alex Certify
ಕನ್ನಡ ದುನಿಯಾ       Mobile App
       

Kannada Duniya

ರಾಶಿಗನುಗುಣವಾಗಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ್ರೆ ಬದಲಾಗುತ್ತೆ ಅದೃಷ್ಟ

ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ಇಲ್ಲಿ ಎಲ್ಲ ಧರ್ಮದ, ಜಾತಿಯ ಜನರಿದ್ದಾರೆ. ಎಲ್ಲರೂ ಒಟ್ಟಾಗಿ ಎಲ್ಲ ಧರ್ಮದ ಹಬ್ಬವನ್ನು ಆಚರಿಸ್ತಾರೆ. ಕ್ರಿಸ್ಮಸ್ ಕೂಡ ಎಲ್ಲರೂ ಒಂದಾಗಿ ಆಚರಿಸುವ ಹಬ್ಬಗಳಲ್ಲಿ ಒಂದು. ಜಾತಿ, ಧರ್ಮ ಯಾವುದೇ ಇರಲಿ ಅನೇಕರು ಮನೆಯಲ್ಲಿ ಕ್ರಿಸ್ಮಸ್ ಟ್ರೀ ತಂದು ಅದಕ್ಕೆ ಅಲಂಕಾರ ಮಾಡ್ತಾರೆ.

ಭಾರತದ ಜ್ಯೋತಿಷ್ಯ ಶಾಸ್ತ್ರದ ಕೆಲ ನಿಯಮಗಳನ್ನು ಕ್ರಿಸ್ಮಸ್ ಟ್ರೀಗೆ ಅಲಂಕಾರ ಮಾಡುವ ವೇಳೆ ನೀವು ಅನುಸರಿಸಿದ್ರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ. ರಾಶಿಗನುಗುಣವಾಗಿ ಯಾವ ರಾಶಿಯವರು ಹೀಗೆ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಬೇಕೆಂಬ ವಿವರ ಇಲ್ಲಿದೆ.

ಮೇಷ ರಾಶಿಗೆ ಸೇರಿದವರು ಕಿತ್ತಳೆ ಬಣ್ಣದ ಲೈಟ್ಸ್ ಹಾಗೂ ಅಲಂಕಾರಿಕ ವಸ್ತುಗಳಿಂದ ಕ್ರಿಸ್ಮಸ್ ಟ್ರೀಯನ್ನು ಅಲಂಕರಿಸಬೇಕು.

ವೃಷಭ ರಾಶಿಯವರ ಹೊಸ ವರ್ಷ ಸಾಕಷ್ಟು ಹೊಸದನ್ನು ನೀಡಲಿದೆ. ಈ ರಾಶಿಯವರು ಬಿಳಿ ಬಣ್ಣದ ವಸ್ತು ಬಳಸಿ ಕ್ರಿಸ್ಮಸ್ ಟ್ರೀಯನ್ನು ಅಲಂಕರಿಸಬೇಕು.

ಮಿಥುನ ರಾಶಿಯವರು ನಿಯಾನ್ ಹಾಳೆಯಲ್ಲಿ ಕ್ರಿಸ್ಮಸ್ ಟ್ರೀ ತಯಾರಿಸಿ ಮನೆಯಲ್ಲಿಡಬೇಕು. ಇದು ನಿಮಗೆ ಉತ್ತಮ ಫಲ ನೀಡಲಿದೆ.

ಕರ್ಕ ರಾಶಿಯವರಿಗೆ ಹೊಸ ವರ್ಷ ದೊಡ್ಡ ಖುಷಿ ನೀಡಲಿದೆ. ಕ್ರಿಸ್ಮಸ್ ಟ್ರೀ ಬಗ್ಗೆ ಹೇಳುವುದಾದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಿ ಮನೆಗೆ ತನ್ನಿ.

ಸಿಂಹ ರಾಶಿಯವರು ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಲು ಹಳದಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು.

ಕನ್ಯಾ ರಾಶಿಯವರು ಹಸಿರು ಅಥವಾ ಗುಲಾಬಿ ಬಣ್ಣದಲ್ಲಿ ಅಲಂಕಾರ ಮಾಡಿ.

ತುಲಾ ರಾಶಿಯವರಿಗೊಂದು ಆಯ್ಕೆಯಿದೆ. ಅವರು ತಮಗಿಷ್ಟವಾದ ಬಣ್ಣವನ್ನು ಆಯ್ಕೆ ಮಾಡಿಕೊಂಡು ತಮಗಿಷ್ಟ ಬಂದಂತೆ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಬಹುದು. ಮುಂದಿನ ವರ್ಷ ಅವರ ಪ್ರಕಾರವೇ ಅವರು ಬದುಕಲಿದ್ದಾರೆ.

ವೃಶ್ಚಿಕ ರಾಶಿಯವರು ಕಿತ್ತಳೆ ಹಾಗೂ ಬಂಗಾರದ ಬಣ್ಣದ ಸಣ್ಣ ಸಣ್ಣ ಗ್ಲಾಸುಗಳನ್ನು ಬಳಸಿ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಿ.

ಧನು ರಾಶಿಯವರ ಮುಂದಿನ ವರ್ಷ ಸೃಜನಾತ್ಮಕವಾಗಿರುತ್ತದೆ. ಹಾಗಾಗಿ ಕ್ರಿಸ್ಮಸ್ ಟ್ರೀಯನ್ನು ಸೃಜನಾತ್ಮಕವಾಗಿ ಅಲಂಕರಿಸಿ.

ಮಕರ ರಾಶಿ ಜಾತಕದವರು ಪ್ರಕಾಶಮಾನವಾದ ವಸ್ತುಗಳನ್ನು ಬಳಸಿ ಅಲಂಕಾರ ಮಾಡಿ.

ಕುಂಭ ರಾಶಿಯವರು ಚಾಕಲೇಟ್ ನಿಂದ ಕ್ರಿಸ್ಮಸ್ ಟ್ರೀಯನ್ನು ಅಲಂಕರಿಸಬೇಕು. ನಂತ್ರ ಅದನ್ನು ಬಡ ಮಕ್ಕಳಿಗೆ ನೀಡಬೇಕು.

ಮೀನ ರಾಶಿಯವರು ಸಣ್ಣ ಸಣ್ಣ ಉಡುಗೊರೆ ಪಟ್ಟಣವನ್ನು ತಯಾರಿಸಿ ಕ್ರಿಸ್ಮಸ್ ಟ್ರೀ ಅಲಂಕರಿಸಿ. ನಂತ್ರ ಅದನ್ನು ಮಕ್ಕಳಿಗೆ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...