alex Certify
ಕನ್ನಡ ದುನಿಯಾ       Mobile App
       

Kannada Duniya

ಚಾತುರ್ಮಾಸದಲ್ಲಿ ಅಪ್ಪಿತಪ್ಪಿಯೂ ಈ ಆಹಾರ ಸೇವನೆ ಮಾಡಬೇಡಿ

ಜುಲೈ 23 ರಿಂದ ಚಾತುರ್ಮಾಸ ಶುರುವಾಗ್ತಿದೆ. ಚಾತುರ್ಮಾಸವೆಂದ್ರೆ ನಾಲ್ಕು ತಿಂಗಳ ಕಾಲ ದೇವರು ವಿಶ್ರಾಂತಿ ಪಡೆಯುತ್ತಾನೆಂದು ಅರ್ಥ. ಕಾರ್ತಿಕ ಶುಕ್ಲ ಏಕಾದಶಿಯಂದು ವಿಷ್ಣು ಏಳುತ್ತಾನೆಂಬ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿ ಈ ನಾಲ್ಕು ತಿಂಗಳಿಗೆ ಬಹಳ ಮಹತ್ವವಿದೆ.

ಭಗವಂತ ವಿಶ್ರಾಂತಿ ಪಡೆಯುವುದ್ರಿಂದ ಕೆಟ್ಟ ಆತ್ಮಗಳು ಸಕ್ರಿಯವಾಗುತ್ತವೆ. ಹಾಗಾಗಿಯೇ ಶಾಸ್ತ್ರದಲ್ಲಿ ಈ ನಾಲ್ಕು ತಿಂಗಳು ಹೆಚ್ಚಿನ ಪೂಜೆ-ಪುನಸ್ಕಾರ ಮಾಡಬೇಕೆಂದು ಹೇಳಲಾಗಿದೆ. ಆರೋಗ್ಯದ ವಿಚಾರದಲ್ಲಿಯೂ ಈ ನಾಲ್ಕು ತಿಂಗಳು ಹೆಚ್ಚು ಮಹತ್ವ ಪಡೆಯುತ್ತದೆ. ಮಳೆಗಾಲವಿರುವ ಕಾರಣ ಧರಣಿ ರೂಪ ಬದಲಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಈ ಕಾಲದಲ್ಲಿ ಗಡ್ಡೆ, ಬದನೆ, ಹುಣಸೇಹಣ್ಣು, ಅಲಸಂದೆ, ಉಪ್ಪಿನಕಾಯಿ, ಕಲ್ಲಂಗಡಿ, ಅವರೆಕಾಳು, ಮಾಂಸ, ಹಾಲುಗುಂಬಳ, ಬೋರೇಹಣ್ಣು, ನೆಲ್ಲಿಕಾಯಿ, ಈರುಳ್ಳಿ, ಬೆಳ್ಳುಳ್ಳಿ ತಿನ್ನಬಾರದು ಎನ್ನಲಾಗಿದೆ. ಎಣ್ಣೆ, ಮೊಸರಿನ ಜೊತೆ ಅನ್ನ, ಬೆಲ್ಲವನ್ನು ಸೇವನೆ ಮಾಡಬಾರದು.

ವಿಷ್ಣು ಕ್ಷೀರ ಸಾಗರದಲ್ಲಿ ವಿಶ್ರಾಂತಿ ಪಡೆಯುತ್ತಾನೆ. ತಾಯಿ ಲಕ್ಷ್ಮಿ ನಿರಂತರ ಸೇವೆ ಮಾಡ್ತಾಳೆ. ತಾಯಿ ಲಕ್ಷ್ಮಿ ಕೃಪೆಗೆ ಪಾತ್ರವಾಗಲು ಭಗವಂತ ವಿಷ್ಣುವಿನ ಜಪ ಮಾಡಬೇಕು.

ಚಾತುರ್ಮಾಸದಲ್ಲಿ ಮಂಚದ ಮೇಲೆ ಮಲಗಬಾರದು. ಸ್ತ್ರೀಸಂಗದಿಂದ ದೂರವಿರಬೇಕು. ಪರಾನ್ನ ಸೇವನೆ ಮಾಡಬಾರದು. ಚಾತುರ್ಮಾಸದಲ್ಲಿ ಸಾಧು-ಸಂತರು ಕೂದಲು ಕತ್ತರಿಸಬಾರದೆಂಬ ನಂಬಿಕೆಯಿದೆ. ನಾಲ್ಕು ತಿಂಗಳು ಅಥವಾ ಕನಿಷ್ಟ 2 ತಿಂಗಳು ಒಂದೇ ಸ್ಥಳದಲ್ಲಿರಬೇಕೆಂಬ ನಂಬಿಕೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...