alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ರಾಶಿಯವರಿಗಿದೆ ಇಂದು ಅದೃಷ್ಟ? ಯಾರಿಗೆ ಕಾದಿದೆ ದುರಾದೃಷ್ಟ…?

ಮೇಷ :

ನಿಮ್ಮ ಗೌಪ್ಯ ಮಾಹಿತಿಯನ್ನು ನಿಮ್ಮ ಸಂಗಾತಿಯ ಜೊತೆ ಹಂಚಿಕೊಳ್ಳುವ ಮೊದಲು ಯೋಚಿಸಿ. ಅವಳು ಅದನ್ನು ಬೇರೆಯವರಿಗೆ ಹೇಳಬಹುದಾದ್ದರಿಂದ ಸಾಧ್ಯವಾದರೆ ಅದನ್ನು ತಪ್ಪಿಸಲು ಪ್ರಯತ್ನಿಸಿ.

ಒಂದು ಸುಂದರ ನಗುವಿನಿಂದ ನಿಮ್ಮ ಪ್ರೇಮಿಯ ದಿನವನ್ನು ಪ್ರಕಾಶಮಾನವಾಗಿಸಿ. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ನಿಮ್ಮ ಮನಃಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಪ್ರವಾಸಗಳು ಮತ್ತು ಪ್ರಯಾಣಗಳು ಆನಂದ ತರುತ್ತವೆ ಮತ್ತು ಹೆಚ್ಚು ಶಿಕ್ಷಣ ನೀಡುತ್ತವೆ. ನೀವು ಹಿಂದಿನಿಂದಲೂ ಶಾಪಗ್ರಸ್ತವಾಗಿದ್ದೀರೆನ್ನುವ ಭಾವನೆ ಹೊಂದಿದ್ದಲ್ಲಿ, ಇಂದು ನೀವು ಆಶೀರ್ವಾದ ಹೊಂದಿದಂತೆ ಅನಿಸುತ್ತದೆ.

ಅದೃಷ್ಟ ಸಂಖ್ಯೆ : 9

ವೃಷಭ :

ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ. ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ಲಭಿಸುತ್ತವೆ. ಪ್ರೀತಿಯ ಜೀವನ ಇಂದು ನಿಜವಾಗಿಯೂ ಸುಂದರವಾಗಿ ಅರಳುತ್ತದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತೆರೆದಿಡುತ್ತದೆ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ವಿವಾಹಿತ ಜೋಡಿಗಳು ಒಟ್ಟಾಗಿ ವಾಸಿಸುತ್ತಾರೆ, ಆದರೆ ಅದು ಯಾವಾಗಲೂ ಪ್ರಣಯ ಭರಿತವಾಗಿರಲೇಬೇಕೆಂದಿಲ್ಲ. ಆದ್ದರಿಂದ ಇಂದು, ಇದು ನಿಜವಾಗಿಯೂ ಪ್ರಣಯಭರಿತವಾಗಿರುತ್ತದೆ.

ಅದೃಷ್ಟ ಸಂಖ್ಯೆ : 2

ಮಿಥುನ :

ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. ಎಚ್ಚರದಿಂದಿರಿ- ಜನರೊಡನೆ ವ್ಯವಹರಿಸುವಾಗ ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದಿರಿ. ಅನುಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ನಿಮ್ಮ ಸಂಗಾತಿ ಎಲ್ಲ ಜಗಳಗಳನ್ನು ಮರೆತು ನಿಮ್ಮನ್ನು ಪ್ರೀತಿಯಿಂದ ಆಲಂಗಿಸಲು ಬಂದಾಗ, ಜೀವನ ನಿಜವಾಗಿಯೂ ಅದ್ಭುತವಾಗಿರುತ್ತದೆ.

