alex Certify
ಕನ್ನಡ ದುನಿಯಾ       Mobile App
       

Kannada Duniya

ಹನುಮಾನ್ ಜಯಂತಿ: 9 ವರ್ಷಗಳ ನಂತ್ರ ಕೂಡಿ ಬಂದಿದೆ ಶುಭಯೋಗ

ಮಾರ್ಚ್ 31ರಂದು ಹನುಮಾನ್ ಜಯಂತಿಯನ್ನು ದೇಶದಾದ್ಯಂತ ಆಚರಿಸಲಾಗ್ತಿದೆ. ಈ ದಿನ ಹನುಮಂತನ ಪೂಜೆ ಮಾಡುವುದ್ರಿಂದ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿದೆ. ಹನುಮಂತ ಶ್ರೀರಾಮನ ಪರಮ ಭಕ್ತ. ಹನುಮಂತ ಭಗವಂತ ಶಿವನ 11ನೇ ಅವತಾರವೆಂದು ನಂಬಲಾಗಿದೆ.

ಈ ದಿನ ಪೂಜೆ ಮಾಡುವುದು, ವೃತ ಕೈಗೊಳ್ಳುವುದು ಶುಭವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಸಾಡೇ ಸಾಥ್ ಇರುವ ವ್ಯಕ್ತಿಗಳಿಗೆ ಹನುಮಂತನ ಪೂಜೆಗೆ ಇದು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ.

ಈ ಬಾರಿ ಹನುಮಾನ್ ಜಯಂತಿಯಂದು ವಿಶೇಷ ಮುಹೂರ್ತ ಕೂಡಿ ಬಂದಿದೆ. ಈ ಹಿಂದೆ 2008 ರಲ್ಲಿ ಈ ಶುಭ ಮುಹೂರ್ತ ಬಂದಿತ್ತು. ಹನುಮಾನ್ ಜಯಂತಿ ಶನಿವಾರ ಬಂದಿರುವುದೇ ವಿಶೇಷ. ಸಾಮಾನ್ಯವಾಗಿ ಹನುಮಾನ್ ಜಯಂತಿ ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಆದ್ರೆ 9 ವರ್ಷಗಳ ನಂತ್ರ ಮಾರ್ಚ್ ನಲ್ಲಿಯೇ ಈ ಶುಭಯೋಗ ಕೂಡಿ ಬಂದಿದೆ.

ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಹನುಮಂತ ಖುಷಿಯಾಗಿರಬೇಕೆಂದ್ರೆ ಶನಿಯನ್ನು ಶಾಂತಗೊಳಿಸಬೇಕಾಗುತ್ತದೆ. ಈ ಬಾರಿ ಶನಿವಾರವೇ ಹನುಮಾನ್ ಜಯಂತಿ ಬಂದಿರುವುದ್ರಿಂದ ಶನಿಯನ್ನು ಪ್ರಸನ್ನಗೊಳಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...