alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ನಿಮಗೆ ಶುಭ ದಿನ. ಮಿತ್ರರೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಲಿದ್ದೀರಿ. ಮನೆಯ ರೂಪಾಂತರ ಮಾಡಲು ಹೊಸ ಯೋಜನೆ ರೂಪಿಸಲಿದ್ದೀರಿ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ.

ವೃಷಭ ರಾಶಿ

ಇಂದು ಹೊಸ ಕಾರ್ಯವನ್ನು ಆಯೋಜಿಸಲಿದ್ದೀರಿ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳ ಸಹಕಾರ ಸಿಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಅಪಖ್ಯಾತಿ ಮೂಡದಂತೆ ಎಚ್ಚರ ವಹಿಸಿ. ಪದೋನ್ನತಿ ಹಾಗೂ ಆರ್ಥಿಕ ಲಾಭದ ಸಾಧ್ಯತೆ ಇದೆ.

ಮಿಥುನ ರಾಶಿ

ಇಂದು ಜಾಗರೂಕರಾಗಿರಿ. ಕುಟುಂಬ ಸದಸ್ಯರೊಂದಿಗೆ ವಾದ-ವಿವಾದ ಬೇಡ. ಇಂದು ನಿಮಗೆ ಲಾಭದಾಯಕ ದಿನ. ಮಧುರ ಮಾತಿನಿಂದಾಗಿಯೇ ಕೆಲಸಗಳು ಸರಳವಾಗಿ ಪೂರ್ಣಗೊಳ್ಳುತ್ತವೆ.

ಕರ್ಕ ರಾಶಿ

ಮೋಜು-ಮಸ್ತಿ, ಮನರಂಜನೆಯಲ್ಲಿ ದಿನ ಕಳೆಯಲಿದ್ದೀರಿ. ಖರ್ಚು ಹೆಚ್ಚಾಗಲಿದ್ದು, ಆರ್ಥಿಕ ಸಂಕಷ್ಟ ಎದುರಾಗಬಹುದು. ಮನೆ ಮತ್ತು ಕಚೇರಿಯಲ್ಲಿ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.

ಸಿಂಹ ರಾಶಿ

ಪತಿ-ಪತ್ನಿ ಮಧ್ಯೆ ಜಗಳವಾಗಬಹುದು, ಇದರಿಂದ ದಾಂಪತ್ಯ ಜೀವನಕ್ಕೆ ತೊಡಕಾಗುತ್ತದೆ. ಆರೋಗ್ಯ ಹದಗೆಡದಂತೆ ಎಚ್ಚರ ವಹಿಸಿ. ನಿಮ್ಮ ಮನಸ್ಸು ಉದಾಸೀನವಾಗಿರುತ್ತದೆ.

ಕನ್ಯಾ ರಾಶಿ

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ಸುಖ-ಶಾಂತಿ ಇರುತ್ತದೆ. ಮನಸ್ಸು ಕೂಡ ಪ್ರಸನ್ನವಾಗಿರುತ್ತದೆ. ಆರ್ಥಿಕ ಲಾಭ ಮತ್ತು ಯಶಸ್ಸು ದೊರೆಯಲಿದೆ. ಸಹೋದ್ಯೋಗಿಗಳ ಸಂಪೂರ್ಣ ಸಹಕಾರವಿರುತ್ತದೆ.

ತುಲಾ ರಾಶಿ

ಆಲಸ್ಯ ಮತ್ತು ಆಯಾಸ ನಿಮ್ಮ ಕೆಲಸದ ವೇಗವನ್ನು ಕಡಿಮೆ ಮಾಡುತ್ತದೆ. ಉದರ ಸಮಸ್ಯೆ ಕಾಡಬಹುದು. ಉದ್ಯೋಗದಲ್ಲಿ ವಿಘ್ನ ಎದುರಾಗಬಹುದು. ಹಿರಿಯ ಅಧಿಕಾರಿಗಳಿಂದ ದೂರವೇ ಇರಿ.

ವೃಶ್ಚಿಕ ರಾಶಿ

ಆರ್ಥಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ದೈಹಿಕ ಮತ್ತು ಮಾನಸಿಕವಾಗಿ ಉತ್ಸಾಹ ಮತ್ತು ಉಲ್ಲಾಸ ತುಂಬಿರುತ್ತದೆ. ಸ್ವಾದಿಷ್ಟ ಭೋಜನ ಮತ್ತು ಉತ್ತಮ ಬಟ್ಟೆ ಧರಿಸುವ ಅವಕಾಶ ದೊರೆಯಲಿದೆ.

ಧನು ರಾಶಿ

ಇಂದು ನಿಮ್ಮ ಮನಸ್ಸು ಚಿಂತೆಯಿಂದ ಮುಕ್ತವಾಗಲಿದೆ. ಉತ್ಸಾಹ ವೃದ್ಧಿಸಲಿದೆ. ಹಿರಿಯರು ಮತ್ತು ಮಿತ್ರರಿಂದ ಲಾಭ ನಿರೀಕ್ಷಿಸಬಹುದು. ಹೊಸ ಕಾರ್ಯ ಆರಂಭಿಸಲು ಉತ್ತಮ ಸಮಯ.

ಮಕರ ರಾಶಿ

ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಎಚ್ಚರಿಕೆಯಿಂದ ಕೆಲಸ ಮಾಡಿ. ಹಣ ಮತ್ತು ಕೀರ್ತಿಗೆ ಹಾನಿಯಾಗಬಹುದು. ಮನೆಯಲ್ಲಿ ಕುಶಲಪೂರ್ವಕ ವಾತಾವರಣವಿರುತ್ತದೆ.

ಕುಂಭ ರಾಶಿ

ವ್ಯಾಪಾರದಲ್ಲಿ ಲಾಭ ಮತ್ತು ಆದಾಯದಲ್ಲಿ ವೃದ್ಧಿಯಾಗಲಿದೆ. ಉತ್ತಮ ಭೋಜನ ಪ್ರಾಪ್ತಿಯಾಗಲಿದೆ. ಮಿತ್ರರೊಂದಿಗೆ ರಮಣೀಯ ಸ್ಥಾನಕ್ಕೆ ತೆರಳಲಿದ್ದೀರಿ. ಶುಭ ಪ್ರಸಂಗ ನಡೆಯಬಹುದು.

ಮೀನ ರಾಶಿ

ಮನಸ್ಸಿನಲ್ಲಿ ಖಿನ್ನತೆ ಮತ್ತು ಭಯ ಮೂಡಲಿದೆ. ಕುಟುಂಬದವರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಮಾತಿನ ಮೇಲೆ ನಿಯಂತ್ರಣ ಇರಲಿ, ಇಲ್ಲವಾದಲ್ಲಿ ಜಗಳ ಉಂಟಾಗಬಹುದು.

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...