alex Certify
ಕನ್ನಡ ದುನಿಯಾ       Mobile App
       

Kannada Duniya

ಕರವಾಚೌತ್ ದಿನ ನಿಮ್ಮ ಪೂಜೆ ಹೀಗಿರಲಿ

ಕಾರ್ತಿಕ ಮಾಸದ ಕೃಷ್ಣ ಪಕ್ಷದಂದು ಕರವಾಚೌತ್ ಆಚರಿಸಲಾಗುತ್ತದೆ. ಕರವಾಚೌತ್ ಮಹಿಳೆಯರ ಜನಪ್ರಿಯ ವೃತವೆಂದ್ರೆ ತಪ್ಪಾಗಲಾರದು. ಸೌಭಾಗ್ಯ, ಪತಿಯ ದೀರ್ಘಾಯಸ್ಸು, ಆರೋಗ್ಯ ವೃದ್ಧಿಗೆ ಪ್ರಾರ್ಥಿಸಿ ಮಹಿಳೆಯರು ವೃತ ಮಾಡ್ತಾರೆ.

ವಾಮನ ಪುರಾಣದಲ್ಲಿ ಕರವಾಚೌತ್ ಬಗ್ಗೆ ವರ್ಣನೆಯಿದೆ. ಬೆಳಿಗ್ಗೆ ಸ್ನಾನ ಮಾಡಿದ ನಂತ್ರ ಮಹಿಳೆಯರು ಪತಿ, ಮಕ್ಕಳು, ಮೊಮ್ಮಕ್ಕಳ ಹೆಸರಿನಲ್ಲಿ ವೃತ ಆರಂಭಿಸಬೇಕು. ಕರವಾಚೌತ್ ನಲ್ಲಿ ಶಿವ, ಪಾರ್ವತಿ, ಕಾರ್ತಿಕೇಯ, ಗಣೇಶನ ಪೂಜೆ ಮಾಡಲಾಗುತ್ತದೆ.

ಸೂರ್ಯಾಸ್ತದ ನಂತ್ರ ಚಂದ್ರನ ದರ್ಶನ ಮಾಡಿದ ಮಹಿಳೆಯರು ನೀರು ಮತ್ತು ಆಹಾರವನ್ನು ಸೇವನೆ ಮಾಡ್ತಾರೆ. ಪೂಜೆ ನಂತ್ರ ತಾಮ್ರ ಅಥವಾ ಮಣ್ಣಿನ ಕರ್ವೆಯಲ್ಲಿ ಉದ್ದಿನ ಬೇಳೆ, ಕುಂಕುಮ, ಬಳೆ, ಹಣ್ಣು, ಹೂ, ಕನ್ನಡಿ, ಕಾಡಿಗೆಯನ್ನಿಟ್ಟು ಬಾಗಿನ ನೀಡಬೇಕು. ಅತ್ತೆಯ ಪಾದಕ್ಕೆ ನಮಸ್ಕರಿಸಿ ಹಣ್ಣು, ಸೌಭಾಗ್ಯವತಿಗೆ ನೀಡುವ ವಸ್ತುಗಳನ್ನು ದಾನ ನೀಡಬೇಕು.

ಹಳದಿ ಮಣ್ಣು ಅಥವಾ ಮರಳಿನ ಶಿವ, ಪಾರ್ವತಿ, ಕಾರ್ತಿಕೇಯ, ಗಣೇಶನ ಮೂರ್ತಿಯನ್ನು ಸ್ಥಾಪನೆ ಮಾಡಿ ಪೂಜೆ ಮಾಡಬೇಕು. ಒಂದು ಕಮಲದ ಹೂ, ಬಟ್ಟೆ ಮತ್ತು ಕರ್ವವನ್ನು ದಕ್ಷಿಣೆ ರೂಪದಲ್ಲಿ ನೀಡಬೇಕು. ಕರವಾಚೌತ್ ಕಥೆಯನ್ನು ಓದಬೇಕು ಅಥವಾ ಕೇಳಬೇಕು.

ಸಂಜೆ ಚಂದ್ರನ ಪೂಜೆ ನಂತ್ರ ಅರ್ಘ್ಯ ಅರ್ಪಿಸಿ. ನಂತ್ರ ಬ್ರಾಹ್ಮಣರಿಗೆ, ಸೌಭಾಗ್ಯವತಿಗೆ ಹಾಗೂ ಪತಿಯ ತಂದೆ-ತಾಯಿಗೆ ಭೋಜನ ನೀಡಿ. ಬ್ರಾಹ್ಮಣರಿಗೆ ದಕ್ಷಿಣೆ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...