alex Certify
ಕನ್ನಡ ದುನಿಯಾ       Mobile App
       

Kannada Duniya

ಜು.27ರಂದು ಸಂಭವಿಸಲಿರುವ ಚಂದ್ರಗ್ರಹಣದಂದು ಮಾಡಿ ಈ ದಾನ

ಜುಲೈ 27 ರಂದು ಗುರು ಪೂರ್ಣಿಮೆಯ ದಿನ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಜುಲೈ 27 ರ ರಾತ್ರಿ ಸಂಭವಿಸಲಿರುವ ಚಂದ್ರಗ್ರಹಣ ಸುಮಾರು 1 ಗಂಟೆ 43 ನಿಮಿಷದವರೆಗಿರಲಿದೆ.  ಗ್ರಹಣದ ಆರಂಭ ಜುಲೈ 27ರ ಮಧ್ಯರಾತ್ರಿ 11 ಗಂಟೆ 54 ನಿಮಿಷದಿಂದ ಶುರುವಾಗಲಿದೆ. ಜುಲೈ 28ರ ಬೆಳಗಿನ ಜಾವ 3 ಗಂಟೆ 49 ನಿಮಿಷ ಇದ್ರ ಅಂತ್ಯವಾಗಲಿದೆ.

ಗುರು ಪೂರ್ಣಿಮೆಯಂದು ಗ್ರಹಣ ಬಂದಿರುವುದ್ರಿಂದ ಜಪ, ಪೂಜೆ, ದಾನಕ್ಕೆ ಹೆಚ್ಚಿನ ಮಹತ್ವವಿದೆ. ಗ್ರಹಣದ ಸೂತಕ ತಾಗುವ ಮೊದಲು ಗುರು ಪೂಜೆ, ಗುರು ದಾನ ಮಾಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆ ಬೇರೆ ರಾಶಿಯವರ ಮೇಲೆ ಗ್ರಹಣ ಬೇರೆ ಬೇರೆ ರೀತಿಯ ಪರಿಣಾಮ ಬೀರಲಿದೆ. ಗ್ರಹಣದ ನಂತ್ರ ದಾನ ಮಾಡುವುದ್ರಿಂದ ಎಲ್ಲ ಕಷ್ಟ ದೂರವಾಗಲಿದೆ ಎಂದು ನಂಬಲಾಗಿದೆ.

ಅನೇಕ ದಿನಗಳಿಂದ ಆಸ್ತಿ ವಿವಾದದಲ್ಲಿ ಸಿಲುಕಿದ್ದರೆ ಗ್ರಹಣದ ನಂತ್ರ ಸ್ನಾನ ಮಾಡಿ ಎಳ್ಳಿನಿಂದ ಮಾಡಿದ ಸಿಹಿ ತಿಂಡಿಯನ್ನು ದಾನ ಮಾಡಿ. ಎಳ್ಳಿನ ಉಂಡೆ, ಬರ್ಫಿ, ಎಳ್ಳು ಹಾಗೂ ಶೇಂಗಾ ಉಂಡೆಯನ್ನು ದಾನ ಮಾಡಬಹುದು.

ದೀರ್ಘ ಸಮಯದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಗ್ರಹಣದ ನಂತ್ರ ಮೊದಲು ಸ್ನಾನ ಮಾಡಿ. ನಂತ್ರ ರಸಗುಲ್ಲಾವನ್ನು ದಾನ ಮಾಡಿ.

ಮನೆಯಲ್ಲಿ ಒಬ್ಬರಾದ್ಮೇಲೆ ಒಬ್ಬರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ಗ್ರಹಣದ ನಂತ್ರ ತುಪ್ಪದಿಂದ ತುಂಬಿದ ಪಾತ್ರೆಗೆ ಚಿನ್ನದ ಒಂದು ನಾಣ್ಯ ಹಾಕಿ ದಾನ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...