alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಂದು ಈ ವಸ್ತುಗಳನ್ನು ಗಿಫ್ಟ್ ಮಾಡಬೇಡಿ

2016_10image_11_38_168559117diwaligift-ll

ದೀಪಗಳ ಹಬ್ಬ ದೀಪಾವಳಿ. ಭಾರತದಲ್ಲೊಂದೇ ಅಲ್ಲ ವಿಶ್ವದಾದ್ಯಂತ ದೀಪಾವಳಿ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದಲ್ಲಿ ಮೂರು ದಿನ ದೀಪಾವಳಿ ಆಚರಿಸ್ತಾರೆ. ಲಕ್ಷ್ಮಿ ಪೂಜೆ, ಆಯುಧ ಪೂಜೆ, ಗೋಪೂಜೆ, ನರಕ ಚತುರ್ದಶಿ ಮಹತ್ವ ಪಡೆದಿದೆ.

ಹಬ್ಬದ ದಿನದಂದು ಹೊಸ ಬಟ್ಟೆ ಧರಿಸಿ, ಸಿಹಿ ತಿಂದು ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ದೀಪಾವಳಿಯಂದು ಉಡುಗೊರೆ ನೀಡಿ ಸಂಭ್ರಮಿಸುವವರು ಸಾಕಷ್ಟು ಮಂದಿ. ತಮ್ಮ ಪ್ರೀತಿ ಪಾತ್ರರಿಗೆ ಬಗೆ ಬಗೆಯ ಉಡುಗೊರೆ ನೀಡ್ತಾರೆ.

ಆದ್ರೆ ದೀಪಾವಳಿಯಂದು ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಒಳಿತಲ್ಲ. ಇದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಹಾಗಾಗಿ ಉಡುಗೊರೆ ನೀಡುವಾಗ ಎಚ್ಚರ ವಹಿಸಬೇಕು.

ಗಣೇಶ ಮೂರ್ತಿ ಹಾಗೂ ಲಕ್ಷ್ಮಿ ಮೂರ್ತಿಯನ್ನು ಮನೆಗೆ ತನ್ನಿ. ಆದ್ರೆ ಈ ಮೂರ್ತಿಗಳನ್ನು ಉಡುಗೊರೆಯಾಗಿ ನೀಡಬೇಡಿ.

ಬೆಳ್ಳಿ, ಬಂಗಾರ, ಕಂಚು, ತಾಮ್ರ ಹಾಗೂ ಹಿತ್ತಾಳೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಆದ್ರೆ ಈ ಲೋಹಗಳನ್ನು ಅವಶ್ಯವಾಗಿ ಮನೆಗೆ ತನ್ನಿ.

ಉಕ್ಕು ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನೂ ಉಡುಗೊರೆಯಾಗಿ ನೀಡಿ. ಮನೆಗೆ ತೆಗೆದುಕೊಂಡು ಬರಬೇಡಿ.

ರೇಷ್ಮೆ ಬಟ್ಟೆಯನ್ನು ನಿಮಗಾಗಿ ಖರೀದಿ ಮಾಡಿ. ಗಿಫ್ಟ್ ನೀಡುವುದು ಬೇಡ.

ತೈಲ ಮತ್ತು ಮರದಿಂದ ಮಾಡಿದ ಯಾವುದೇ ವಸ್ತುವನ್ನು ಖರೀದಿ ಮಾಡಬೇಡಿ.

ಕಪ್ಪು ಬಣ್ಣದ ಬಟ್ಟೆ ಅಥವಾ ವಸ್ತುವನ್ನು ಖರೀದಿ ಮಾಡಬೇಡಿ. ಹಾಗೆ ಕಪ್ಪು ಬಣ್ಣದ ವಸ್ತುವನ್ನು ಉಡುಗೊರೆ ನೀಡಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...