alex Certify
ಕನ್ನಡ ದುನಿಯಾ       Mobile App
       

Kannada Duniya

ಜನ್ಮಾಷ್ಠಮಿಯ ರಾತ್ರಿ ಈ ಉಪಾಯ ಮಾಡಿ ಸುಖ-ಸಂಪತ್ತು ಪಡೆಯಿರಿ

ಇಂದು ಎಲ್ಲೆ45d4a8a0-0499-4163-8785-22445c5d86a0ಡೆ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಮನೆ ಮಾಡಿದೆ. ಕೆಲವು ಕಡೆ ನಾಳೆ ಕೃಷ್ಣಜನ್ಮಾಷ್ಠಮಿಯನ್ನು ಆಚರಿಸುತ್ತಿದ್ದಾರೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಠಮಿಯ ಮಧ್ಯರಾತ್ರಿ ಕೃಷ್ಣ ಜನಿಸಿದ್ದಾನೆ. ಈ ಬಾರಿ ಆಗಸ್ಟ್ 14ರ ರಾತ್ರಿ 7.48ಕ್ಕೆ ಅಷ್ಠಮಿ ತಿಥಿ ಶುರುವಾಗಲಿದೆ. ಇದು ಮಂಗಳವಾರ ಸಂಜೆ 5.42ರವರೆಗೆ ಇರಲಿದೆ.

ಕೃಷ್ಣಾಷ್ಠಮಿಯ ದಿನದಂದು ವೃತ ಆಚರಣೆ ಮಾಡುವುದು ಶುಭಕರ. ಆಗಸ್ಟ್ 14ರಂದು ಅನೇಕರು ವೃತ ಮಾಡ್ತಿದ್ದಾರೆ. ಸನ್ಯಾಸಿಗಳು ಹಾಗೂ ವೈಷ್ಣವರು ಆಗಸ್ಟ್ 15ರಂದು ಉಪವಾಸ ವೃತ ಮಾಡ್ತಿದ್ದಾರೆ. ಅಷ್ಠಮಿಯ ರಾತ್ರಿ ಕೃಷ್ಣನನ್ನು ಖುಷಿಪಡಿಸಲು ಭಕ್ತರು ವಿವಿಧ ರೀತಿಯ ಆರಾಧನೆಗಳನ್ನು ಮಾಡ್ತಾರೆ.

ಸಂತಾನ ಪ್ರಾಪ್ತಿಗಾಗಿ ಭಗವಂತ ಕೃಷ್ಣನಿಗೆ ಪಂಚಾಮೃತದ ಅಭಿಷೇಕ ಮಾಡಿ. ನಂತ್ರ ಕೃಷ್ಣನ ಮುಂದೆ ತುಪ್ಪದ ದೀಪ ಹಚ್ಚಬೇಕು.

ಮದುವೆಯಾಗದವರು ಭಗವಂತನಿಗೆ ಪರಿಮಳಯುಕ್ತ ನೀರಿನ ಅಭಿಷೇಕ ಮಾಡಬೇಕು. ನಂತ್ರ ಹಳದಿ ಹೂವನ್ನು ಅರ್ಪಿಸಬೇಕು. ಶೀಘ್ರದಲ್ಲಿಯೇ ಕಂಕಣ ಭಾಗ್ಯ ಕೂಡಿ ಬರಲಿದೆ.

ಸುಖಕರ ವೈವಾಹಿಕ ಜೀವನಕ್ಕಾಗಿ ಹಾಲಿನ ಅಭಿಷೇಕ ಮಾಡಬೇಕು. ನಂತ್ರ ಹಾಲನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು.

ಕೇಸರಿ ನೀರಿನಲ್ಲಿ ಅಭಿಷೇಕ ಮಾಡಿ ಹಳದಿ ಬಣ್ಣದ ವಸ್ತ್ರವನ್ನು ಭಗವಂತನಿಗೆ ಅರ್ಪಿಸುವುದರಿಂದ ಶಿಕ್ಷಣದಲ್ಲಿ ವೃದ್ಧಿ ಕಾಣಬಹುದಾಗಿದೆ.

ಲಕ್ಷ್ಮಿ ಕೃಪೆ ಬಯಸುವವರು ಶ್ರೀಕೃಷ್ಣನಿಗೆ ವಸ್ತ್ರವನ್ನು ಅರ್ಪಿಸಿ. ನಂತ್ರ ಕೊಳಲು,ತುಳಸಿಯನ್ನು ಅರ್ಪಿಸಿ.

ಭಗವಂತ ಕೃಷ್ಣನ ಪೂಜೆಯನ್ನು ಸಂತೋಷದಿಂದ ಮಾಡಬೇಕು. ಮಂತ್ರ ಜಪ ಮಾಡುವಾಗ ತುಳಸಿ ಮಾಲೆ ಅಥವಾ ಶ್ರೀಗಂಧದ ಹಾರವನ್ನು ಬಳಸಬೇಕು. ಮಂತ್ರ ಪಠಿಸಿದ ತಕ್ಷಣ ನೀರನ್ನು ಮುಟ್ಟಬೇಡಿ. ಮಂತ್ರ ಜಪದ ವೇಳೆ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...