alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತಿನ ದಿನ ನಿಮಗೆ ಮಧ್ಯಮ ಫಲದಾಯಕವಾಗಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು. ದೈಹಿಕವಾಗಿ ಆಯಾಸಗೊಳ್ಳುತ್ತೀರಿ. ಸಾಧ್ಯವಾದರೆ ಪ್ರಯಾಣವನ್ನು ಮುಂದೂಡಿ. ಹಠಮಾರಿತನ ಬೇಡ.

ವೃಷಭ ರಾಶಿ

ಇವತ್ತು ನೀವು ಯಾವುದೇ ಕಾರ್ಯವನ್ನು ಸಂಪೂರ್ಣ ಆತ್ಮವಿಶ್ವಾಸ ಮತ್ತು ಪರಿಶ್ರಮಪಟ್ಟು ಮಾಡಲಿದ್ದೀರಿ. ತಂದೆಯ ಸಂಪತ್ತಿನಿಂದ ನಿಮಗೆ ಲಾಭವಾಗಲಿದೆ. ತಂದೆ-ಮಕ್ಕಳ ಬಾಂಧವ್ಯವೂ ಉತ್ತಮವಾಗಿರಲಿದೆ. ಮಕ್ಕಳಿಗಾಗಿ ಖರ್ಚು ಮಾಡಬೇಕಾಗುತ್ತದೆ.

ಮಿಥುನ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಮಿತ್ರರು, ಬಂಧುಗಳು ಮತ್ತು ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವಿರಲಿದೆ. ಆರ್ಥಿಕ ತೊಂದರೆ ಎದುರಾಗುವುದಿಲ್ಲ. ಮನಸ್ಸು ಚಂಚಲಗೊಳ್ಳಲಿದೆ. ಆನಂದ, ಉಲ್ಲಾಸದಿಂದ ದಿನವನ್ನು ಕಳೆಯುತ್ತೀರಿ.

ಕರ್ಕ ರಾಶಿ

ಇವತ್ತಿನ ದಿನ ನಿಮಗೆ ಮಧ್ಯಮ ಫಲದಾಯಕವಾಗಿದೆ. ಯಾವ ಕೆಲಸ ಮಾಡಿದರೂ ಅದರಲ್ಲಿ ನಿಮಗೆ ಸಂತೋಷ ಸಿಗುವುದಿಲ್ಲ. ಕುಟುಂಬದವರ ಜೊತೆಗೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ನಕಾರಾತ್ಮಕ ಮನಃಸ್ಥಿತಿ ಹೊಂದಲಿದ್ದೀರಿ.

ಸಿಂಹ ರಾಶಿ

ಇವತ್ತು ನಿಮಗೆ ಶುಭದಿನ. ಆತ್ಮವಿಶ್ವಾಸ ವೃದ್ಧಿಸಲಿದೆ. ಎಲ್ಲಾ ಕಾರ್ಯಗಳನ್ನೂ ದೃಢನಿಶ್ಚಯದಿಂದ ಪೂರ್ಣಗೊಳಿಸುತ್ತೀರಿ. ಸರ್ಕಾರಿ ಕೆಲಸಗಳಲ್ಲಿ ಲಾಭವಾಗಲಿದೆ. ಹಿರಿಯರ ಸಹಕಾರ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.

ಕನ್ಯಾ ರಾಶಿ

ಇವತ್ತು ನಿಮಗೆ ಮಾನಸಿಕ ಮತ್ತು ದೈಹಿಕವಾಗಿ ಆತಂಕ, ಚಿಂತೆ ಕಾಡಲಿದೆ. ನಿಮ್ಮ ಅಹಂನಿಂದಾಗಿ ಯಾವುದೇ ವಿವಾದದಲ್ಲಿ ಸಿಲುಕಬೇಡಿ, ಗೌರವಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಿ. ಆಕಸ್ಮಿಕ ಖರ್ಚಿನ ಸಂಭವವಿದೆ. ಕೋರ್ಟು, ಕಚೇರಿ ವ್ಯವಹಾರದಲ್ಲಿ ಜಾಗರೂಕರಾಗಿರಿ.

