alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಫುಲ್ಲವಾಗಿರುತ್ತೀರಿ. ಭಾಗ್ಯವೃದ್ಧಿಯ ಅವಕಾಶ ಸಿಗಲಿದೆ. ಹೊಸ ಬಟ್ಟೆ ಮತ್ತು ಆಭರಣಕ್ಕಾಗಿ ಹಣ ಖರ್ಚಾಗಲಿದೆ.

ವೃಷಭ ರಾಶಿ

ಹಣಕಾಸಿನ ಕೊಡು-ಕೊಳ್ಳುವಿಕೆಯಲ್ಲಿ ಎಚ್ಚರ ವಹಿಸಿ. ಮಿತ್ರರೊಂದಿಗೆ ರಮಣೀಯ ಸ್ಥಳಕ್ಕೆ ತೆರಳಲಿದ್ದೀರಿ. ಅವಿವಾಹಿತರಿಗೆ ವೈವಾಹಿಕ ಯೋಗ ಕೂಡಿ ಬರಲಿದೆ. ಪತ್ನಿ ಮತ್ತು ಪುತ್ರನಿಂದ ಲಾಭವಿದೆ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಾಹಿತ್ಯ ಮತ್ತು ಕಲೆಯ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಕಲ್ಪನಾಶಕ್ತಿ ಹೆಚ್ಚಲಿದೆ.

ಕರ್ಕ ರಾಶಿ

ಇಂದು ಹೆಚ್ಚು ವಾದ-ವಿವಾದ ಮಾಡಬೇಡಿ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಕುಟುಂಬಸ್ಥರೊಂದಿಗೆ ಜಗಳವಾಗಬಹುದು, ಹಾಗಾಗಿ ಮಾತಿನ ಮೇಲೆ ನಿಯಂತ್ರಣವಿರಲಿ.

ಸಿಂಹ ರಾಶಿ

ನಿಮಗೆ ಇಂದು ಶುಭ ದಿನ. ಮಧುರ ಮಾತಿನಿಂದಲೇ ಇತರರ ಮನಸ್ಸು ಗೆಲ್ಲಲಿದ್ದೀರಿ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಆದ್ರೂ ಮಾತು ಕಡಿಮೆ ಆಡಿದ್ರೆ ಒಳ್ಳೆಯದು.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಊಟ-ತಿಂಡಿ ಬಗ್ಗೆ ವಿಶೇಷ ಗಮನವಿರಲಿ.

ತುಲಾ ರಾಶಿ

ಇಂದು ನಿಮಗೆ ಆಲಸ್ಯ ಮತ್ತು ಆಯಾಸದ ಅನುಭವವಾಗುತ್ತದೆ. ಚಿಕ್ಕ ಪುಟ್ಟ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುತ್ತೀರಿ. ಚರ್ಚೆ ಮತ್ತು ವಿವಾದದಿಂದ ದೂರವೇ ಇರಿ.

ವೃಶ್ಚಿಕ ರಾಶಿ

ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭವಾಗಲಿದೆ. ಸ್ನೇಹಿತರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಮಧ್ಯಾಹ್ನದ ನಂತರ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ಧನು ರಾಶಿ

ಇಂದು ನಿಮಗೆ ಶುಭ ದಿನ. ಆತ್ಮೀಯರೊಂದಿಗೆ ಸುತ್ತಾಟಕ್ಕೆ ತೆರಳಲಿದ್ದೀರಿ, ಒಳ್ಳೆ ಭೋಜನ ಸವಿಯುವ ಅವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಮಧುರ ಸಂಬಂಧ ಹೊಂದಲಿದ್ದೀರಿ.

ಮಕರ ರಾಶಿ

ಸುಖಮಯ ಅನುಭವ ಮತ್ತು ಸೌಭಾಗ್ಯ ಪ್ರಾಪ್ತಿಯಾಗಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಲಾಭವಾಗಲಿದೆ. ಗೃಹಸ್ಥ ಜೀವನ ಆನಂದಮಯವಾಗಿರುತ್ತದೆ.

ಕುಂಭ ರಾಶಿ

ಕೋಪವನ್ನು ನಿಯಂತ್ರಿಸಿಕೊಳ್ಳಿ, ಮೃದುವಾಗಿ ವ್ಯವಹರಿಸಿ. ಮಾತಿನ ಮೇಲೆ ನಿಯಂತ್ರಣವಿರಲಿ. ಲಾಭಕಾರಕ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.

ಮೀನ ರಾಶಿ

ಇಂದು ಮನರಂಜನೆ ಮತ್ತು ಮೋಜು-ಮಸ್ತಿಯಲ್ಲಿ ತೊಡಗಿಕೊಳ್ಳಲಿದ್ದೀರಿ. ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಸಾಮಾಜಿಕವಾಗಿ ಗೌರವ-ಪ್ರತಿಷ್ಠೆ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...