alex Certify
ಕನ್ನಡ ದುನಿಯಾ       Mobile App
       

Kannada Duniya

ಶಂಖಕ್ಕಿದೆ ಗ್ರಹ ದೋಷ ನಿವಾರಿಸುವ ಶಕ್ತಿ

ಧಾರ್ಮಿಕ ಕಾರ್ಯಕ್ರಮ, ಪೂಜೆ, ಭಜನೆ-ಕೀರ್ತನೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಶಂಖವನ್ನು ಊದಲಾಗುತ್ತದೆ. ಪೂಜೆ ಶುರುವಾಗುವ ಮೊದಲೇ ಮೂರು ಬಾರಿ ಶಂಖ ಊದುವುದ್ರಿಂದ ವಾತಾವರಣದಲ್ಲಿರುವ ಅಶುದ್ಧಿ ದೂರವಾಗುತ್ತದೆ. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಮನಸ್ಸಿಗೆ ಶಾಂತಿಯನ್ನುಂಟು ಮಾಡುತ್ತದೆ.

ಸಮುದ್ರ ಮಂಥನದಲ್ಲಿ ಹೊರಬಂದ 14 ರತ್ನಗಳಲ್ಲಿ ಶಂಖ ಕೂಡ ಒಂದು. ಧಾರ್ಮಿಕ ಹಾಗೂ ಆರೋಗ್ಯದ ವಿಚಾರದಲ್ಲಿ ಶಂಖಕ್ಕೆ ಬಹಳ ಮಹತ್ವವಿದೆ. ಶಂಖ ಊದುವುದ್ರಿಂದ ಆರೋಗ್ಯ ಸರಿಯಾಗಿರುತ್ತದೆ. ರಾತ್ರಿ ಶಂಖದಲ್ಲಿ ಗಂಗಾಜಲವಿಟ್ಟು ಬೆಳಿಗ್ಗೆ ಆ ನೀರು ಕುಡಿಯುವುದ್ರಿಂದ ಕ್ಯಾಲ್ಸಿಯಂ ಕೊರತೆ ಕಡಿಮೆಯಾಗುತ್ತದೆ.

ಶಂಖದ ಭಸ್ಮ ಹೃದಯಾಘಾತ, ರಕ್ತದೊತ್ತಡ, ಅಸ್ತಮಾ, ಮೆದುಳು, ನರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಶಂಖ ಊದುವುದ್ರಿಂದ ಶ್ವಾಸಕೋಶ ಬಲ ಪಡೆಯುತ್ತದೆ. ಶುದ್ಧ ಆಮ್ಲಜನಕ ದೇಹದ ಒಳ ಸೇರುವುದ್ರಿಂದ ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತದೆ.

ದಕ್ಷಿಣ ಮುಖದ ಶಂಖದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ ಧನ ಲಾಭ, ಸುಖ-ಸಮೃದ್ಧಿಗಾಗಿ ಮನೆಯ ಉತ್ತರ-ಪೂರ್ವದಲ್ಲಿ ಶಂಖವನ್ನು ಇಡಬೇಕು. ಪ್ರತಿದಿನ ಧೂಪ-ದೀಪ ತೋರಿಸಿ ಪೂಜೆ ಮಾಡಿ. ಪಿತೃದೋಷ ನಿವಾರಣೆಗೆ ದಕ್ಷಿಣ ಮುಖದ ಶಂಖಕ್ಕೆ ನೀರನ್ನು ಹಾಕಿ ಅಮವಾಸ್ಯೆ ಹಾಗೂ ಶನಿವಾರ ತರ್ಪಣ ಬಿಡಬೇಕು.

ಸೂರ್ಯ ಗ್ರಹದ ದೋಷವುಳ್ಳವರು ಸೂರ್ಯೋದಯದ ವೇಳೆ ಶಂಖದಿಂದ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಚಂದ್ರ ಗ್ರಹ ದೋಷವಿರುವವರು ಶಂಖಕ್ಕೆ ಹಸಿ ಹಾಲನ್ನು ಹಾಕಿ ಸೋಮವಾರ ಶಿವಲಿಂಗಕ್ಕೆ ಅರ್ಪಿಸಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...