alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಬದಲಿಸಬಹುದು ಸ್ನಾನ ಗೃಹದಲ್ಲಿರುವ ಬಕೆಟ್

ನಮ್ಮ ಪರಿಸರದಲ್ಲಿ ಯಾವಾಗ್ಲೂ ಶಕ್ತಿಯೊಂದರ ಹರಿವಿರುತ್ತದೆ. ಇದು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಸುತ್ತಲಿರುವ ಶಕ್ತಿ ಸಕಾರಾತ್ಮಕ ಶಕ್ತಿ ಬದಲು ನಕಾರಾತ್ಮಕ ಶಕ್ತಿಯಾದ್ರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ, ಆರೋಗ್ಯದಲ್ಲಿ, ದಾಂಪತ್ಯದಲ್ಲಿ, ಶಿಕ್ಷಣ, ವೃತ್ತಿ ಹೀಗೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.

ನಮ್ಮ ಸುತ್ತಮುತ್ತ ಸಕಾರಾತ್ಮಕ ಶಕ್ತಿಯ ಹರಿವಿದ್ದರೆ ಸದಾ ಸುಖ, ಶಾಂತಿ ನಮ್ಮದಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಿಧಾನವನ್ನು ಹೇಳಲಾಗಿದೆ. ಇದಕ್ಕಾಗಿ ನೀವು ಖರ್ಚು ಮಾಡಬೇಕಾದ ಅಗತ್ಯವಿಲ್ಲ. ಮನೆಯ ಒಳಾಂಗಣ ಹಾಗೂ ಹೊರಾಂಗಣದಲ್ಲಿರುವ ವಸ್ತು, ದಿಕ್ಕಿನ ಬಗ್ಗೆ ಗಮನವಿಟ್ರೆ ಸಾಕು.

ಸಾಮಾನ್ಯವಾಗಿ ವಾಸ್ತುಶಾಸ್ತ್ರವನ್ನು ನಂಬುವವರು ಮನೆಯ ಎಲ್ಲ ಭಾಗಗಳನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡ್ತಾರೆ. ಆದ್ರೆ ಬಾತ್ ರೂಂ ಮರೆತು ಬಿಡ್ತಾರೆ. ಮನೆಯಲ್ಲಿ ಬಾತ್ ರೂಂ ಕೂಡ ಮಹತ್ವದ ಸ್ಥಳ. ಬಾತ್ ರೂಂ ವಾಸ್ತುಶಾಸ್ತ್ರದ ಬಗ್ಗೆಯೂ ಗಮನ ನೀಡಬೇಕು. ಯಾವಾಗ್ಲೂ ಬಾತ್ ರೂಂನ ಬಕೆಟ್ ನೀರಿನಿಂದ ತುಂಬಿರಬೇಕು. ಬಕೆಟ್ ನಲ್ಲಿ ನೀರಿದ್ದರೆ ಸಂತೋಷದ ಜೊತೆ ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ.

ಫೆಂಗ್ ಶೂಯಿ ಪ್ರಕಾರ ಮನೆಯ ಬಾತ್ ರೂಂನಲ್ಲಿ ಸದಾ ನೀಲಿ ಬಣ್ಣದ ಬಕೆಟ್ ಇಡಬೇಕು. ನೀಲಿ ಬಣ್ಣದ ಬಕೆಟ್ ನಲ್ಲಿ ಸದಾ ನೀರಿದ್ದರೆ ಮನೆಯಲ್ಲಿ ಹಣದ ಸಮಸ್ಯೆ ಎದುರಾಗುವುದಿಲ್ಲ.

ಸ್ನಾನ ಗೃಹದಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಬಾತ್ ರೂಂಗೆ ಎದುರಾಗಿ ಕನ್ನಡಿ ಹಾಕಬೇಡಿ. ಸ್ನಾನ ಗೃಹದಲ್ಲಿ ಒಂದಕ್ಕಿಂತ ಹೆಚ್ಚು ಕನ್ನಡಿ ಹಾಕಬೇಡಿ.

ಫೆಂಗ್ ಶೂಯಿಯಲ್ಲಿ ಮೂರು ಕಾಲಿನ ಕಪ್ಪೆ ಶುಭವೆಂದು ಪರಿಗಣಿಸಲಾಗಿದೆ. ಆದ್ರೆ ಇದನ್ನು ಅಡುಗೆ ಮನೆ ಮತ್ತು ಸ್ನಾನ ಗೃಹದಲ್ಲಿ ಹಾಕಬಾರದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...