alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಥೂಲಕಾಯಕ್ಕೆ ಈ ಗ್ರಹ ದೋಷ ಕಾರಣ

ನಿಸ್ಸಂಶಯವಾಗಿ ಆಹಾರ ಹಾಗೂ ಜೀವನ ಶೈಲಿಯಿಂದಾಗಿ ಸ್ಥೂಲಕಾಯದ ಸಮಸ್ಯೆ ಕಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ಥೂಲಕಾಯ ಸಮಸ್ಯೆಗೆ ಗುರು ಗ್ರಹ ಕಾರಣ. ಜಾತಕದಲ್ಲಿ ಗುರು ಗ್ರಹದ ದೋಷವಿರುವ ವ್ಯಕ್ತಿ ಕೊಬ್ಬಿನಂಶದ ಆಹಾರ ಸೇವನೆ ಮಾಡ್ತಾನೆ. ಸದಾ ಒತ್ತಡದಲ್ಲಿರುತ್ತಾನೆ. ಇದ್ರಿಂದ ಬೊಜ್ಜು ಕಾಡುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಗುರು ದೋಷವಿರುವ ವ್ಯಕ್ತಿ ಸದಾ ತನ್ನ ಆಹಾರದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಗುರು ಗ್ರಹ ದೇವತೆಗಳ ಗುರು. ಗುರು ಗ್ರಹ ಧರ್ಮ ಹಾಗೂ ವಿಕಾಸದ ಮೂಲ ಎಂದು ನಂಬಲಾಗಿದೆ. ಜಾತಕದಲ್ಲಿ ಗುರು ಗ್ರಹ ಉನ್ನತ ಸ್ಥಾನದಲ್ಲಿದ್ದರೆ ಸಮಾಜದಲ್ಲಿ ವ್ಯಕ್ತಿಗೆ ಉತ್ತಮ ಸ್ಥಾನ, ಸನ್ಮಾನ ಸಿಗುತ್ತದೆ. ಧರ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ಗುರು ಕೆಳ ಸ್ಥಾನದಲ್ಲಿದ್ದರೆ ಸಮಾಜದಲ್ಲಿ ಅಗೌರವ ಪ್ರಾಪ್ತಿಯಾಗುತ್ತದೆ. ಸುಖ-ಶಾಂತಿ ನಾಶವಾಗುತ್ತದೆ. ಗುರು ದೋಷವುಳ್ಳವರು ಕೆಲವೊಂದು ಉಪಾಯಗಳ ಮೂಲಕ ಗುರುವಿನ ಕೃಪೆ ಗಳಿಸಬಹುದಾಗಿದೆ.

ಪ್ರತಿ ಗುರುವಾರ ಶಿವಲಿಂಗಕ್ಕೆ ಅರಿಶಿನ ಕೊಂಬನ್ನು ಅರ್ಪಿಸಿದ್ರೆ ಗುರು ದೋಷ ಕಡಿಮೆಯಾಗುತ್ತದೆ. ಶಿವಲಿಂಗಕ್ಕೆ ಬೇಸನ್ ಲಾಡು ಮತ್ತು ಹಳದಿ ಹೂವನ್ನು ಅರ್ಪಿಸಬೇಕು.

ಪ್ರತಿ ಗುರುವಾರ ಹಳದಿ ಬಣ್ಣದ ಬಟ್ಟೆಯನ್ನು ದಾನ ಮಾಡಿ. ಹಳದಿ ಕರವಸ್ತ್ರವನ್ನೂ ದಾನ ಮಾಡಬಹುದು.

ಗುರುವಾರ ಹಳದಿ ಬಣ್ಣದ ಆಹಾರವನ್ನು ಸೇವನೆ ಮಾಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...