alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ವೃಷಭ ರಾಶಿ

ನಿಮ್ಮ ಭಾವನೆಗಳಿಗೆ ಕೆಲವರು ನೋವುಂಟು ಮಾಡುವ ಪ್ರಸಂಗ ಎದುರಾಗಬಹುದು. ಧನಲಾಭದ ಸಂಭವ ಇದೆ. ಮನಸ್ಸಿನ ಉದಾಸೀನತೆ ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟು ಮಾಡಬಹುದು ಎಚ್ಚರ ವಹಿಸಿ.

ಮಿಥುನ ರಾಶಿ

ಹಿರಿಯರು ಮತ್ತು ಮಿತ್ರರನ್ನು ಭೇಟಿಯಾಗಲಿದ್ದೀರಿ. ಹೊಸ ಸ್ನೇಹಿತರು ಸಿಗಲಿದ್ದಾರೆ. ಮಕ್ಕಳ ಪ್ರಗತಿಯಿಂದ ಸಂತಸಗೊಳ್ಳಲಿದ್ದೀರಿ. ವ್ಯಾಪಾರದಲ್ಲಿ ನಿಮ್ಮ ಪಾಲುದಾರಿಕೆ ಯಶಸ್ವಿಯಾಗುತ್ತದೆ.

ಕರ್ಕ ರಾಶಿ

ಶಾರೀರಿಕವಾಗಿ ವ್ಯಗ್ರತೆಯ ಅನುಭವವಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಜಾಗರೂಕರಾಗಿರಿ. ಕುಟುಂಬದಲ್ಲಿನ ನಕಾರಾತ್ಮಕ ವಾತಾವರಣ ನಿಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ.

ಸಿಂಹ ರಾಶಿ

ಇವತ್ತು ನಿಮಗೆ ಅನುಕೂಲಕರ ಮತ್ತು ಲಾಭದಾಯಕ ದಿನ. ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ಇದರಿಂದ ಸುಲಭವಾಗಿ ಪ್ರಗತಿ ಹೊಂದಲಿದ್ದೀರಿ. ವ್ಯಾಪಾರದಲ್ಲಿ ಆದಾಯ ವೃದ್ಧಿಸಲಿದೆ. ಬಾಕಿ ವಸೂಲಿಯಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ವ್ಯಾಪಾರ ಮತ್ತು ಆರ್ಥಿಕ ಲಾಭವಾಗಲಿದೆ. ಆದ್ರೆ ಮಧ್ಯಾಹ್ನದ ನಂತರ ಸ್ವಲ್ಪ ಜಾಗರೂಕರಾಗಿರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಹದಗೆಡಬಹುದು.

ತುಲಾ ರಾಶಿ

ಇವತ್ತು ಯಾವುದೇ ಹೊಸ ಕೆಲಸ ಆರಂಭಿಸಬೇಡಿ. ಊಟ – ತಿಂಡಿ ಬಗ್ಗೆ ವಿಶೇಷ ಗಮನಹರಿಸುವುದು ಉತ್ತಮ. ಶಾರೀರಿಕ ಸ್ಪೂರ್ತಿಯ ಅಭಾವ ಕಾಣಿಸಲಿದೆ. ಮನಸ್ಸು ಕೂಡ ಚಿಂತೆಯ ಗೂಡಾಗಬಹುದು.

ವೃಶ್ಚಿಕ ರಾಶಿ

ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ. ಪ್ರವಾಸ ಮತ್ತು ರುಚಿಯಾದ ಭೋಜನ ಸವಿಯುವ ಯೋಗವಿದೆ. ಪ್ರತಿಸ್ಪರ್ಧಿಗಳೆದುರು ಗೆಲುವು ಸಿಗಲಿದೆ. ಮನಸ್ಸು ಉಲ್ಲಾಸದಿಂದಿರುತ್ತದೆ. ಒಡಹುಟ್ಟಿದವರೊಂದಿಗೂ ಉತ್ತಮ ಬಾಂಧವ್ಯ ಹೊಂದಲಿದ್ದೀರಿ.

ಧನು ರಾಶಿ

ಅತಿಯಾಗಿ ಭಾವುಕರಾಗಬೇಡಿ. ಮಾತಿನ ಮೇಲೆ ಸಂಯಮವಿರಲಿ, ಇಲ್ಲದೇ ಹೋದ್ರೆ ವಿವಾದದಲ್ಲಿ ಸಿಲುಕುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ. ಹಿರಿಯ ಅಧಿಕಾರಿಗಳ ನಕಾರಾತ್ಮಕ ಧೋರಣೆಯಿಂದ ನಿಮಗೆ ಕಷ್ಟವಾಗಬಹುದು.

ಮಕರ ರಾಶಿ

ಮನಸ್ಸಿನ ಉದಾಸೀನತೆ ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟು ಮಾಡಬಹುದು. ಇವತ್ತಿನ ದಿನ ಮಧ್ಯಮ ಫಲದಾಯಕವಾಗಿದೆ. ವಿಚಾರಗಳಲ್ಲಿ ಒಂದು ರೀತಿಯ ವ್ಯಗ್ರತೆ ಹಾಗೆ ಆಕ್ರಮಣಶೀಲತೆ ಆವರಿಸಲಿದೆ. ಆರ್ಥಿಕ ಲಾಭ ಮತ್ತು ಪ್ರವಾಸದ ಸಂಭವವಿದೆ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ.

ಕುಂಭ ರಾಶಿ

ಮಿತ್ರವರ್ಗದಿಂದ ಲಾಭವಿದೆ. ಸಜ್ಜನರ ಸಂಪರ್ಕವಾಗಲಿದೆ. ಅವರ ಜೊತೆಗಿನ ವ್ಯವಹಾರದಲ್ಲೂ ಸುಧಾರಣೆಯಾಗಲಿದೆ. ಹೊಸ ಕಾರ್ಯವನ್ನು ಆರಂಭಿಸಲು ಇವತ್ತು ಶುಭದಿನ. ಮಧ್ಯಾಹ್ನದ ನಂತರ ನಿಮ್ಮಲ್ಲಿ ಕೋಪ ಹೆಚ್ಚಾಗುವ ಸಾಧ್ಯತೆ ಇದೆ.

ಮೀನ ರಾಶಿ

ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಏಳ್ಗೆಯಾಗಲಿದೆ. ವ್ಯಾಪಾರವನ್ನು ವೃದ್ಧಿಸಲು ಅವಕಾಶ ಸಿಗಲಿದೆ. ನಕಾರಾತ್ಮಕತೆ ಮನಸ್ಸಿನಲ್ಲಿ ಬೇರೂರದಂತೆ ಎಚ್ಚರವಹಿಸಿ. ಕೋಪವನ್ನು ನಿಯಂತ್ರಿಸಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗುತ್ತೀರಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...