alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯತ್ರಿ ಮಹಾ ಮಂತ್ರದ ಮಹಿಮೆ

220px-gayatriದೇವಾನುದೇವತೆಗಳನ್ನು ಪೂಜೆ ಮಾಡುವಾಗ ಮಂತ್ರ ಪಠಣ ಮಾಡ್ತಾರೆ. ಒಂದೊಂದು ದೇವರಿಗೂ ಬೇರೆ ಬೇರೆ ಮಂತ್ರಗಳಿವೆ. ಪ್ರತಿಯೊಂದು ಮಂತ್ರದಲ್ಲೂ ವಿಶೇಷ ಶಕ್ತಿ ಅಡಗಿದೆ.

ಮಂತ್ರದಲ್ಲಿ ಎಲ್ಲ ಸಂಕಷ್ಟ ದೂರ ಮಾಡುವ ಶಕ್ತಿ ಇದೆ. ಪುರಾಣಗಳ ಪ್ರಕಾರ ಶಕ್ತಿ, ಯಶಸ್ಸು, ಇಷ್ಟಸಿದ್ಧಿಗೆ ಶ್ರದ್ಧೆ ಬಹಳ ಅವಶ್ಯಕ. ಶ್ರದ್ಧೆ- ಭಕ್ತಿಯಿಂದ ಯಾವ ದೇವರನ್ನು ನಾವು ಪೂಜೆ ಮಾಡುತ್ತೇವೋ ಆ ದೇವರು ನಮಗೆ ಕೇಳಿದ್ದೆಲ್ಲ ನೀಡ್ತಾನೆ ಎಂಬ ನಂಬಿಕೆ ಇದೆ.

ಮಂತ್ರಗಳಲ್ಲಿ ತಾಯಿ ಗಾಯತ್ರಿ ಮಂತ್ರ ಬಹಳ ಶುಭ. ಗಾಯತ್ರಿ ಮಂತ್ರ ಬಹಳ ಚಮತ್ಕಾರಿ ಹಾಗೂ ಶಕ್ತಿಶಾಲಿಯಾಗಿದೆ. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಶಾರೀರಿಕ ಶಕ್ತಿಗಾಗಿ ಗಾಯತ್ರಿ ಮಂತ್ರ ಸರ್ವಶ್ರೇಷ್ಠವೆಂದು ನಂಬಲಾಗಿದೆ. ವೇದಗಳಲ್ಲಿ ಗಾಯತ್ರಿ ಮಂತ್ರವನ್ನು ಮಹಾ ಮಂತ್ರವೆಂದು ಕರೆಯಲಾಗಿದೆ. ಶರೀರದ ಅನೇಕ ಶಕ್ತಿಗಳನ್ನು ಗಾಯತ್ರಿ ಮಂತ್ರ ಜಾಗೃತಗೊಳಿಸುತ್ತದೆ.

ಗಣೇಶ, ನರಸಿಂಹ, ಸೀತೆ, ರಾಮ, ಹನುಮಂತ, ತುಳಸಿ, ವಿಷ್ಣು, ಕೃಷ್ಣ, ಈಶ್ವರ, ರಾಧೆ ಹೀಗೆ ಹಿಂದೂ ಧರ್ಮದಲ್ಲಿರುವ ಎಲ್ಲ ದೇವರಿಗೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ಇಷ್ಟ ದೇವರ ಗಾಯತ್ರಿ ಮಂತ್ರ ಜಪಿಸುವುದರಿಂದ ವಿಭಿನ್ನ ಫಲ ಲಭ್ಯವಾಗುತ್ತದೆ.

ಶತ್ರಗಳನ್ನು ನಷ್ಟಮಾಡಲು, ಒತ್ತಡವನ್ನು ಕಡಿಮೆ ಮಾಡಲು, ಆಕ್ರಮಣದಿಂದ ರಕ್ಷಣೆ ಪಡೆಯಲು, ಸಬಲತೆಗಾಗಿ, ಧರ್ಮ ಪಾಲನೆ, ವಿನಯ, ಗೌರವ ಪಡೆಯಲು, ಸುಖ ದಾಂಪತ್ಯ, ಶಾಂತಿ, ಯಶಸ್ಸು, ಆರೋಗ್ಯ, ಐಶ್ವರ್ಯ ಹೀಗೆ ಬೇರೆ ಬೇರೆ ಶಕ್ತಿ, ರಕ್ಷಣೆ ಮಡೆಯಲು ಬೇರೆ ಬೇರೆ ದೇವತೆಗಳ ಗಾಯತ್ರಿ ಮಂತ್ರ ಜಪಿಸಬೇಕು. ಪ್ರತಿದಿನ ಗಾಯತ್ರಿ ಮಂತ್ರ ಪಠಣೆಯಿಂದ ಸಾಕಷ್ಟು ಲಾಭವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...