alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಸಾಮಾಜಿಕ ಕಾರ್ಯ ಮತ್ತು ಮಿತ್ರರ ಭೇಟಿಯಲ್ಲಿ ದಿನ ಕಳೆಯಲಿದ್ದೀರಿ. ಸ್ನೇಹಿತರಿಗಾಗಿ ಹಣ ಖರ್ಚು ಮಾಡಬೇಕಾದ ಸಂದರ್ಭ ಬರಬಹುದು. ಮಕ್ಕಳಿಂದ ಶುಭ ಸಮಾಚಾರ ದೊರೆಯುವ ಸಾಧ್ಯತೆ ಇದೆ.

ವೃಷಭ ರಾಶಿ

ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಸರ್ಕಾರದ ನಿರ್ಣಯ ನಿಮ್ಮ ಪರವಾಗಿರಲಿದೆ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಅಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ. ಹಣ ಮತ್ತು ಗೌರವ ದೊರೆಯುತ್ತದೆ.

ಮಿಥುನ ರಾಶಿ

ಇವತ್ತು ಸ್ವಲ್ಪ ಅನಾನುಕೂಲತೆಗಳು ಎದುರಾಗಲಿವೆ. ಅನಾರೋಗ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ತಂದೆಯ ಬಗ್ಗೆ ಚಿಂತೆ ಕಾಡಲಿದೆ.

ಕರ್ಕ ರಾಶಿ

ಇಂದು ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಮೂಡಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅನೈತಿಕ ಕಾರ್ಯ, ವಿಚಾರ ಮತ್ತು ಮಾತುಗಳಿಂದ ದೂರವಿರಿ. ಆರ್ಥಿಕ ತೊಂದರೆ ಎದುರಾಗಬಹುದು.

ಸಿಂಹ ರಾಶಿ

ಇಂದು ಮನರಂಜನೆ ಮತ್ತು ಓಡಾಟದಲ್ಲಿ ಕಾಲ ಕಳೆಯಲಿದ್ದೀರಿ. ಸಾಂಸಾರಿಕ ವಿಷಯಗಳ ಬಗ್ಗೆ ನೀವು ಉದಾಸೀನರಾಗಿರುತ್ತೀರಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಗೌರವಕ್ಕೆ ಕುಂದುಂಟಾಗಬಹುದು.

ಕನ್ಯಾ ರಾಶಿ

ಕುಟುಂಬದಲ್ಲಿ ಆನಂದ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಮನಸ್ಸು ಕೂಡ ಪ್ರಸನ್ನವಾಗಿರುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ಕೆಲಸದಲ್ಲೂ ಯಶಸ್ಸು ಸಿಗಲಿದೆ. ಉದ್ಯಮದಲ್ಲಿ ಪ್ರತಿಸ್ಪರ್ಧಿಗಳಿಂದಾಗಿ ನಷ್ಟ ಉಂಟಾಗಬಹುದು.

ತುಲಾ ರಾಶಿ

ನಿಮ್ಮ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದೀರಿ. ಮಕ್ಕಳ ಪ್ರಗತಿ ಬಗ್ಗೆ ಶುಭ ಸಮಾಚಾರ ದೊರೆಯಲಿದೆ. ಅತ್ಯಧಿಕ ವಿಚಾರಗಳಿಂದ ಮನಸ್ಸು ವಿಚಲಿತವಾಗಬಹುದು. ಉಲ್ಲಾಸ ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ.

ವೃಶ್ಚಿಕ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹದಗೆಡಬಹುದು. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ. ತಾಯಿಯ ಆರೋಗ್ಯದ ಬಗ್ಗೆಯೂ ಆತಂಕ ಉಂಟಾಗುವ ಸಾಧ್ಯತೆ ಇದೆ. ಆಸ್ತಿ, ವಾಹನ ದಸ್ತಾವೇಜುಗಳ ಬಗ್ಗೆ ಜಾಗರೂಕರಾಗಿರಿ.

ಧನು ರಾಶಿ

ಇವತ್ತು ನಿಮ್ಮ ಮನಸ್ಸು ಆಧ್ಯಾತ್ಮದೆಡೆಗೆ ವಾಲುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಮನಸ್ಸು ಕೂಡ ಪ್ರಸನ್ನವಾಗಿರಲಿದೆ. ಚಿಕ್ಕದೊಂದು ಪ್ರಯಾಣ ಕೈಗೊಳ್ಳುವಿರಿ. ಉದ್ಯಮದಲ್ಲಿ ಪ್ರಗತಿಯಾಗಲಿದೆ.

ಮಕರ ರಾಶಿ

ಎಲ್ಲಾ ಸಮಸ್ಯೆಗಳಿಂದಲೂ ಪಾರಾಗಲು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ. ನಕಾರಾತ್ಮಕ ಆಲೋಚನೆಗಳು ಬರದಂತೆ ಎಚ್ಚರಿಕೆ ವಹಿಸಿ.

ಕುಂಭ ರಾಶಿ

ಶಾರೀರಿಕ, ಮಾನಸಿಕ ಮತ್ತು ಆರ್ಥಿಕ ದೃಷ್ಟಿಯಿಂದ ಇವತ್ತು ನಿಮ್ಮ ಪಾಲಿಗೆ ಶುಭದಿನ. ದಾಂಪತ್ಯ ಜೀವನದ ಮಧುರತೆಯ ಅನುಭವವಾಗಲಿದೆ. ಉಪಹಾರ ಮತ್ತು ಧನಪ್ರಾಪ್ತಿ ಯೋಗವೂ ಇದೆ.

ಮೀನ ರಾಶಿ

ಅಲ್ಪಾವಧಿಯಲ್ಲೇ ಲಾಭ ಗಳಿಸುವ ಆಸೆ ಬೇಡ. ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆ ಉಂಟಾಗಲಿದೆ. ಕೋರ್ಟು ಕಚೇರಿ ವಿಷಯಗಳಲ್ಲಿ ಎಚ್ಚರ ವಹಿಸಿ. ಹಣ ಕೊಡು ಕೊಳ್ಳುವಿಕೆಗೆ ಸಮಯ ಅನುಕೂಲಕರವಾಗಿಲ್ಲ.

 

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...