alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

astroಮೇಷ ರಾಶಿ

ಪ್ರಯತ್ನ ಮಾಡಿದ್ರೆ ಇವತ್ತು ನಿಮಗೆ ಯಶಸ್ಸು ಸಿಗುತ್ತದೆ. ಎಲ್ಲರನ್ನೂ ನೀವು ಮನವೊಲಿಸುತ್ತೀರಾ. ಸ್ವಲ್ಪ ಸಮಯ ಏಕಾಂಗಿಯಾಗಿ ಕಳೆಯಿರಿ. ಕಚೇರಿ ಅಥವಾ ಕೆಲಸದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರಬಹುದು. ಅದರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗಲಿದೆ. ಇಂದು ಹೆಚ್ಚು ಭಾವೋದ್ರಿಕ್ತರಾಗಿರುತ್ತೀರಾ, ಮನಸ್ಸಿನಲ್ಲಿ ಅಸಮಾಧಾನ ಹೊಗೆಯಾಡುತ್ತದೆ.

ವೃಷಭ ರಾಶಿ

ಬ್ಯುಸಿಯಾಗಿದ್ರೂ ಇವತ್ತಿನ ದಿನ ನಿಮಗೆ ಒಳ್ಳೆಯದಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭವಾಗಬಹುದು. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಜನರು ಕೂಡ ನಿಮ್ಮ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದುತ್ತಾರೆ. ಸ್ನೇಹಿತರ ಹೊಸ ರೂಪ ನಿಮ್ಮ ಮುಂದೆ ಬರಲಿದೆ. ಕೆಲವರು ವಾದ ಮಾಡಲು ನಿಮ್ಮನ್ನು ಪ್ರೇರೇಪಿಸುವ ಸಾಧ್ಯತೆ ಇದೆ.

ಮಿಥುನ ರಾಶಿ

ಸಕಾರಾತ್ಮಕ ಮತ್ತು ವ್ಯಾವಹಾರಿಕ ವಿಷಯಗಳು ನಿಮಗೆ ಸುಲಭವಾಗಿ ಅರ್ಥವಾಗುತ್ತವೆ. ಮಾನಸಿಕ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡ್ರೆ ಪ್ರಯೋಜನವಾಗುತ್ತದೆ. ಕೆಲಸದ ವೇಳೆ ಸ್ವಲ್ಪ ಆಯಾಸ ಕಾಡಬಹುದು. ಖರೀದಿಗೆ ಇಂದು ಒಳ್ಳೆಯ ದಿನ. ಕೇಳದೇ ಯಾರಿಗೂ ಸಲಹೆ ಕೊಡಲು ಹೋಗಬೇಡಿ. ಮಾತನ್ನು ಸ್ವಲ್ಪ ಕಡಿಮೆ ಮಾಡಿ.

ಕರ್ಕ ರಾಶಿ

ನಿಮ್ಮ ಬದುಕಿನಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ರಹಸ್ಯ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತೀರಾ. ಒಳ್ಳೆಯ ವ್ಯವಹಾರದಿಂದ ಮಾತ್ರ ಯಶಸ್ಸು ಸಿಗುತ್ತದೆ. ಸಂಗಾತಿ ಜೊತೆಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕೆಲಸದ ವಿಷಯ ನಿಮ್ಮನ್ನು ಚಿಂತಿತರನ್ನಾಗಿ ಮಾಡಲಿದೆ.

ಸಿಂಹ ರಾಶಿ

ನೀವು ನಿರೀಕ್ಷಿಸಿರುವ ಉತ್ತಮ ಅವಕಾಶ ಇಂದು ದೊರೆಯುತ್ತದೆ. ಹೊಸ ಯೋಜನೆ ಬಗ್ಗೆ ನಿರ್ಧಾರ ಮಾಡಬಹುದು. ಇವತ್ತು ನಿಮ್ಮ ಮನಸ್ಸಿನಲ್ಲಿ ಪ್ರೇಮ ಮತ್ತು ರೊಮ್ಯಾನ್ಸ್ ಭರಿತ ಭಾವನೆ ತುಂಬಿರುತ್ತದೆ. ಸಂತಾನ ಬಯಸುವವರಿಗೆ ಇದು ಸುದಿನ. ಆದ್ರೆ ಅತಿಯಾಗಿ ಭಾವುಕರಾಗಬೇಡಿ.

ಕನ್ಯಾ ರಾಶಿ

ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ. ಸಂಗಾತಿಯ ಸಲಹೆ ಪಡೆದರೆ ಲಾಭವಾಗುತ್ತದೆ. ಹಣ ಗಳಿಸಲು ಯೋಜನೆ ರೂಪಿಸಿಕೊಳ್ಳಿ. ನೌಕರಿಯಲ್ಲಿ ಒಳ್ಳೆಯ ಆಫರ್ ಸಿಗಬಹುದು. ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಳೆಯ ವಿಷಯಗಳನ್ನು ಮರೆತುಬಿಡುವುದು ಉತ್ತಮ.

