alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ನಿಮಗೆ ಶುಭ ದಿನ. ಗೃಹಸ್ಥ ಜೀವನದಲ್ಲಿ ಸಂತೋಷ ಕಾಣಲಿದ್ದೀರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಹಿರಿಯ ಅಧಿಕಾರಿಗಳು ಪ್ರಸನ್ನರಾಗುತ್ತಾರೆ. ತಂದೆ ಮತ್ತು ಹಿರಿಯರಿಂದ ಲಾಭವಿದೆ.

ವೃಷಭ ರಾಶಿ

ಕುಟುಂಬ ಸದಸ್ಯರೊಂದಿಗೆ ಸುಖ-ಶಾಂತಿಯಿಂದ ಸಮಯ ಕಳೆಯಲಿದ್ದೀರಿ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಾಗಲಿದೆ. ನಿಮ್ಮ ಪ್ರಭಾವಿ ಮಾತುಗಳಿಂದ ಇತರರ ಗಮನ ಸೆಳೆಯಲಿದ್ದೀರಿ.

ಮಿಥುನ ರಾಶಿ

ನಿಮ್ಮ ಮಾತಿನ ಚಮತ್ಕಾರದಿಂದ ಲಾಭವಾಗಲಿದೆ. ಹೊಸ ಸಂಬಂಧಗಳು ಬೆಸೆಯಲಿವೆ. ಶುಭಕಾರ್ಯಕ್ಕೆ ಪ್ರೇರಣೆ ಸಿಗಲಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಆದ್ರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.

ಕರ್ಕ ರಾಶಿ

ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಮೂಡಲಿದೆ. ಹೊಸ ಕಾರ್ಯ ಆರಂಭಿಸಲು ಶುಭ ಸಮಯ. ಮಿತ್ರರು ಮತ್ತು ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.

ಸಿಂಹ ರಾಶಿ

ಪ್ರತಿಕೂಲ ಪರಿಸ್ಥಿತಿಯಿಂದಾಗಿ ಅಂದುಕೊಂಡ ಕಾರ್ಯದಲ್ಲಿ ವಿಳಂಬವಾಗಲಿದೆ. ಶರೀರದಲ್ಲಿ ಸ್ಪೂರ್ತಿ ಮತ್ತು ಮನಸ್ಸಿನಲ್ಲಿ ಉತ್ಸಾಹದ ಅಭಾವ ಇರುತ್ತದೆ. ಉದರ ಸಂಬಂಧಿ ರೋಗಗಳು ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿ

ನಿಮ್ಮ ಕಲ್ಪನೆ ಮತ್ತು ಸೃಜನಶಕ್ತಿಯ ಉತ್ತಮ ಉಪಯೋಗ ಪಡೆಯಲಿದ್ದೀರಿ. ಮಕ್ಕಳ ಪ್ರಗತಿಗೆ ಯಾವುದೇ ಅಡ್ಡಿಯಿಲ್ಲ. ಪ್ರಿಯ ವ್ಯಕ್ತಿಗಳೊಂದಿಗಿನ ಭೇಟಿ ರೋಮಾಂಚನಕಾರಿಯಾಗಿರಲಿದೆ.

ತುಲಾ ರಾಶಿ

ಇಂದು ನಿಮಗೆ ಶುಭದಿನ. ಸಂಬಂಧಿಗಳೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಸ್ತ್ರೀ ಮಿತ್ರರಿಂದ ಲಾಭ ದೊರೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ.

ವೃಶ್ಚಿಕ ರಾಶಿ

ಮನಸ್ಸು ಚಿಂತಾಗ್ರಸ್ಥವಾಗಿರಲಿದೆ, ಗೊಂದಲಗಳು ಕಾಡಬಹುದು. ಇದರಿಂದಾಗಿ ಯಾವುದೇ ಕಾರ್ಯವನ್ನು ದೃಢ ನಿಶ್ಚಯದಿಂದ ಮಾಡಲು ಸಾಧ್ಯವಾಗುವುದಿಲ್ಲ. ಅದೃಷ್ಟ ನಿಮ್ಮ ಜೊತೆಗಿಲ್ಲದೇ ಇರುವುದರಿಂದ ಯಾವುದೇ ಮಹತ್ವದ ಕೆಲಸ ಮಾಡಬೇಡಿ.

ಧನು ರಾಶಿ

ಇವತ್ತು ನಿಮಗೆ ಶುಭ ದಿನ. ನಿಮ್ಮ ರಚನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಯಾಗಲಿದೆ. ಮಾನಸಿಕವಾಗಿ ವೈಚಾರಿಕ ಸ್ಥಿರತೆಯ ಅನುಭವವಾಗಲಿದೆ. ಇದರಿಂದಾಗಿ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಮಕರ ರಾಶಿ

ಇವತ್ತು ನಿಮ್ಮ ಮನಸ್ಸು ಆಧ್ಯಾತ್ಮದೆಡೆಗೆ ವಾಲುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಮನಸ್ಸು ಕೂಡ ಪ್ರಸನ್ನವಾಗಿರಲಿದೆ. ಚಿಕ್ಕದೊಂದು ಪ್ರಯಾಣ ಕೈಗೊಳ್ಳುವಿರಿ. ಉದ್ಯಮದಲ್ಲಿ ಪ್ರಗತಿಯಾಗಲಿದೆ.

ಕುಂಭ ರಾಶಿ

ಇವತ್ತು ಸ್ವಲ್ಪ ಅನಾನುಕೂಲತೆಗಳು ಎದುರಾಗಲಿವೆ. ಅನಾರೋಗ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ತಂದೆಯ ಬಗ್ಗೆ ಚಿಂತೆ ಕಾಡಲಿದೆ.

ಮೀನ ರಾಶಿ

ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಸರ್ಕಾರದ ನಿರ್ಣಯ ನಿಮ್ಮ ಪರವಾಗಿರಲಿದೆ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಅಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ. ಹಣ ಮತ್ತು ಗೌರವ ದೊರೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...