ಅದೃಷ್ಟ ಸಂಖ್ಯೆ : 3

ಕರ್ಕಾಟಕ :

ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ. ಆದ್ದರಿಂದ ನೀವು ಕಷ್ಟಪಟ್ಟು ಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ. ನೀವು ಮಕ್ಕಳೊಡನೆ ಸ್ವಲ್ಪ ಸಮಯ ಕಳೆಯಬೇಕು ಮತ್ತು ಅವರಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು. ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲು ಕಲಿಸಬೇಕು. ಪ್ರೀತಿಯ ಭಾವಪರವಶತೆಯನ್ನು ಅನುಭವಿಸಲು ಯಾರಾದರೂ ದೊರಕಬಹುದು. ಪ್ರಯಾಣ ಇಂದು ನಿಮಗೆ ಹೊಸ ವ್ಯಾಪಾರ ಅವಕಾಶಗಳನ್ನು ತರುತ್ತದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ನಿಮ್ಮ ಪ್ರಚೋದಕ ವೈವಾಹಿಕ ಜೀವನದಲ್ಲಿ ಇಂದು ಒಂದು ಸುಂದರ ಬದಲಾವಣೆಯನ್ನು ನೀವು ಅನುಭವಿಸುತ್ತೀರಿ.

ಅದೃಷ್ಟ ಸಂಖ್ಯೆ : 9

ಸಿಂಹ :

ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ ಹಾಗೂ ಅದು ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಸಂಜೆ ನಿಮ್ಮಮಕ್ಕಳೊಂದಿಗೆ ಸ್ವಲ್ಪ ಆಹ್ಲಾದಕರ ಸಮಯ ಕಳೆಯಿರಿ. ಸಮಯ, ಕೆಲಸ, ಹಣ, ಸ್ನೇಹಿತರು, ಕುಟುಂಬ, ಬಂಧುಗಳು; ಎಲ್ಲವೂ ಒಂದು ಕಡೆ ಮತ್ತು ನಿಮ್ಮ ಸಂಗಾತಿಯ ಜೊತೆ ನೀವು ಇನ್ನೊಂದು ಕಡೆಗಿರುತ್ತೀರಿ.

ಪ್ರಮುಖ ವ್ಯಾಪಾರ ಸಮಾಲೋಚನೆಯ ಬಗ್ಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನೀವು ಇಂದು ಮಾಡುವ ಸ್ವಯಂ ಸೇವೆಯ ಕೆಲಸ ನೀವು ಸಹಾಯ ಮಾಡುವವರಿಗೆ ಮಾತ್ರವಲ್ಲದೇ ನಿಮ್ಮನ್ನು ನೀವೇ ಹೆಚ್ಚು ಸಕಾರಾತ್ಮಕವಾಗಿ ನೋಡಲು ಸಹಾಯ ಮಾಡುತ್ತದೆ. ನೀವು ಇಂದು ನಿಮ್ಮ ಜೀವನ ಸಂಗಾತಿ ನಿಮ್ಮೆಡೆಗೆ ಹೆಚ್ಚು ಕಾಳಜಿಯಿದ್ದಂತೆ ತೋರಬಹುದು.

ಅದೃಷ್ಟ ಸಂಖ್ಯೆ : 2

ಕನ್ಯಾ :

ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ಸಂಬಂಧಿಗಳು ನಿಮ್ಮ ಅತೀ ಉದಾರ ವರ್ತನೆಯ ಅನುಚಿತ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ನಿಮ್ಮನ್ನು ನಿಯಂತ್ರಿಸಿಕೊಳ್ಳದಿದ್ದರೆ ನೀವು ಮೋಸ ಹೋಗಬಹುದು. ಉದಾರತೆ ಸ್ವಲ್ಪ ಮಟ್ಟಿಗೆ ಒಳ್ಳೆಯದಾದರೂ ಅದು ಒಂದು ಮಿತಿ ದಾಟಿದರೆ ಸಮಸ್ಯೆಗಳನ್ನು ಸೃಷ್ಟಿಸಬಹುದೆಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ಏಕಪಕ್ಷೀಯ ವ್ಯಾಮೋಹ ಇಂದು ಹಾನಿಕಾರಕವೆಂದು ಸಾಬೀತಾಗುತ್ತದೆ. ಸ್ವಾಭಿಮಾನ ನಿರ್ಧಾರಕ್ಕೆ ಅಡ್ಡಿಪಡಿಸಲು ಬಿಡಬೇಡಿ. ನಿಮ್ಮ ಕೈಕೆಳಗಿನವರು ಏನು ಹೇಳುತ್ತಾರೆಂದು ಕೇಳಿ. ನಿಮ್ಮ ಆಯಸ್ಕಾಂತೀಯ- ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ನಿಮ್ಮನ್ನು ಪ್ರಸಿದ್ಧರನ್ನಾಗಿಸುತ್ತದೆ. ಇಂದು ನಿಮ್ಮ ವೈವಾಹಿಕ ಜೀವನ ಅಂತರಕ್ಕಾಗಿ ಹಂಬಲಿಸುತ್ತದೆ.

