alex Certify
ಕನ್ನಡ ದುನಿಯಾ       Mobile App
       

Kannada Duniya

ಮರೆತೂ ಧನತೇರಸ ದಿನ ಈ ವಸ್ತುಗಳನ್ನು ಖರೀದಿ ಮಾಡಬೇಡಿ

ಅಕ್ಟೋಬರ್ 17ರಂದು ಧನತೇರಸ ಹಬ್ಬ ಆಚರಿಸಲಾಗ್ತಿದೆ. ನಂತ್ರ ದೀಪಾವಳಿ ಶುರುವಾಗಲಿದೆ. ಧನತೇರಸ ದಿನ ಬಂಗಾರ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ದಿನ ಬಂಗಾರ ಸೇರಿದಂತೆ ಕೆಲ ವಸ್ತುಗಳ ಖರೀದಿ ಮಾಡುವುದ್ರಿಂದ ಅದ್ರ ಸಂಪತ್ತು 13 ಪಟ್ಟು ಹೆಚ್ಚಾಗಲಿದೆ ಎಂದು ನಂಬಲಾಗಿದೆ. ಆದ್ರೆ ಈ ಶುಭ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ಮರೆತೂ ಖರೀದಿ ಮಾಡಬಾರದು.

ಧನತೇರಸದ ದಿನ ಗ್ಲಾಸ್ ವಸ್ತುಗಳನ್ನು ಖರೀದಿ ಮಾಡಬಾರದು. ಗಾಜನ್ನು ರಾಹುವಿಗೆ ಹೋಲಿಸಲಾಗಿದೆ. ರಾಹುವನ್ನು ನೀಚ ಗ್ರಹವೆಂದು ಪರಿಗಣಿಸಲಾಗಿದೆ. ಗಾಜಿನ ವಸ್ತುವನ್ನು ಖರೀದಿ ಮಾಡುವುದ್ರಿಂದ ಈ ದಿನ ಶುಭ ಫಲ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಮರೆತೂ ಈ ದಿನ ಗಾಜಿನ ವಸ್ತುವನ್ನು ಖರೀದಿ ಮಾಡಬೇಡಿ.

ಧನತೇರಸ ದಿನ ಅಲ್ಯೂಮಿನಿಯಂ ವಸ್ತುವನ್ನೂ ಖರೀದಿ ಮಾಡಬಾರದು. ಅಲ್ಯೂಮಿನಿಯಂ ಕೂಡ ರಾಹುವಿಗೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿ ಧನತೇರಸ ದಿನ ಅಲ್ಯೂಮಿನಿಯಂ ವಸ್ತುಗಳನ್ನು ಖರೀದಿ ಮಾಡಬಾರದು.

ಧನತೇರಸ ದಿನ ಅಡುಗೆ ಮನೆಯಲ್ಲಿ ಬಳಸುವ ಚಾಕು, ಮೊನಚಾದ ವಸ್ತುಗಳನ್ನು ಖರೀದಿ ಮಾಡಬಾರದು.

ಚಿನ್ನದ ಆಭರಣದ ಬದಲು ವಜ್ರ ಹಾಗೂ ಬೆಳ್ಳಿ ಆಭರಣವನ್ನು ಖರೀದಿಸುವುದು ಮಂಗಳಕರ. ಚಿನ್ನ ಖರೀದಿ ಮಾಡುವುದಾದಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಖರೀದಿ ಮಾಡಿದ್ರೆ ಪ್ರಯೋಜನ ಹೆಚ್ಚು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...