alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಮನ ಅಮವಾಸ್ಯೆಯಂದು ಮಾಡಿ ಈ ಕೆಲಸ

ಆಗಸ್ಟ್ 11ರಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಶನಿವಾರ ಭೀಮನ ಅಮವಾಸ್ಯೆ ಕೂಡ ಬಂದಿದೆ. ಇದನ್ನು ಅಪರೂಪದ ದಿನವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಆಗಸ್ಟ್ 11 ರಂದು ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಹಾಗಾಗಿ ಯಾವುದೇ ಸೂತಕ ತಾಗುವುದಿಲ್ಲ. ಕರ್ನಾಟಕದ ಜನರು ಭೀಮನ ಅಮವಾಸ್ಯೆ ಆಚರಣೆಯಲ್ಲಿ ನಿರತರಾಗಿದ್ದಾರೆ. ಆಷಾಢ ಮಾಸದ ಕೊನೆಯ ದಿನ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆಯಾಗಿ ಆಚರಣೆ ಮಾಡಲಾಗುತ್ತದೆ.

ಮಹಿಳೆಯರು ಆಚರಿಸುವಂತಹ ಹಬ್ಬ ಇದು. ಮದುವೆಯಾದವರು ಗಂಡನ ಆಯಸ್ಸು, ಯಶಸ್ಸಿಗೆ ವೃತ ಮಾಡಿದ್ರೆ, ಅವಿವಾಹಿತರು ಒಳ್ಳೆ ಪತಿಗಾಗಿ ವೃತ ಮಾಡ್ತಾರೆ. ಸಂಪ್ರದಾಯಬದ್ಧವಾಗಿ ಸಂಜೀವಿನ ವೃತ ಮಾಡುವವರು 16 ವರ್ಷಗಳ ಕಾಲ ಈ ವೃತ ಮಾಡಬೇಕಾಗುತ್ತದೆ. ಭೀಮನ ಅಮವಾಸ್ಯೆಯಂದು ಶಿವ-ಪಾರ್ವತಿ ಮದುವೆಯಾಗಿದ್ದಾರೆಂಬ ನಂಬಿಕೆಯಿದೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ.

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಕಲ್ಯಾಣಿಯಲ್ಲಿ ಮೂರು ಬಾರಿ ಮುಳುಗಿ ಎದ್ದರೂ ಯಶಸ್ಸು ನಿಮ್ಮದಾಗುತ್ತದೆ ಎಂದು ನಂಬಲಾಗಿದೆ. ಸ್ನಾನದ ನಂತ್ರ ನಿಮ್ಮ ಮನೆ ದೇವರ ದರ್ಶನ ಮಾಡಬೇಕು. ನಂತ್ರ ವೃತ ಶುರು ಮಾಡಬೇಕು. ಆಷಾಢದಲ್ಲಿ ಗಂಡನನ್ನು ಬಿಟ್ಟು ತವರಿಗೆ ಹೋಗುವ ಪತ್ನಿ ಈ ದಿನ ಮತ್ತೆ ಬಂದು ಗಂಡನ ಪಾದಪೂಜೆ ಮಾಡಿ ಮತ್ತೆ ಜೀವನ ಶುರು ಮಾಡುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...