ಅದೃಷ್ಟ ಸಂಖ್ಯೆ : 3

ತುಲಾ :

ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ – ನಿಮ್ಮನ್ನು ಅಸಂತುಷ್ಟಗೊಳಿಸುವ ಬಹಳಷ್ಟು ಜನರಿರುತ್ತಾರೆ. ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧ ಯಾರಾದರೊಬ್ಬರ ಹಸ್ತಕ್ಷೇಪದಿಂದ ಹಾಳಾಗಬಹುದು. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ನಿಮ್ಮ ನೋಟ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಮಾಡಿದ ಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ಒಬ್ಬ ಅಪರಿಚಿತರು ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಸಿಡುಕಿಗೆ ಕಾರಣವಾಗಬಹುದು.

ಅದೃಷ್ಟ ಸಂಖ್ಯೆ : 3

ವೃಶ್ಚಿಕ :

ಮನೆಯ ಸುಧಾರಣೆಯ ಯೋಜನೆಗಳನ್ನು ಪರಿಗಣಿಸಬೇಕು. ನಿಮ್ಮಸಂಬಂಧದ ಆ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ನಿಮಗೆ ಇತ್ತೀಚಿನ ತಂತ್ರಜ್ಞಾನಗಳನ್ನು ಮತ್ತು ಕೌಶಲ್ಯಗಳನ್ನು ಕಲಿಯಲು ಸಹಾಯವಾಗುವ ಅಲ್ಪಾವಧಿ ಕಾರ್ಯಕ್ರಮಗಳಿಗೆ ದಾಖಲಾಗಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನಿಮ್ಮ ಸಂಗಾತಿ ನಿಮ್ಮನ್ನು ನಿರಾಸೆಗೊಳಿಸುತ್ತಾರೆ ಮತ್ತು ಇದು ನೀವು ಮದುವೆಯನ್ನು ಮುರಿಯಲು ಪ್ರೇರೇಪಿಸಬಹುದು.

ಅದೃಷ್ಟ ಸಂಖ್ಯೆ : 4

ಧನಸ್ಸು :

ಸೋದರಿಯ ಪ್ರೀತಿ ನಿಮ್ಮನ್ನು ಉತ್ತೇಜಿಸುತ್ತದೆ. ಅದರೆ ನೀವು ಚಿಕ್ಕ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳಬಾರದು. ಏಕೆಂದರೆ, ಅದು ನಿಮ್ಮ ಆಸಕ್ತಿಗಳನ್ನು ಹಾಳು ಮಾಡುತ್ತದೆ. ನೀವು ಜನಪ್ರಿಯರಾಗಿರುತ್ತೀರಿ ಮತ್ತು ಸುಲಭವಾಗಿ ವಿರುದ್ಧ ಲಿಂಗದ ಸದಸ್ಯರ ಸೆಳೆಯುತ್ತೀರಿ. ನೀವು ಇಂದು ಪಡೆದ ಹೆಚ್ಚುವರಿ ಜ್ಞಾನವು ಸಮಕಾಲೀನರೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತದೆ. ಒಳ್ಳೆಯ ದಿನ ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ. ನೀವು ಇಂದು ನಿಮ್ಮ ಸಂಗಾತಿಯ ಒಂದು ಭಾವಪೂರ್ಣ ಚರ್ಚೆಯನ್ನು ಹೊಂದುತ್ತೀರಿ.