ತುಲಾ ರಾಶಿ

ಕಚೇರಿಯಲ್ಲಿ ನಿಮಗೆ ಸಂಪೂರ್ಣ ಸಫಲತೆ ಸಿಗುತ್ತದೆ. ವೃತ್ತಿ ಜೀವನದಲ್ಲಿ ಎದುರಾಗಿರುವ ತೊಡಕುಗಳು ನಿವಾರಣೆಯಾಗುತ್ತವೆ. ಪ್ರಮೋಷನ್, ಗಿಫ್ಟ್ ಸಿಗುವ ಸಾಧ್ಯತೆಯೂ ಇದೆ. ಹೊಸ ಸ್ನೇಹಿತರ ಭೇಟಿಯಾಗಬಹುದು. ಯಾವುದೇ ದೀರ್ಘ ಒಪ್ಪಂದವನ್ನು ಮಾಡಿಕೊಳ್ಳಬೇಡಿ. ಹಣಕಾಸು ವಿಚಾರದಲ್ಲಿ ಅನಪೇಕ್ಷಿತ ಘಟನೆಗಳು ನಡೆಯಬಹುದು.

ವೃಶ್ಚಿಕ ರಾಶಿ

ನಿಮ್ಮಲ್ಲಿ ನೀವು ನಂಬಿಕೆ ಇಟ್ಟು, ಶ್ರಮಪಟ್ಟು ಕೆಲಸ ಮಾಡಿ. ಜನರ ಜೊತೆ ಬೆರೆಯಿರಿ, ಪ್ರಯಾಣ ಮಾಡಿ. ಇದರಿಂದ ಹೊಸ ಹೊಸ ಅನುಭವ ನಿಮ್ಮದಾಗುತ್ತದೆ. ಹಳೆಯ ವಿಷಯ ಮತ್ತು ನೆನಪುಗಳನ್ನು ಮರೆತುಬಿಡಲು ಪ್ರಯತ್ನಿಸಿ. ಕಚೇರಿಯಲ್ಲಿ ತೀವ್ರ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ವ್ಯರ್ಥ ಖರ್ಚನ್ನು ಮಾಡಬೇಡಿ.

ಧನು ರಾಶಿ

ಕಚೇರಿಯಲ್ಲಿ ಹೆಚ್ಚುವರಿ ಜವಾಬ್ಧಾರಿ ಸಿಗಬಹುದು. ಹೊಸ ಕೆಲಸ ಆರಂಭಿಸುವ ಮನಸ್ಸು ಮಾಡುತ್ತೀರಾ. ಇತರರ ಮಾತನ್ನು ಗಮನವಿಟ್ಟು ಕೇಳಿ, ಸಕಾರಾತ್ಮಕವಾಗಿರಿ. ಕಚೇರಿ ಕೆಲಸಗಳಿಗೆ ಎದುರಾಗಿದ್ದ ವಿಘ್ನ ನಿವಾರಣೆಯಾಗಲಿದೆ. ಹಣ, ಸಮಯ, ಸಂಪನ್ಮೂಲದ ವಿಷಯದಲ್ಲಿ ವಿಘ್ನ ಎದುರಾಗುವ ಸಾಧ್ಯತೆ ಇದೆ.

ಮಕರ ರಾಶಿ

ವಿಶಿಷ್ಟ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಇಚ್ಛೆಯಾಗಲಿದೆ. ಸಂಗಾತಿಯಿಂದ ನಿಮಗೆ ಸರ್ಪ್ರೈಸ್ ಕಾದಿದೆ. ಯಾವುದೇ ಸಮಸ್ಯೆಗೂ ಅಂಜದೇ ಧೈರ್ಯವಾಗಿರಿ. ನಿಮ್ಮ ಭರವಸೆಯನ್ನೇ ಕಡಿಮೆ ಮಾಡುವಂತಹ ಘಟನೆ ನಡೆಯಬಹುದು.

ಕುಂಭ ರಾಶಿ

ಇಂದು ಅತ್ಯಂತ ಪ್ರಯೋಗಶೀಲರಾಗಿರುತ್ತೀರಾ. ನಿಮ್ಮಲ್ಲಿರುವ ಆತ್ಮವಿಶ್ವಾಸ ಎಲ್ಲಾ ಅಡಚಣೆಗಳನ್ನೂ ದೂರ ಮಾಡುತ್ತದೆ. ನಿಮ್ಮ ಮನಸ್ಸಿನ ಮಾತನ್ನು ಆಲಿಸಿ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಸುತ್ತಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಜಾಗರೂಕರಾಗಿರಿ. ಯಾರ ಜೊತೆಗೂ ವಾದ-ವಿವಾದ ಬೇಡ.

ಮೀನ ರಾಶಿ

ಧೈರ್ಯ ಮತ್ತು ತಾಳ್ಮೆಯಿಂದ ಮಾಡಿದ ಕೆಲಸದ ಪ್ರತಿಫಲ ನಿಮಗೆ ಸಿಗುತ್ತದೆ. ಹಳೆ ಸ್ನೇಹಿತರನ್ನು ಭೇಟಿಯಾಗೋ ಸಾಧ್ಯತೆ ಇದೆ. ನಿಮ್ಮ ಜವಾಬ್ಧಾರಿ ಪೂರ್ಣಗೊಳ್ಳಲಿದೆ. ಹಣ ಗಳಿಕೆ ನಿಮಗೆ ಅತ್ಯಂತ ಸುಲಭ. ಈ ದಿನ ನಿಮಗೆ ಆನಂದದಾಯಕವಾಗಿರುತ್ತದೆ. ಅನಿರೀಕ್ಷಿತವಾಗಿ ನಡೆಯುವ ಘಟನೆಗಳು ನಿಮಗೆ ಸವಾಲಾಗಿ ಪರಿಣಮಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...