಸೇವನೆ ಮಾಡದೆ ಈ ವೃತವನ್ನು ಆಚರಿಸಬೇಕಾಗುತ್ತದೆ.

ಪ್ರಾತಃಕಾಲ ಸ್ನಾನ ಮಾಡಿ ಬಿಲ್ವ ಪತ್ರೆ, ಗಂಗಾಜಲ, ಅಕ್ಷತೆ ಧೂಪ, ದೀಪಗಳಿಂದ ಭೋಲೆನಾಥನ ಪೂಜೆ ಮಾಡಿ. ಸಂಧ್ಯಾ ಕಾಲದಲ್ಲಿ ಮತ್ತೆ ಸ್ನಾನ ಮಾಡಿ ಮತ್ತೆ ಶಿವನ ಪೂಜೆ ಮಾಡಬೇಕು. ಈ ರೀತಿ ಪ್ರದೋಷ ವೃತ ಮಾಡುವುದರಿಂದ ವೃತದ ಪುಣ್ಯ ಪ್ರಾಪ್ತಿಯಾಗುತ್ತದೆ.

ಭಗವಂತ ಶಿವನ ಷಡಾಕ್ಷರಿ ಮಂತ್ರವನ್ನು ಜಪಿಸಿ ಕಪ್ಪು ಎಳ್ಳನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಿ.

ಹಾಲಿನಿಂದ ಮಾಡಿದ ಬಿಳಿ ಬಣ್ಣದ ಸಿಹಿಯನ್ನು ಶಿವನಿಗೆ ಅರ್ಪಿಸಿ. ಇದ್ರಿಂದ ಶನಿಯ ಅಶುಭ ಪ್ರಭಾವ ಕಡಿಮೆಯಾಗಲಿದೆ.

ಹಸುವಿನ ತುಪ್ಪದ ದೀಪವನ್ನು ಶಿವಲಿಂಗದ ಮುಂದೆ ಹಚ್ಚಿಡಿ. ಸಾಸಿವೆ ಎಣ್ಣೆಯ ದೀಪವನ್ನು ಶನಿಗೆ ಅರ್ಪಿಸಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...