ಅದೃಷ್ಟ ಸಂಖ್ಯೆ : 1

ಮಕರ :

ಒಬ್ಬ ದೂರದ ಸಂಬಂಧಿಯಿಂದ ಒಂದು ಅನಿರೀಕ್ಷಿತ ಸಂದೇಶ ಇಡೀ ಕುಟುಂಬಕ್ಕೆ ಸಂಭ್ರಮ ತರುತ್ತದೆ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ- ನೀವು ಕಾಯ್ದುಕೊಳ್ಳಲು ಕಷ್ಟವಾಗುವ ಭರವಸೆಯನ್ನು ನೀಡಬೇಡಿ. ವೃತ್ತಿಪರ ಗುರಿಗಳನ್ನು ಸಾಧಿಸಲು ನಿಮ್ಮ ಚೈತನ್ಯವನ್ನು ಹೊಂದಿಸಲು ಇದು ಸರಿಯಾದ ಸಮಯ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ಇಂದು ನೀವು ಮತ್ತು ನಿಮ್ಮ ಸಂಗಾತಿ ಪ್ರೀತಿಗೆ ಸಾಕಷ್ಟು ಸಮಯ ಪಡೆಯುತ್ತೀರೆಂದು ತೋರುತ್ತಿದೆ.

ಅದೃಷ್ಟ ಸಂಖ್ಯೆ : 1

ಕುಂಭ :

ಸಂಬಂಧಿಗಳು-ಸ್ನೇಹಿತರು ಒಂದು ಅದ್ಭುತ ಸಂಜೆಗಾಗಿ ಬರುತ್ತಾರೆ. ನೀವು ವಾಸ್ತವಾಂಶಗಳನ್ನು ಎದುರಿಸುತ್ತಿದ್ದ ಹಾಗೆ ಪ್ರೀತಿಪಾತ್ರರನ್ನು ಮರೆಯ ಬೇಕಾಗುತ್ತದೆ. ನೀವು ಒಂದು ತಂಡವನ್ನು ಒಟ್ಟಾಗಿಸಲು ಹಾಗೂ ಒಂದು ಸಂಘದ ಗುರಿಯನ್ನು ತಲುಪಲು ಕೆಲಸ ಮಾಡಲು ಪ್ರಬಲ ಸ್ಥಾನದಲ್ಲಿರುತ್ತೀರಿ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ – ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ಸಂಬಂಧಿಕರಿಂದಾಗಿ ವ್ಯಾಜ್ಯವುಂಟಾಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ ಎಲ್ಲವೂ ಸುಂದರವಾಗಿಯೇ ಕೊನೆಗೊಳ್ಳುತ್ತದೆ.

ಅದೃಷ್ಟ ಸಂಖ್ಯೆ : 8

ಮೀನ :

ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ನಿಮ್ಮ ಅತಿಯಾದ ಜೀವನ ಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು. ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ಯಾರಿಗಾದರೂ ಅವರ ಪ್ರೀತಿ ಯಶಸ್ವಿಯಾಗುವುದನ್ನು ಸ್ವತಃ ದೃಶ್ಯೀಕರಿಸಲು ಸಹಾಯ ಮಾಡಿ. ನೀವು ಪ್ರಮುಖ ಭೂಮಿ ಒಪ್ಪಂದಗಳನ್ನು ಮಾಡಲು ಹಾಗೂ ಮನರಂಜನಾ ಯೋಜನೆಗಳಿಗಾಗಿ ಅನೇಕರನ್ನು ಸಂಘಟಿಸುವ ಒಂದು ಸ್ಥಾನದಲ್ಲಿರುತ್ತೀರಿ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ಇಂದು, ನೀವು ನಿಮ್ಮ ಸಂಗಾತಿಯ ಪ್ರೀತಿ ಜೀವನದ ನೋವುಗಳನ್ನು ಮರೆಸುವುದನ್ನು ಅನುಭವಿಸುತ್ತೀರಿ.

ಅದೃಷ್ಟ ಸಂಖ್ಯೆ: 6

-ಅನಂತ್ ಪ್ರಸಾದ್ ಶರ್ಮಾ, 9845626805

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...