alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.31ರೊಳಗೆ ಮನೆಯಲ್ಲಿರುವ ಈ ವಸ್ತುಗಳನ್ನು ಹೊರ ಹಾಕಿ

2016_12image_14_00_0963042872017money-ll

ಮನೆಯ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮಹತ್ವವಿದೆ. ಅಲಂಕಾರಕ್ಕೆಂದು ತಂದ ವಸ್ತುಗಳು ಕೆಲವೊಮ್ಮೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡಿ ಮನೆಯ ಸುಖ, ಆರ್ಥಿಕ ವೃದ್ಧಿಗೆ ಅಡ್ಡಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಡಿಸೆಂಬರ್ 31 ರೊಳಗೆ ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿ ಹೊಸ ವರ್ಷಕ್ಕೆ ಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ.

ಶಿವನಿಗೆ ಅನೇಕ ರೂಪಗಳಿವೆ. ಅದ್ರಲ್ಲಿ ಅನೇಕ ರೂಪಗಳನ್ನು ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ. ಹಾಗೆ ಶಿವನ ನಟರಾಜನ ಪ್ರತಿಮೆಯನ್ನು ಅಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ನಟರಾಜನ ಮೂರ್ತಿ ಅಥವಾ ಫೋಟೋ ಇದ್ದಲ್ಲಿ ಅದನ್ನು ಹೊರಗೆ ಹಾಕಿ.

ಸೌಂದರ್ಯ, ಪ್ರೀತಿಯ ಸಂಕೇತವೆಂದು ತಾಜ್ ಮಹಲ್ಲನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ರೆ ತಾಜ್ ಮಹಲ್ ಸಮಾಧಿಯಾಗಿದ್ದು, ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಪತಿ-ಪತ್ನಿ ನಡುವೆ ಪ್ರೀತಿ ಹೆಚ್ಚಾಗುವ ಬದಲು ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ.

ಮಾಡರ್ನ್ ಆರ್ಟ್ಸ್ ಹೆಸರಲ್ಲಿ ಸಾಕಷ್ಟು ಫೋಟೋಗಳು ಮಾರುಕಟ್ಟೆಗೆ ಬಂದಿವೆ. ಅದ್ರಲ್ಲಿ ಅಳುವ ಮಕ್ಕಳ ಫೋಟೋ ಕೂಡ ಒಂದು. ಅಳುವ ಮಗುವಿನ ಫೋಟೋ ಮನೆಯಲ್ಲಿರಬಾರದು. ಮಕ್ಕಳು ಅದೃಷ್ಟದ ಸಂಕೇತ. ಆದ್ರೆ ಅಳುವ ಮಕ್ಕಳ ಫೋಟೋ ದುರ್ಭಾಗ್ಯದ ಸಂಕೇತ.

ಮುಳುಗುವ ದೋಣಿ ಚಿತ್ರ ಮನೆಯಲ್ಲಿದ್ದರೆ ಡಿಸೆಂಬರ್ 31 ರೊಳಗೆ ಹೊರಗೆ ಹಾಕಿ. ಇದ್ರಿಂದ ಉನ್ನತಿ ಸಾಧ್ಯವಿಲ್ಲ.

ಮಹಾಭಾರತದ ಯುದ್ಧದ ಫೋಟೋ ನೋಡಲು ಸುಂದರವಾಗಿ ಕಾಣುತ್ತದೆ. ಆದ್ರೆ ಈ ಫೋಟೋ ಮನೆಯಲ್ಲಿರುವುದರಿಂದ ಜಗಳ-ಗಲಾಟೆ ಜಾಸ್ತಿಯಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪರಾಭವಕ್ಕೆ ಕೊಹ್ಲಿ ತಪ್ಪು ನಿರ್ಧಾರ ಕಾರಣವೇ..?

    View Results

    Loading ... Loading ...