alex Certify
ಕನ್ನಡ ದುನಿಯಾ       Mobile App
       

Kannada Duniya

ಜೇಷ್ಠ ಮಾಸದ ಮಂಗಳವಾರದಂದು ಹನುಮಂತನಿಗೆ ವಿಶೇಷ ಆರಾಧನೆ

ಸಂಕಷ್ಟ ಹರಣ ಭಜರಂಗಬಲಿಯ ಪ್ರತಿ ಭಕ್ತರಿಗೆ ಮಂಗಳವಾರ ವಿಶೇಷವಾದದ್ದು. ಅದ್ರಲ್ಲೂ ಜೇಷ್ಠ ಮಾಸದಲ್ಲಿ ಬರುವ ಮಂಗಳವಾರ ಹನುಮಂತನ ಭಕ್ತರಿಗೆ ಮತ್ತಷ್ಟು ವಿಶೇಷವಾದದ್ದು. ಈ ದಿನ ಹನುಮಂತ, ಭಕ್ತರ ಎಲ್ಲ ಆಶಯಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿದೆ.

ಭಗವಂತ ಶ್ರೀರಾಮನನ್ನು ಭಕ್ತ ಹನುಮಂತ ಜೇಷ್ಠ ಮಾಸದ ಮಂಗಳವಾರ ಮೊದಲ ಬಾರಿ ಭೇಟಿಯಾಗಿದ್ದನಂತೆ. ಹಾಗಾಗಿ ಜೇಷ್ಠ ಮಾಸದ ಮಂಗಳವಾರವನ್ನು ವಿಶೇಷ ಮಂಗಳವಾರವೆಂದೇ ಪರಿಗಣಿಸಲಾಗುತ್ತದೆ. ಜೇಷ್ಠ ಮಾಸದ ಎಲ್ಲ ಮಂಗಳವಾರವನ್ನು ಹನುಮಂತನಿಗೆ ಭಕ್ತರು ಮೀಸಲಿಡುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇಷ್ಠ ಮಾಸದ 9 ಮಂಗಳವಾರವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ದೊಡ್ಡ ಮಂಗಳವಾರದ ದಿನ ಬೆಲ್ಲ, ಗೋಧಿ, ಸಿಹಿ ತಿಂಡಿಯನ್ನು ಪ್ರಸಾದವಾಗಿ ನೀಡಬೇಕು. ಈ ದಿನ ಮಾಡಿದ ದಾನಕ್ಕೆ ವಿಶೇಷ ಫಲವಿದೆ ಎಂದು ನಂಬಲಾಗಿದೆ.

ದೊಡ್ಡ ಮಂಗಳವಾರದಂದು ಹನುಮಂತನ ದೇವಸ್ಥಾನದಲ್ಲಿ ಪೂಜೆ-ಪುನಸ್ಕಾರಗಳು ಜೋರಾಗಿರುತ್ತವೆ. ಭಂಡಾರ ಹಾಗೂ ಶರಬತ್ತುಗಳನ್ನು ಭಕ್ತರಿಗೆ ನೀಡಲಾಗುತ್ತದೆ. ಭಕ್ತರು ದೇವಸ್ಥಾನಗಳಿಗೆ ತೆರಳಿ ಹನುಮಂತನ ಆರಾಧನೆ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...