alex Certify ‘ಆರ್ಥಿಕ’ ಪರಿಸ್ಥಿತಿ ಸುಧಾರಿಸಬೇಕಾ…..? ಹಾಗಿದ್ರೆ ಈ ಬಗ್ಗೆ ಗಮನವಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರ್ಥಿಕ’ ಪರಿಸ್ಥಿತಿ ಸುಧಾರಿಸಬೇಕಾ…..? ಹಾಗಿದ್ರೆ ಈ ಬಗ್ಗೆ ಗಮನವಿರಲಿ

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನ ಗೃಹದಲ್ಲಿ ಚಂದ್ರ ವಾಸಿಸುತ್ತಾನೆ. ಶೌಚಾಲಯ ರಾಹುವಿನ ವಾಸ ಸ್ಥಳವಾಗಿದೆ. ಸ್ನಾನಗೃಹ ಹಾಗೂ ಶೌಚಾಲಯ ಒಂದೇ ಕಡೆ ಇದ್ದಾಗ ಚಂದ್ರ ಹಾಗೂ ರಾಹು ಒಟ್ಟಿಗೆ ಇರುವುದರಿಂದ ಚಂದ್ರನಿಗೆ ರಾಹುವಿನ ಗ್ರಹಣ ಹಿಡಿದಿರುತ್ತದೆ. ಇದರಿಂದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ನೀರು ವಿಷಯುಕ್ತವಾಗುತ್ತದೆ. ಇದು ಮನುಷ್ಯನ ಮನಸ್ಸು ಹಾಗೂ ದೇಹ ಎರಡರ ಮೇಲೂ ಪರಿಣಾಮ ಬೀರುತ್ತದೆ.

ಚಂದ್ರ ಅಮೃತಕ್ಕೆ ಸಮ, ರಾಹು ವಿಷಕ್ಕೆ ಸಮ. ಎರಡೂ ಒಟ್ಟಿಗಿರುವುದರಿಂದ ಮನುಷ್ಯ ಸಹನೆ ಕಳೆದುಕೊಳ್ಳುತ್ತಾನೆ. ಮನಸ್ಸಿನಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ಜೊತೆಗೆ ಶೌಚಾಲಯದ ಬಾಗಿಲು, ಅಡುಗೆ ಮನೆ ಅಥವಾ ದೇವರ ಮನೆ ಎದುರು ಇರಬಾರದು. ಹೀಗೆ ಅನೇಕ ಸಣ್ಣ ಸಣ್ಣ ವಿಷಯಗಳಿಗೆ ಗಮನ ನೀಡುವುದು ಅವಶ್ಯಕವಾಗುತ್ತದೆ.

ಶೌಚಾಲಯ ಹಾಗೂ ಸ್ನಾನಗೃಹ ಬೇರೆ ಬೇರೆಯಾಗಿದ್ದರೆ, ಸ್ನಾನ ಗೃಹದ ಬಾಗಿಲು ಉತ್ತರ ಅಥವಾ ಪೂರ್ವಕ್ಕಿರಬೇಕು. ಶೌಚಾಲಯ ದಕ್ಷಿಣ ಅಥವಾ ಪಶ್ಚಿಮ ಇಲ್ಲ ದಕ್ಷಿಣ ಮತ್ತು ನೈರುತ್ಯದ ನಡುವೆ ಇರಬೇಕು. ಸ್ನಾನಗೃಹ ಹಾಗೂ ಶೌಚಾಲಯ ಒಂದೇ ಆಗಿದ್ದರೆ ಪಶ್ಚಿಮ, ಉತ್ತರ ಅಥವಾ ವಾಯುವ್ಯಕ್ಕೆ ಇರುವುದು ಒಳ್ಳೆಯದು.

ಶೌಚಾಲಯದಲ್ಲಿ ಕುಳಿತುಕೊಳ್ಳುವಾಗ ನಿಮ್ಮ ಮುಖ ದಕ್ಷಿಣ ಅಥವಾ ಪಶ್ಚಿಮಕ್ಕಿರಬೇಕು. ಪೂರ್ವಭಾಗಕ್ಕೆ ಎಂದಿಗೂ ಇರಬಾರದು. ಇದು ಸೂರ್ಯ ದೇವನಿಗೆ ಅಪಮಾನ ಮಾಡಿದಂತೆ.

ಸ್ನಾನಗೃಹದ ನಲ್ಲಿ ಹಾಗೂ ಶವರ್ ಉತ್ತರ ಅಥವಾ ಪೂರ್ವಕ್ಕಿರಬೇಕು. ಸ್ನಾನ ಮಾಡುವವನ ಮುಖ ಎಂದೂ ಉತ್ತರ, ಪೂರ್ವ ಅಥವಾ ಈಶಾನ್ಯಕ್ಕಿರಬೇಕು.

ನಲ್ಲಿಯಲ್ಲಿ ನೀರು ಸೋರುತ್ತಿದ್ದರೆ ತಕ್ಷಣ ಅದನ್ನು ಬದಲಾಯಿಸಿ. ಆಗಾಗ ನೀರಿನ ಟ್ಯಾಂಕನ್ನು ಕ್ಲೀನ್ ಮಾಡಿಸಿ. ಇಲ್ಲವಾದ್ರೆ ವ್ಯಕ್ತಿ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...