alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥ ಜಾಗದಲ್ಲಿ ಮನೆ ಕಟ್ಟಿದ್ರೆ ಹೆಚ್ಚುತ್ತೆ ದೌರ್ಭಾಗ್ಯ

ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ವ್ಯಕ್ತಿಯ ಯಶಸ್ಸು ಆತ ವಾಸಿಸುವ ಸ್ಥಳವನ್ನೂ ಅವಲಂಬಿಸಿರುತ್ತದೆ. ಜ್ಯೋತಿಷ್ಯ, ವಾಸ್ತುಶಾಸ್ತ್ರದಲ್ಲೊಂದೇ ಅಲ್ಲ ಆಚಾರ್ಯ ಚಾಣಕ್ಯನ ನೀತಿಯಲ್ಲಿಯೂ ಈ ಬಗ್ಗೆ ಹೇಳಲಾಗಿದೆ. ವ್ಯಕ್ತಿ, ಮನೆ ನಿರ್ಮಾಣ ಮಾಡುವ ವೇಳೆ ಅನೇಕ ವಿಷ್ಯಗಳನ್ನು ಗಮನಿಸಬೇಕಾಗುತ್ತದೆ.

ಪರಸ್ಪರ ಗೌರವ ನೀಡುವುದು ಬಹಳ ಮುಖ್ಯ. ವಾಸವಾಗಿರುವ ಜಾಗದ ಸುತ್ತಮುತ್ತಲ ಜನರು ಗೌರವ ನೀಡುವಂತವರಾಗಿರಬೇಕು. ಗೌರವವಿಲ್ಲದ ಜಾಗದಲ್ಲಿ ವಾಸ ಮಾಡುವುದು ಯೋಗ್ಯವಲ್ಲ. ಯಾವ ವ್ಯಕ್ತಿಯನ್ನು ಕೆಟ್ಟದಾಗಿ ನೋಡಲಾಗುತ್ತದೆಯೋ ಅಂತ ಜಾಗದಲ್ಲಿ ಇರಬಾರದು.

ವಾಸವಾಗುವ ಸ್ಥಳ ಎಷ್ಟೇ ಸುಂದರವಾಗಿರಲಿ ಅಲ್ಲಿ ಉದ್ಯೋಗಕ್ಕೂ ಅವಕಾಶವಿರಬೇಕು. ಉದ್ಯೋಗ ಬಹಳ ಮುಖ್ಯ. ಎಲ್ಲಿ ಉದ್ಯೋಗಕ್ಕೆ ಅವಕಾಶವಿರುವುದಿಲ್ಲವೋ, ಜೀವನ ನಿರ್ವಹಣೆ ಕಷ್ಟವೆನಿಸುತ್ತದೆಯೋ ಆ ಜಾಗದಲ್ಲಿ ವಾಸ ಮಾಡುವುದು ಸೂಕ್ತವಲ್ಲ.

ಬಂಧುಗಳು, ಸ್ನೇಹಿತರು ಬಹಳ ಮುಖ್ಯ. ನಮ್ಮ ಸುತ್ತಮುತ್ತ ಸ್ನೇಹಿತರು, ಬಂಧುಗಳಿದ್ದರೆ ಕಷ್ಟದ ಕಾಲದಲ್ಲಿ ನೆರವಾಗುತ್ತಾರೆ. ಸುಖ-ಸಂತೋಷ ನೆಲೆಸಿರುತ್ತದೆ. ಸುತ್ತಮುತ್ತ ಸ್ನೇಹಿತರು, ಬಂಧುಗಳು ಇಲ್ಲದ ಜಾಗದಲ್ಲಿ ಎಂದೂ ಮನೆ ನಿರ್ಮಾಣ ಮಾಡಬಾರದು.

ವಿದ್ಯಾಭ್ಯಾಸ ಬಹಳ ಮುಖ್ಯ. ವಿದ್ಯಾಭ್ಯಾಸಕ್ಕೆ ಎಲ್ಲ ವ್ಯವಸ್ಥೆಯಿರಬೇಕು. ಶಿಕ್ಷಣಕ್ಕೆ ಯಾವುದೇ ಸೌಲಭ್ಯವಿರದ ಜಾಗದಲ್ಲಿ, ಶಿಕ್ಷಣಕ್ಕೆ ಪ್ರಾಮುಖ್ಯತೆಯಿರದ ಜಾಗದಲ್ಲಿ ವಾಸ ಮಾಡಬಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...