alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ರಾಶಿಗೆ ಯಾವ ಬಣ್ಣದ ರಾಖಿ..?

images (1)

ಗುರುವಾರದಂದು ರಕ್ಷಾಬಂಧನ. ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸೆಂದು ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟುವ ಶುಭ ದಿನ. ಸಹೋದರನ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಎಲ್ಲ ಸಹೋದರಿಯರೂ ಭರ್ಜರಿ ತಯಾರಿ ನಡೆಸಿದ್ದಾರೆ. ತಮಗಿಷ್ಟವಾಗುವ ರಾಖಿಗಳ ಖರೀದಿಯಲ್ಲಿ ತೊಡಗಿದ್ದಾರೆ.

ಆಗಸ್ಟ್ 17 ರ ಮಧ್ಯಾಹ್ನದಿಂದಲೇ ಹುಣ್ಣಿಮೆ ಆರಂಭವಾಗಿದೆ. ಆದ್ರೆ ರಾಖಿ ಹಬ್ಬಕ್ಕೆ ಗುರುವಾರ ಒಳ್ಳೆಯ ಮುಹೂರ್ತವಿದೆ. ಶಾಸ್ತ್ರದ ಪ್ರಕಾರ ಬೆಳಿಗ್ಗೆ 5.55ರಿಂದ ಮಧ್ಯಾಹ್ನ 2 .56ರವರೆಗೆ ರಾಖಿ ಕಟ್ಟಲು ಶುಭ ಮುಹೂರ್ತವಿದೆ.

ಶಾಸ್ತ್ರದ ಪ್ರಕಾರ ಗುರುವಾರ ಗಜಕೇಸರಿ ಯೋಗ ಪ್ರಾಪ್ತವಾಗಲಿದೆ. ಗುರು ಕನ್ಯಾ ರಾಶಿಗೆ ಬರಲಿದ್ದು, ಚಂದ್ರ ಮಕರ ರಾಶಿಯಲ್ಲಿರಲಿದ್ದಾನೆ. ಗಜಕೇಸರಿ ಯೋಗದಲ್ಲಿ ರಾಖಿ ಕಟ್ಟುವುದರಿಂದ ಸಂಬಂಧ ಗಟ್ಟಿಯಾಗಿರುತ್ತದೆ. ಸಹೋದರರಿಗೆ ರಾಜನ ರೀತಿಯಲ್ಲಿ ಸುಖ ಪ್ರಾಪ್ತಿಯಾಗಲಿದೆ. ಈ ಯೋಗದಲ್ಲಿ ರಾಖಿ ಕಟ್ಟುವುದರಿಂದ ಲಕ್ಷ್ಮಿ ಕೃಪೆ ಸಿಗಲಿದೆ.

ಸಹೋದರರ ರಾಶಿಗೆ ಹೊಂದುವ ಬಣ್ಣದ ರಾಖಿಯನ್ನು ಕಟ್ಟುವುದರಿಂದ ಸುಖ, ಶಾಂತಿಯ ಜೊತೆಗೆ ಆಯಸ್ಸು ವೃದ್ಧಿಯಾಗಲಿದೆ. ಸಹೋದರನ ರಾಶಿ ನೋಡಿ ಅದಕ್ಕೆ ಹೊಂದುವ ಬಣ್ಣದ ರಾಖಿ ಕಟ್ಟುವುದು ಬಹಳ ಒಳ್ಳೆಯದು.

ಮೇಷ- ವೃಶ್ಚಿಕ ರಾಶಿ :  ಕೆಂಪು ಬಣ್ಣದ ರಾಖಿ

ವೃಷಭ- ತುಲಾ ರಾಶಿ : ಬಿಳಿ ಬಣ್ಣ

ಮಿಥುನ- ಕನ್ಯಾ ರಾಶಿ : ಹಸಿರು ಬಣ್ಣ

ಸಿಂಹ ರಾಶಿ : ಗುಲಾಬಿ ಬಣ್ಣ

ಧನು- ಮೀನ ರಾಶಿ : ಹಳದಿ ಬಣ್ಣ

ಮಕರ-ಕುಂಭ ರಾಶಿ : ನೀಲಿ ಬಣ್ಣ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...