alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ. ಹಿರಿಯ ಅಧಿಕಾರಿಗಳ ನಕಾರಾತ್ಮಕ ಧೋರಣೆಯಿಂದ ನಿಮಗೆ ಕಷ್ಟವಾಗಬಹುದು. ಶಾರೀರಿಕ ಆಲಸ್ಯತನ ಕಾಡಬಹುದು. ಮಕ್ಕಳ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ.

ವೃಷಭ ರಾಶಿ

ಒಂದು ಕೆಲಸವನ್ನು ಆರಂಭಿಸಲು ಪ್ರೇರಣೆ ಸಿಗಲಿದೆ, ಅದನ್ನು ನೀವು ಯಶಸ್ವಿಯಾಗಿ ಆರಂಭಿಸಲಿದ್ದೀರಿ. ಸಮೀಪದ ಸ್ಥಳಕ್ಕೆ ಪ್ರವಾಸ ಹೋಗುವ ಸಾಧ್ಯತೆ ಇದೆ. ಇವತ್ತು ಬೌದ್ಧಿಕ ಮತ್ತು ತಾರ್ಕಿಕ ವಿಚಾರಗಳ ವಿನಿಮಯ ಮಾಡಿಕೊಳ್ಳಲಿದ್ದೀರಿ.

ಮಿಥುನ ರಾಶಿ

ನಿಮ್ಮ ಸೃಜನಶೀಲತೆ ವೃದ್ಧಿಸಲಿದೆ. ಕಲ್ಪನಾಶಕ್ತಿಯಿಂದಾಗಿ ಸಾಹಿತ್ಯ ಕ್ಷೇತ್ರದೆಡೆಗೆ ಆಸಕ್ತಿ ಹೊಂದುತ್ತೀರಾ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಗುರಿ ತಲುಪಲು ಶುಭಾರಂಭ ಮಾಡಿ.

ಕರ್ಕ ರಾಶಿ

ಹಣಕಾಸಿನ ವಹಿವಾಟು ಯಶಸ್ವಿಯಾಗಲಿದೆ. ದೇಶ-ವಿದೇಶಗಳಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ಮನೆಯಲ್ಲೂ ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯಲಿದ್ದೀರಿ. ಧನಲಾಭ ಯೋಗವಿದೆ.

ಸಿಂಹ ರಾಶಿ

ಹೊಸ ಬಟ್ಟೆ ತೊಟ್ಟು ಹೊರಗಡೆ ಹೋಗುವ ಪ್ರಸಂಗ ಎದುರಾಗಲಿದೆ. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಮೂಡದಂತೆ ಎಚ್ಚರ ವಹಿಸಿ. ನಕಾರಾತ್ಮಕ ಭಾವನೆ ಮೂಡಿದರೂ ಅದನ್ನು ಆದಷ್ಟು ಬೇಗ ದೂರಮಾಡಿಕೊಳ್ಳುವುದು ಒಳಿತು.

ಕನ್ಯಾ ರಾಶಿ

ಅಧಿಕಾರಿಗಳ ಅಸಮಾಧಾನವನ್ನು ಸಹಿಸಿಕೊಳ್ಳಬೇಕಾಗಿ ಬರಬಹುದು. ವ್ಯಾಪಾರದಲ್ಲೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಕ್ಕಳ ಬಗ್ಗೆಯೂ ಚಿಂತೆ ಕಾಡಲಿದೆ. ದೂರ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ. ಧಾರ್ಮಿಕ ಯಾತ್ರೆಯ ಯೋಗವೂ ಇದೆ.

ತುಲಾ ರಾಶಿ

ಅನೈತಿಕ ಕಾರ್ಯಗಳಿಂದ ದೂರವಿರಿ. ಹೊಸ ಸಂಬಂಧಕ್ಕೂ ಮುನ್ನ ಯೋಚಿಸಿ. ಖರ್ಚು ಜಾಸ್ತಿಯಾಗುವುದರಿಂದ ಆರ್ಥಿಕ ಸಮಸ್ಯೆ ಎದುರಾಗಲಿದೆ. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಪೂರ್ಣಗೊಳ್ಳುವುದಿಲ್ಲ. ಊಟ-ತಿಂಡಿ ಬಗ್ಗೆ ಹೆಚ್ಚು ಗಮನವಹಿಸಿ.

ವೃಶ್ಚಿಕ ರಾಶಿ

ಉನ್ನತ ಅಧಿಕಾರಿಗಳ ಕೃಪಾದೃಷ್ಟಿಯಿಂದ ಪದೋನ್ನತಿ ದೊರೆಯಲಿದೆ. ವ್ಯಾಪಾರದಲ್ಲೂ ಲಾಭವಾಗಬಹುದು. ಗೃಹಸ್ಥ ಜೀವನದಲ್ಲಿ ಆನಂದಮಯ ವಾತಾವರಣವಿರಲಿದೆ. ಕುಟುಂಬದಲ್ಲಿ ಪ್ರೀತಿ ಸಿಗುತ್ತದೆ.

ಧನು ರಾಶಿ

ವಾದ-ವಿವಾದಗಳಿಂದ ದೂರವಿರುವ ಮೂಲಕ ಮನೆಯ ವಾತಾವರಣ ಹದಗೆಡದಂತೆ ಎಚ್ಚರವಹಿಸಿ. ಧನ ಪ್ರತಿಷ್ಠೆಗೆ ಹಾನಿಯಾಗಬಹುದು. ಮಹಿಳೆಯರ ಜೊತೆಗಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಅತಿಯಾಗಿ ಭಾವುಕರಾಗಬೇಡಿ.

ಮಕರ ರಾಶಿ

ಇವತ್ತಿನ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ಸ್ನೇಹಿತರು ಸಂಬಂಧಿಕರಿಂದ ಉಡುಗೊರೆ ದೊರೆಯಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದ ನೀವು ಕೂಡ ಪ್ರಸನ್ನವಾಗಿರುತ್ತೀರಿ.

ಕುಂಭ ರಾಶಿ

ಬೆಳಗಿನ ಸಮಯ ಹೊಸ ಕೆಲಸ ಆರಂಭಿಸಲು ಶುಭವಾಗಿದೆ. ಇಂದು ಸರ್ಕಾರದಿಂದ ಪ್ರಯೋಜನ ದೊರೆಯುವ ಸಂಭವ ಇದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನಿಮ್ಮ ಅಲೋಚನೆಗಳೂ ಬದಲಾಗಲಿವೆ.

ಮೀನ ರಾಶಿ

ಸಮಾಜದಲ್ಲಿ ಗೌರವ ದೊರೆಯಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮನರಂಜನಾ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ಉತ್ತಮ ಆಹಾರ ಮತ್ತು ಸುಂದರ ವೇಷಭೂಷಣಗಳಿಂದ ಮನಸ್ಸು ಪ್ರಸನ್ನವಾಗಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...