alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಹೊಸ ಕಾರ್ಯ ಕೈಗೊಳ್ಳುವುದು ಸೂಕ್ತ. ನಿಗೂಢ ವಿದ್ಯೆ ಮತ್ತು ರಹಸ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಲಿದ್ದೀರಿ. ಇಂದು ನಿಮಗೆ ಅದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಕೂಡ ಸಿಗುತ್ತದೆ.

ವೃಷಭ ರಾಶಿ

ಮಿತ್ರರ ಭೇಟಿಯೊಂದಿಗೆ ದಿನ ಆರಂಭವಾಗಲಿದೆ. ನಿಮ್ಮ ಬದುಕಿನಲ್ಲಿ ಹೊಸಬರ ಪ್ರವೇಶವಾಗಬಹುದು. ಪ್ರವಾಸ ಆಯೋಜಿಸುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಎಚ್ಚರಿಕೆಯಿಂದಿರಿ.

ಮಿಥುನ ರಾಶಿ

ಇವತ್ತು ಅತ್ಯಂತ ಆನಂದವಾಗಿ ದಿನ ಕಳೆಯಲಿದ್ದೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಸೌಹಾರ್ದಮಯ ವಾತಾವರಣ ಇರುತ್ತದೆ.

ಕರ್ಕ ರಾಶಿ

ಪ್ರತಿಕೂಲತೆಯ ನಡುವೆಯೂ ಪರಿಶ್ರಮಪಟ್ಟರೆ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಆರೋಗ್ಯದಲ್ಲಿ ಅದರಲ್ಲೂ ಉದರ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಿ.

ಸಿಂಹ ರಾಶಿ

ಇಂದು ಅತ್ಯಂತ ಎಚ್ಚರಿಕೆ ಮತ್ತು ಸಮಾಧಾನದಿಂದಿರಿ. ಮಾನಸಿಕವಾಗಿ ಆತಂಕ ಕಾಡುತ್ತದೆ. ದೈಹಿಕವಾಗಿಯೂ ಅಸ್ವಸ್ಥತೆಯ ಅನುಭವವಾಗಬಹುದು.

ಕನ್ಯಾ ರಾಶಿ

ಇಂದು ಅತ್ಯಂತ ಲಾಭದಾಯಕ ದಿನ. ಭಾಗ್ಯವೃದ್ಧಿಯ ಯೋಗವೂ ಇದೆ. ಬಂಧುಗಳು ಮತ್ತು ಆತ್ಮೀಯರಿಂದ ಲಾಭವಾಗಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.

ತುಲಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಕೌಟುಂಬಿಕ ಜಗಳದ ಸಂದರ್ಭದಲ್ಲಿ ಮಾತಿನ ಮೇಲೆ ನಿಯಂತ್ರಣವಿರಲಿ. ನಕಾರಾತ್ಮಕತೆಯನ್ನು ದೂರ ಮಾಡಿಕೊಳ್ಳಿ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಸುಖ-ಸಂತೋಷದ ಅನುಭವವಾಗುತ್ತದೆ. ಕುಟುಂಬದವರೊಂದಿಗೆ ಸಂತೋಷವಾಗಿ ದಿನ ಕಳೆಯಲಿದ್ದೀರಿ. ಆರ್ಥಿಕ ಸಮಸ್ಯೆ ಇರುವುದಿಲ್ಲ.

ಧನು ರಾಶಿ

ಯಾವುದೇ ದುರ್ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಿ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇರುವುದು ಒಳಿತು. ಮೋಜು-ಮಸ್ತಿಗಾಗಿ ಅಧಿಕ ಹಣ ಖರ್ಚಾಗಲಿದೆ.

ಮಕರ ರಾಶಿ

ವ್ಯಾಪಾರಿಗಳು, ಉದ್ಯೋಗಿಗಳು ಮತ್ತು ಕೃಷಿಕರಿಗೆ ಇಂದು ಲಾಭದಾಯಕ ದಿನ. ಪುತ್ರ ಮತ್ತು ಪತ್ನಿಯಿಂದ ಲಾಭವಾಗಲಿದೆ. ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು.

ಕುಂಭ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ವ್ಯವಹಾರದಲ್ಲಿ ಲಾಭವಾಗಲಿದೆ. ಗೌರವ-ಪ್ರತಿಷ್ಠೆ ಹೆಚ್ಚಲಿದೆ. ಉದ್ಯೋಗದಲ್ಲಿ ಪದೋನ್ನತಿಯ ಯೋಗವಿದೆ.

ಮೀನ ರಾಶಿ

ಬೌದ್ಧಿಕ ಮತ್ತು ಲೇಖನ ಕಾರ್ಯಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...