alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಕೋಪ ಮತ್ತು ಹಠಮಾರಿತನ ಬಿಡಿ. ಇಂದು ಹೆಚ್ಚು ಪರಿಶ್ರಮಪಡುವ ಅವಶ್ಯಕತೆ ಇದೆ. ಮನಸ್ಸು ಖಿನ್ನವಾಗಿರಬಹುದು. ಪ್ರಯಾಣಕ್ಕೆ ಉಚಿತ ಸಮಯವಲ್ಲ.

ವೃಷಭ ರಾಶಿ

ಇಂದು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲಿದ್ದೀರಿ. ತಂದೆಯಿಂದ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಮಿಥುನ ರಾಶಿ

ದಿನದ ಆರಂಭದಲ್ಲೇ ಸ್ಪೂರ್ತಿಯ ಅನುಭವವಾಗಲಿದೆ. ಭಾಗ್ಯವೃದ್ಧಿಯ ಅವಕಾಶಗಳು ಸಿಗಬಹುದು. ಯೋಚನೆಗಳು ಪದೇ ಪದೇ ಬದಲಾಗುವುದರಿಂದ ಗೊಂದಲ ಮೂಡಲಿದೆ.

ಕರ್ಕ ರಾಶಿ

ಇಂದು ಹತಾಶೆ ಮತ್ತು ಖಿನ್ನತೆ ನಿಮ್ಮನ್ನು ಆವರಿಸಲಿದೆ. ಕುಟುಂಬಸ್ಥರೊಂದಿಗೆ ಕಲಹ ಉಂಟಾಗಬಹುದು. ನಿಮ್ಮ ಅಹಂನಿಂದಾಗಿ ಇತರರಿಗೆ ನೋವುಂಟಾಗಲಿದೆ.

ಸಿಂಹ ರಾಶಿ

ಆತ್ಮವಿಶ್ವಾಸ ಮತ್ತು ತ್ವರಿತ ನಿರ್ಣಯದಿಂದಾಗಿ ಕೆಲಸ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ವೃದ್ಧಿಸಲಿದೆ. ಮಾತು ಮತ್ತು ವ್ಯವಹಾರದಲ್ಲಿ ಉಗ್ರತೆ ಬೇಡ.

ಕನ್ಯಾ ರಾಶಿ

ದೈಹಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆ ಉಂಟಾಗಲಿದೆ. ಯಾರೊಂದಿಗೂ ಜಗಳದಲ್ಲಿ ತೊಡಗಬೇಡಿ. ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಕೆಲಸದಲ್ಲಿನ ಯಶಸ್ಸಿನಿಂದಾಗಿ ಪ್ರಸನ್ನರಾಗಿರುತ್ತೀರಿ. ಮಿತ್ರರ ಭೇಟಿ, ರಮಣೀಯ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಗೃಹಸ್ಥ ಜೀವನದಲ್ಲಿ ಸುಖ – ಶಾಂತಿಯ ಅನುಭವವಾಗುತ್ತದೆ.

ವೃಶ್ಚಿಕ ರಾಶಿ

ನಿಮ್ಮ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಗೃಹಸ್ಥ ಜೀವನ ಆನಂದಮಯವಾಗಿರುತ್ತದೆ. ಗೌರವ, ಪ್ರತಿಷ್ಠೆ ವೃದ್ಧಿಸಲಿದೆ. ಹಿರಿಯರಿಂದ ಲಾಭವಿದೆ.

ಧನು ರಾಶಿ

ಆರೋಗ್ಯ ಕೊಂಚ ಏರುಪೇರಾಗಬಹುದು. ಆಲಸ್ಯ ನಿಮ್ಮನ್ನು ಕಾಡಲಿದೆ. ಮಾನಸಿಕವಾಗಿ ಚಿಂತೆ ಆವರಿಸುತ್ತದೆ. ಹಾನಿಕಾರಕ ವಿಚಾರಗಳಿಂದ ದೂರವಿರಿ.

ಮಕರ ರಾಶಿ

ಊಟ ತಿಂಡಿ ಬಗ್ಗೆ ಗಮನಹರಿಸದೇ ಇದ್ದಲ್ಲಿ ಆರೋಗ್ಯ ಹದಗೆಡಲಿದೆ. ಚಿಕಿತ್ಸೆ, ಪ್ರವಾಸ ಅಥವಾ ವ್ಯಾಪಾರ ಸಂಬಂಧಿ ಕೆಲಸಗಳಿಗಾಗಿ ಹಣ ಖರ್ಚಾಗಬಹುದು. ನಕಾರಾತ್ಮಕ ವಿಚಾರ ಮತ್ತು ಕೋಪವನ್ನು ಕಡಿಮೆ ಮಾಡಿಕೊಳ್ಳಿ.

ಕುಂಭ ರಾಶಿ

ಆತ್ಮವಿಶ್ವಾಸ ಮತ್ತು ದೃಢಚಿತ್ತ ನಿಮ್ಮಲ್ಲಿರುತ್ತದೆ. ಇಂದು ರೊಮ್ಯಾಂಟಿಕ್ ಆಗಿ ದಿನ ಕಳೆಯಲಿದ್ದೀರಿ. ಪ್ರವಾಸ, ಭೋಜನ, ಹೊಸ ವಸ್ತ್ರಾಭರಣ ಖರೀದಿ ಯೋಗವಿದೆ.

ಮೀನ ರಾಶಿ

ಮನೆಯಲ್ಲಿ ಸುಖ-ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಇಲ್ಲವಾದಲ್ಲಿ ಅನಾವಶ್ಯಕ ವಿವಾದದಲ್ಲಿ ಸಿಲುಕಲಿದ್ದೀರಿ.

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...