alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ 

ಇಂದು ನಿಮಗೆ ಶುಭದಿನ. ಮಾಡಿದ ಕಾರ್ಯಕ್ಕೆ ಒಳ್ಳೆಯ ಫಲಾಫಲಗಳು ದೊರೆಯುತ್ತವೆ. ಆರ್ಥಿಕ ಲಾಭ ದೊರೆಯಲಿದೆ. ಆದ್ರೆ ಖರ್ಚು ಹೆಚ್ಚಾಗುವ ಸಂಭವವಿದೆ. ಆದ್ರೆ ನೀವು ಮಾಡುವ ಖರ್ಚು ನಿರರ್ಥಕವಾಗುವುದಿಲ್ಲ.

ವೃಷಭ ರಾಶಿ

ಇವತ್ತಿನ ದಿನ ಶಾಂತಿ ಮತ್ತು ಸಹನೆಯಿಂದ ವರ್ತಿಸಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ವಾದ-ವಿವಾದ ಮತ್ತು ಚರ್ಚೆಗಳಿಂದ ದೂರ ಇರುವುದು ಒಳಿತು.

ಮಿಥುನ ರಾಶಿ

ಇವತ್ತು ನಿಮಗೆ ಸ್ವಲ್ಪ ಅನಾರೋಗ್ಯ ಕಾಡಲಿದೆ. ಮಾನಸಿಕವಾಗಿಯೂ ವ್ಯಾಕುಲತೆ ಹೆಚ್ಚುವ ಸಂಭವವಿದೆ. ಮನೆಯವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮನಸ್ಸಿನಲ್ಲಿ ಖಿನ್ನತೆ ಉಂಟಾಗಬಹುದು. ನಿರುತ್ಸಾಹವೂ ಉಂಟಾಗಲಿದೆ.

ಕರ್ಕ ರಾಶಿ

ಯಾವುದೇ ಕೆಲಸ ಮಾಡುವುದಾದ್ರೂ ಆಲೋಚನೆ ಮಾಡಿಯೇ ಮುಂದಡಿ ಇಡುವುದು ಒಳ್ಳೆಯದು. ಸಹೋದರ-ಸಹೋದರಿಯರ ಜೊತೆಗೆ ಆತ್ಮೀಯ ಸಂಬಂಧ ಹಾಗೆಯೇ ಮುಂದುವರಿಯಲಿದೆ. ಸ್ನೇಹಿತರನ್ನು ಭೇಟಿ ಮಾಡುವ ಯೋಗವಿದೆ.

ಸಿಂಹ ರಾಶಿ

ಇವತ್ತು ನಿಮ್ಮ ಮನಸ್ಥೈರ್ಯ ಕೊಂಚ ದುರ್ಬಲವಾಗುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಯಾವ ಕೆಲಸದಲ್ಲೂ ಆತುರ ಬೇಡ, ಸಹನೆಯಿಂದ ವರ್ತಿಸಿ.

ಕನ್ಯಾ ರಾಶಿ

ಇವತ್ತಿನ ದಿನ ನಿಮಗೆ ಶುಭವಾಗುವುದು. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಾ. ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಇವತ್ತಿನ ದಿನ ನಿಮಗೆ ಕೊಂಚ ಕಠಿಣವಾಗಲಿದೆ. ಕುಟುಂಬದವರೊಡನೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಮನಸ್ಸಿಗೆ ನೋವುಂಟಾಗುವಂತಹ ಘಟನೆ ನಡೆಯಲಿದೆ. ಖರ್ಚು ಕೂಡ ಅಧಿಕವಾಗಲಿದೆ.

ವೃಶ್ಚಿಕ ರಾಶಿ

ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದಾಗಿ ಇವತ್ತಿನ ದಿನ ಆನಂದಪೂರ್ವಕವಾಗಿ ಕಳೆಯಲಿದ್ದೀರಿ. ಸಾಮಾಜಿಕ ಕ್ಷೇತ್ರ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಇವತ್ತು ನಿಮಗೆ ಲಾಭವಾಗಲಿದೆ.

ಧನು ರಾಶಿ

ಇವತ್ತಿನ ದಿನ ನಿಮ್ಮ ಪಾಲಿಗೆ ಅನುಕೂಲಕರವಾಗಲಿದೆ. ನೀವು ಕೈಗೊಂಡ ಕಾರ್ಯಗಳು ಸರಳಪೂರ್ವಕವಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಲಿದೆ.

ಮಕರ ರಾಶಿ

ಇವತ್ತಿನ ದಿನದ ಆರಂಭದಲ್ಲೇ ನಿಮಗೆ ಮನಸ್ಸಿನಲ್ಲಿ ಅಶಾಂತಿ ಮತ್ತು ವ್ಯಾಕುಲತೆ ಉಂಟಾಗುವ ಸಾಧ್ಯತೆ ಇದೆ. ದೈಹಿಕವಾಗಿ ಆಯಾಸವಾಗಲಿದೆ. ಖರ್ಚು ಕೂಡ ಅಧಿಕವಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಇವತ್ತು ಹೊಸಬರನ್ನು ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿ, ಹೊಸ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಪರಿಸ್ಥಿತಿಯ ಅಂತರಾಳದ ಬಗ್ಗೆ ಬೇರೆಯವರಿಂದ ತಿಳಿಯುವ ಸಾಧ್ಯತೆ ಇದೆ. ಹೊಸ ಮಾಹಿತಿ ಮತ್ತು ಐಡಿಯಾಗಳನ್ನು ಸ್ವೀಕರಿಸಿ.

ಮೀನ ರಾಶಿ

ಯಾರಾದರೂ ನಿಮಗೆ ಸಲಹೆ ನೀಡಿದ್ರೆ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಇತರರ ಮೇಲೆ ನಂಬಿಕೆ ಇಡುವುದು ಉತ್ತಮ. ಹೊಸದಾಗಿ ತಿಳಿದುಕೊಂಡ ವಿಷಯಗಳ ಬಗ್ಗೆ ಜಾಗರೂಕರಾಗಿರಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...