alex Certify
ಕನ್ನಡ ದುನಿಯಾ       Mobile App
       

Kannada Duniya

ದ್ವಾದಶ ರಾಶಿಗಳ ಮೇಲೆ ಚಂದ್ರಗ್ರಹಣದ ಪ್ರಭಾವ

2018ರ ಮೊದಲ ಚಂದ್ರಗ್ರಹಣ ಜನವರಿ 31ರಂದು ಸಂಭವಿಸಲಿದೆ. ಮಾಘ ಶುಕ್ಲ ಪೂರ್ಣಿಮೆಯಂದು ಸಂಭವಿಸುವ ಈ ಗ್ರಹಣ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಬಹುತೇಕ ರಾಶಿಗಳಿಗೆ ಈ ಗ್ರಹಣದಿಂದ ನಷ್ಟವುಂಟಾಗಲಿದೆ.

ಮೇಷ : ಧನ ಲಾಭ ಹಾಗೂ ಉನ್ನತಿ ಸಿಗಲಿದೆ. ಕೌಟುಂಬಿಕ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ.

ವೃಷಭ : ಸಹೋದರಿಯರಿಗೆ ಕಷ್ಟವಾಗುವ ಸಾಧ್ಯತೆಯಿದೆ. ಭಾಗ್ಯ ಸಿಗುವುದು ಬಹಳ ಕಷ್ಟ. ಸಹೋದರ ಸಂಬಂಧಿಯಿಂದ ಮೋಸವಾಗುವ ಸಾಧ್ಯತೆಯಿದೆ.

ಮಿಥುನ : ಧನ ಹಾಗೂ ಕೌಟುಂಬಿಕ ಸಮಸ್ಯೆ ಕಾಡಬಹುದು. ಶಿಕ್ಷಣದಲ್ಲಿ, ವ್ಯವಹಾರದಲ್ಲಿ ಹಾಗೂ ಅನಾರೋಗ್ಯ ಸಮಸ್ಯೆಗೆ ತುತ್ತಾಗುವ ಸಂಭವವಿದೆ.

ಕರ್ಕ: ಅಪಘಾತವಾಗುವ ಸಾಧ್ಯತೆಯಿದೆ. ಎಚ್ಚರಿಕೆಯಿಂದಿರಿ. ಅನಾರೋಗ್ಯ, ಅಪಮಾನ ಎದುರಾಗಬಹುದು.

ಸಿಂಹ : ಯಾತ್ರೆಯ ಯೋಗವಿದೆ. ಯಶಸ್ಸು ನಿಮ್ಮದಾಗಲಿದೆ. ಅನಾವಶ್ಯಕ ಭಯ ಕಾಡಲಿದೆ.

ಕನ್ಯಾ: ಆರ್ಥಿಕ ಲಾಭದ ಸಾಧ್ಯತೆ ಹೆಚ್ಚಿದೆ. ಶಿಕ್ಷಣದಲ್ಲಿ ಸಫಲತೆ ಸಿಗಲಿದೆ.

ತುಲಾ : ಅನಾರೋಗ್ಯ, ಕಷ್ಟ, ಭಯ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ. ತಂದೆಗೆ ಕಷ್ಟವಾಗುವ ಸಾಧ್ಯತೆ ಜಾತಕದಲ್ಲಿದೆ.

ವೃಶ್ಚಿಕ : ಚಂದ್ರ ಗ್ರಹಣ ತಡೆಗೋಡೆಯಾಗಲಿದೆ. ದೊಡ್ಡ ನಷ್ಟ ಹಾಗೂ ಮಾನಸಿಕ ಯಾತನೆ ಕಾಡಲಿದೆ.

ಧನು : ಅಪಮಾನ, ಶಾರೀರಿಕ ಕಷ್ಟ, ನೀರಿನ ಭಯ ಹಾಗೂ ಖರ್ಚಿಗೆ ಚಂದ್ರಗ್ರಹಣ ಕಾರಣವಾಗಲಿದೆ.

ಮಕರ: ಜೀವನ ಸಂಗಾತಿಗೆ ಕಷ್ಟವಾಗುವ ಸಾಧ್ಯತೆಯಿದೆ. ಕೌಟುಂಬಿಕ ಜೀವನದಲ್ಲಿ ಏರುಪೇರಾಗಲಿದೆ.

ಕುಂಭ : ರೋಗ ಹರಡುವ ಸಾಧ್ಯತೆಯಿದೆ. ಅಶಾಂತಿ ಕಾಡಲಿದೆ.

ಮೀನ: ಶಿಕ್ಷೆಯಲ್ಲಿ ತೊಂದರೆ, ಮಾನಸಿಕ ಕಿರುಕುಳ ಕಾಡಲಿದೆ. ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...