alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

astro

ಮೇಷ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗುತ್ತದೆ. ಶೀತ, ಕಫ, ಜ್ವರ ಬರುವ ಸಾಧ್ಯತೆ ಇದೆ. ದಾನ- ಧರ್ಮಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ. ಲಾಭದಾಯಕ ಕೊಡುಗೆಗಳಿಗೆ ಮಾರು ಹೋಗಬೇಡಿ.

ವೃಷಭ ರಾಶಿ

ಇವತ್ತು ನಿಮ್ಮ ಆದಾಯ ಮತ್ತು ವ್ಯಾಪಾರದಲ್ಲಿ ವೃದ್ಧಿಯಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದಾಯಕ ಸಂಪರ್ಕವಾಗಲಿದೆ. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಅವಕಾಶ ಸಿಗಲಿದೆ.

ಮಿಥುನ ರಾಶಿ

ಇವತ್ತು ನಿಮ್ಮೆಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳಲಿವೆ. ಮನೆ, ಕಚೇರಿ ಮತ್ತು ಸಮಾಜದಲ್ಲಿನ ಅನುಕೂಲಕರ ವಾತಾವರಣದಿಂದ ಮನಸ್ಸು ಪ್ರಸನ್ನವಾಗಲಿದೆ. ