alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಜುಲೈ 13 ರವರೆಗೆ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

durga-devi

ಆಷಾಢ ಮಾಸದ ನವರಾತ್ರಿ ಶುರುವಾಗಿದೆ. ಇಂದಿನಿಂದ ಆಷಾಢ ಶುಕ್ಲ ನವಮಿ (ಜುಲೈ 13 ) ಯವರೆಗೆ ನವರಾತ್ರಿ ಕಾರ್ಯಕ್ರಮ ನಡೆಯಲಿದೆ. ಈ ದಿನಗಳಲ್ಲಿ ದೇವಿಯ ಪೂಜೆ ಮಾಡುವುದು ಅತ್ಯಂತ ಮಂಗಳಕರ ಹಾಗೂ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ಒಂಭತ್ತು ದಿನಗಳಲ್ಲಿ  ದೇವಿಯ ಆರಾಧನೆ ಮಾಡ್ತಾರೆ ಮತ್ತು ದೇವಿಯನ್ನು ಪ್ರಸನ್ನಗೊಳಿಸಲು ಪ್ರಯತ್ನ ಮಾಡ್ತಾರೆ.

ದೇವಿಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡಬೇಕಾಗಿಲ್ಲ. ಕೆಲವೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಅಪ್ಪಿತಪ್ಪಿ ಆ ತಪ್ಪುಗಳನ್ನು ಮಾಡಿದ್ರೆ ದೇವಿ ಕೋಪಗೊಳ್ತಾಳೆ. ಹಾಗಾಗಿ ಈ ಒಂಭತ್ತು ದಿನ ಮರೆತೂ ಈ ಕೆಳಗಿನ ಕೆಲಸಗಳನ್ನು ಮಾಡಬೇಡಿ.

ಆಷಾಢ ನವರಾತ್ರಿಗೆ ಹಿಂದು ಪದ್ಧತಿಯಲ್ಲಿ ಅದರದೇ ಆದ ವಿಶೇಷ ಸ್ಥಾನಗಳಿವೆ. ಈ ಒಂಭತ್ತು ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು.

ನವರಾತ್ರಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ನೀಡಬೇಕು. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಅವಮಾನ ಮಾಡಬಾರದು. ಮೊದಲು ಅವರಿಗೆ ಊಟ ಬಡಿಸಿ ನಂತ್ರ ಮನೆಯ ಸದಸ್ಯರು ಊಟ ಮಾಡಬೇಕು.

ಈ ಒಂಭತ್ತು ದಿನ ಕ್ಷೌರ ಅಥವಾ ಗಡ್ಡ ಮಾಡಬಾರದು. ಯಾವ ಮನುಷ್ಯ ನವರಾತ್ರಿಯ ಸಮಯದಲ್ಲಿ ಈ ವಿಷಯಗಳ ಬಗ್ಗೆ ಗಮನ ನೀಡುತ್ತಾನೋ ಆತನಿಗೆ ದೇವಿ ಒಲಿಯುತ್ತಾಳೆ.

ಮಾಂಸ ಸೇವನೆಯನ್ನು ಹಿಂದು ಧರ್ಮದಲ್ಲಿ ನಿಷೇಧಿಸಲಾಗಿದೆ. ಅದರಲ್ಲೂ ಈ ಒಂಭತ್ತು ದಿನ ಮಾಂಸಹಾರ ಸೇವನೆ ಮಾಡಿದ್ರೆ ಪ್ರಸನ್ನಳಾಗುವ ಬದಲು ದೇವಿ ಕೋಪಗೊಳ್ತಾಳೆ. ಆರ್ಥಿಕ ಹಾಗೂ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮದ್ಯಪಾನ ಮಾಡುವುದು ಒಳ್ಳೆಯದಲ್ಲ. ನವರಾತ್ರಿಯ ಶುಭಗಳಿಗೆಯಲ್ಲಿ ಎಷ್ಟೇ ಪೂಜೆ, ಪ್ರಾರ್ಥನೆ ಮಾಡಿ ನಂತ್ರ ಮದ್ಯಪಾನ ಮಾಡಿದ್ರೆ ಸಿಕ್ಕ ಫಲವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ನವರಾತ್ರಿಯಂದು ಮದ್ಯಪಾನ ಮಾಡುವುದು ಘೋರ ಪಾಪವೆಂದು ಪರಿಗಣಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...