alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಬರವಣಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನಲ್ಲಿ ಒಳ್ಳೆ ಸಾಧನೆ ಮಾಡುತ್ತಾರೆ. ಪ್ರೇಮ-ಪ್ರಣಯದ ವಿಷಯದಲ್ಲೂ ಯಶಸ್ಸು ಸಿಗಲಿದೆ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

ವೃಷಭ ರಾಶಿ

ಸಂಯಮ ಕಳೆದುಕೊಳ್ಳಬೇಡಿ. ಅನೈತಿಕ ಕಾರ್ಯಗಳಲ್ಲಿ ತೊಡಗಬೇಡಿ. ದುರ್ಘಟನೆಯಿಂದ ಬಚಾವ್ ಆಗಿ. ಮೋಜು ಮಸ್ತಿ, ಸುತ್ತಾಟಕ್ಕಾಗಿ ಹೆಚ್ಚು ಹಣ ಖರ್ಚಾಗಲಿದೆ.

ಮಿಥುನ ರಾಶಿ

ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರ ಭೇಟಿ, ಪ್ರವಾಸದ ಆಯೋಜನೆ ಮಾಡಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗವಿದೆ. ಪುತ್ರ ಮತ್ತು ಪತ್ನಿಯಿಂದ ಲಾಭವಾಗಲಿದೆ.

ಕರ್ಕ ರಾಶಿ

ಉದ್ಯೋಗಿಗಳಿಗೆ ಶುಭದಿನ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ.

ಸಿಂಹ ರಾಶಿ

ಕುಟುಂಬ ಮತ್ತು ಕಚೇರಿಯಲ್ಲಿ ಜಗಳವಾಗದಂತೆ ಹೊಂದಾಣಿಕೆಯಿಂದ ವ್ಯವಹರಿಸಿ. ಮಾತಿನ ಮೇಲೆ ನಿಯಂತ್ರಣ ಇಲ್ಲದೇ ಇರುವುದರಿಂದ ವಾದ-ವಿವಾದದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಇಂದು ಹೊಸ ಕಾರ್ಯ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಆತ್ಮೀಯರನ್ನು ಭೇಟಿಯಾಗಿ ಆನಂದವಾಗಿ ಕಾಲ ಕಳೆಯಲಿದ್ದೀರಿ. ಪ್ರತಿಸ್ಪರ್ಧಿಗಳ ವಿರುದ್ಧ ಜಯಶಾಲಿಗಳಾಗುತ್ತೀರಿ.

ತುಲಾ ರಾಶಿ

ಯಾವುದೇ ವ್ಯಕ್ತಿಯೊಂದಿಗೆ ಬೌದ್ಧಿಕ ಚರ್ಚೆ ಅಥವಾ ವಾದ-ವಿವಾದದಲ್ಲಿ ತೊಡಗಬೇಡಿ. ಹೊಸ ಕಾರ್ಯವನ್ನು ಆರಂಭಿಸಬೇಡಿ. ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಣೆಯಾಗಲಿದೆ.

ವೃಶ್ಚಿಕ ರಾಶಿ

ಸಕಾರಾತ್ಮಕ ಮತ್ತು ವ್ಯಾವಹಾರಿಕ ವಿಷಯಗಳು ನಿಮಗೆ ಸುಲಭವಾಗಿ ಅರ್ಥವಾಗುತ್ತವೆ. ಮಾನಸಿಕ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡ್ರೆ ಪ್ರಯೋಜನವಾಗುತ್ತದೆ. ಕೆಲಸದ ವೇಳೆ ಸ್ವಲ್ಪ ಆಯಾಸ ಕಾಡಬಹುದು. ಖರೀದಿಗೆ ಇಂದು ಒಳ್ಳೆಯ ದಿನ. ಕೇಳದೇ ಯಾರಿಗೂ ಸಲಹೆ ಕೊಡಲು ಹೋಗಬೇಡಿ.

ಧನು ರಾಶಿ

ನೀವು ನಿರೀಕ್ಷಿಸಿರುವ ಉತ್ತಮ ಅವಕಾಶ ಇಂದು ದೊರೆಯುತ್ತದೆ. ಹೊಸ ಯೋಜನೆ ಬಗ್ಗೆ ನಿರ್ಧಾರ ಮಾಡಬಹುದು. ಇವತ್ತು ನಿಮ್ಮ ಮನಸ್ಸಿನಲ್ಲಿ ಪ್ರೇಮ ಮತ್ತು ರೊಮ್ಯಾನ್ಸ್ ಭರಿತ ಭಾವನೆ ತುಂಬಿರುತ್ತದೆ. ಸಂತಾನ ಬಯಸುವವರಿಗೆ ಇದು ಸುದಿನ.

ಮಕರ ರಾಶಿ

ಇಂದು ಕೋಪ ಮತ್ತು ಮಾತನ್ನು ನಿಯಂತ್ರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಗಮನವಿರಲಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ಮಾನಸಿಕವಾಗಿ ವ್ಯಗ್ರರಾಗಿರುತ್ತೀರಿ. ಕುಟುಂಬದಲ್ಲಿ ಜಗಳವಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಬೆಳಗ್ಗೆ ಸ್ನೇಹಿತರೊಂದಿಗೆ ಸುತ್ತಾಟ, ಉಪಹಾರ ಮತ್ತು ಮನರಂಜನೆಯಲ್ಲಿ ಕಾಲ ಕಳೆಯುತ್ತೀರಿ. ಪಾಲುದಾರರೊಂದಿಗೂ ಉತ್ತಮ ಬಾಂಧವ್ಯ ಏರ್ಪಡಲಿದೆ. ಮಧ್ಯಾಹ್ನದ ನಂತರ ಕಠಿಣ ಪರಿಸ್ಥಿತಿಗಳು ಎದುರಾಗಬಹುದು.

ಮೀನ ರಾಶಿ

ಇವತ್ತು ನಿಮ್ಮ ಮನಸ್ಸು ಚಿಂತೆಯ ಗೂಡಾಗಲಿದೆ. ಭಾವನೆಗಳ ಪ್ರವಾಹಕ್ಕೆ ಸಿಕ್ಕು ಯಾವುದೇ ಅನೈತಿಕ ಕೆಲಸ ಮಾಡಬೇಡಿ. ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇರಲಿ. ಕಾನೂನಿಗೆ ಸಂಬಂಧಪಟ್ಟ ನಿರ್ಣಯಗಳನ್ನು ದಿಢೀರನೆ ತೆಗೆದುಕೊಳ್ಳಬೇಡಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...