ತುಲಾ ರಾಶಿ

ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಏಳ್ಗೆಯಾಗಲಿದೆ. ವ್ಯಾಪಾರವನ್ನು ವೃದ್ಧಿಸಲು ಅವಕಾಶ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಿವಾಹಿತರಿಗೆ ದಾಂಪತ್ಯದ ಸುಖ ಸಿಗಲಿದೆ.

ವೃಶ್ಚಿಕ ರಾಶಿ

ನಿಮಗೆ ಗೃಹಸ್ಥ ಜೀವನದ ಸಾರ್ಥಕತೆಯ ಅರಿವಾಗಲಿದೆ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಅಂದುಕೊಂಡ ಕಾರ್ಯಗಳೆಲ್ಲ ಸರಳವಾಗಿ ಪೂರೈಸುತ್ತವೆ. ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಆದಾಯವೂ ಹೆಚ್ಚಾಗಲಿದೆ.

ಧನು ರಾಶಿ

ಇವತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲಸದಲ್ಲಿ ಉತ್ಸಾಹದ ಕೊರತೆ ಕಾಣಿಸಲಿದೆ. ಮನಸ್ಸು ಚಿಂತೆಯಿಂದ ವ್ಯಗ್ರವಾಗುತ್ತದೆ. ಮಕ್ಕಳ ಸಮಸ್ಯೆಯೂ ಇದಕ್ಕೆ ಕಾರಣ. ಉದ್ಯೋಗದಲ್ಲೂ ತೊಂದರೆಯಾಗುವ ಸಾಧ್ಯತೆ ಇದೆ.

ಮಕರ ರಾಶಿ

ನಕಾರಾತ್ಮಕತೆ ಮನಸ್ಸಿನಲ್ಲಿ ಬೇರೂರದಂತೆ ಎಚ್ಚರ ವಹಿಸಿ. ಕೋಪವನ್ನು ನಿಯಂತ್ರಿಸಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗುತ್ತೀರಾ. ಆಕಸ್ಮಿಕವಾಗಿ ಪ್ರವಾಸಕ್ಕೆ ತೆರಳಬೇಕಾಗಬಹುದು. ಊಟ-ತಿಂಡಿ ಬಗ್ಗೆ ವಿಶೇಷ ಗಮನವಿರಲಿ. ಆಕಸ್ಮಿಕ ಧನ ಲಾಭವಿದೆ.

ಕುಂಭ ರಾಶಿ

ನಿಮ್ಮ ಆತ್ಮವಿಶ್ವಾಸದಲ್ಲಿ ಇವತ್ತು ವೃದ್ಧಿಯಾಗಲಿದೆ. ಇದರಿಂದಾಗಿ ಕೆಲಸಗಳಲ್ಲಿ ಸಫಲತೆ ಸಿಗಲಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ರುಚಿಯಾದ ಭೋಜನ, ವಸ್ತ್ರ ಮತ್ತು ವಾಹನ ಸುಖ ದೊರೆಯಲಿದೆ. ಪಾಲುದಾರಿಕೆಯಲ್ಲಿ ಲಾಭವಿದೆ.

ಮೀನ ರಾಶಿ

ದೃಢ ನಿಶ್ಚಯದಿಂದಾಗಿ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಕುಟುಂಬದಲ್ಲೂ ಸುಖ-ಶಾಂತಿ ನೆಲೆಸಲಿದೆ. ಕೋಪದ ಕಾರಣದಿಂದಾಗಿ ಮನಸ್ಸು ವ್ಯಗ್ರವಾಗಲಿದೆ. ಉದ್ಯೋಗದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಪ್ರತಿಸ್ಪರ್ಧಿಗಳೆದುರು ಗೆಲುವು ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...