alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಮಯದಲ್ಲಿ ಸಂಭವಿಸಲಿದೆ ಚಂದ್ರ ಗ್ರಹಣ : ದೋಷ ನಿವಾರಣೆಗೆ ಹೀಗೆ ಮಾಡಿ

ಮಾಘ ಪೂರ್ಣಿಮೆಯಂದು ಚಂದ್ರನಿಗೆ ವಿಶೇಷ ಪೂಜೆ, ಆರಾಧನೆಗಳು ನಡೆಯುತ್ತವೆ. ಈ ದಿನ ಮಾಡಿದ ದಾನ, ಪುಣ್ಯದ ಕೆಲಸ ಮೋಕ್ಷಕ್ಕೆ ದಾರಿ ಎಂದು ನಂಬಲಾಗಿದೆ. ಈ ಬಾರಿ ಮಾಘ ಪೂರ್ಣಿಮೆ ಜನವರಿ 31ರಂದು ಬಂದಿದೆ. ಆ ದಿನ ಗ್ರಹಣ ಕೂಡ ಹೌದು.

ಕಾಕತಾಳೀಯವೆಂಬಂತೆ ಚಂದ್ರೋಯದ ಕೆಲವೇ ಗಂಟೆಗಳಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಸಂಜೆ 5:17 ಕ್ಕೆ ಸ್ಪರ್ಶ ಕಾಲ   ಆರಂಭವಾಗುತ್ತದೆ. ರಾತ್ರಿ 7:19 ಕ್ಕೆ ಗ್ರಹಣದ ಮಧ್ಯಕಾಲ. ರಾತ್ರಿ 8:41 ಕ್ಕೆ ಗ್ರಹಣ ಮುಕ್ತಾಯವಾಗಲಿದೆ.

ಮಾಘ ಪೂರ್ಣಿಮೆಯಂದು ಚಂದ್ರಗ್ರಹಣವಾಗ್ತಿರುವುದು ವಿಶೇಷ. ಆದ್ರೆ ಇದನ್ನು ಅಪಾಯಕಾರಿ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಸ್ನಾನ ಮಾಡಿ ದಾನ ಮಾಡುವುದು ಪುಣ್ಯ ಪ್ರಾಪ್ತಿಗೆ ಕಾರಣವಾಗುತ್ತದೆ. ಗ್ರಹಣ ಕಾಲಕ್ಕಿಂತ ಗ್ರಹಣ ಮುಗಿದ ನಂತ್ರ ದಾನ ಮಾಡುವುದು ಶ್ರೇಷ್ಠ.

ರಾತ್ರಿ 8.41ಕ್ಕ ಗ್ರಹಣ ಮುಕ್ತಾಯವಾಗಲಿದೆ. ಗ್ರಹಣ ಮುಗಿದ ನಂತ್ರ ಸ್ನಾನ ಮಾಡಿ ದಾನ ಮಾಡುವುದು ಒಳ್ಳೆಯದು. ಗ್ರಹಣ ಆರಂಭಕ್ಕೆ ಮುನ್ನ ಹಾಗೂ ಗ್ರಹಣ ಮುಗಿದ ನಂತ್ರ ಎರಡೂ ಬಾರಿ ಸ್ನಾನ ಮಾಡಬೇಕು. ಮಾಘ ಪೂರ್ಣಿಮೆಯಂದು ಗಂಗಾ ನದಿಯಲ್ಲಿ ಸ್ನಾನ ಮಾಡುವವರು ಇಡೀ ದಿನ ಸ್ನಾನ ಮಾಡಬಹುದಾಗಿದೆ.

ಯಾವ ರಾಶಿಗೆ ಗ್ರಹಣದ ದೋಷ ತಟ್ಟಲಿದೆಯೋ ಆ ರಾಶಿಯವರು ಚಂದ್ರನ ಓಂ ಸೋಮ ಸೋಮಾಯ ನಮಃ ಮಂತ್ರವನ್ನು ಜಪಿಸಿ. ಮಹಾಮೃತ್ಯುಂಜಯ ಮಂತ್ರವನ್ನು ಕೂಡ ಜಪಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...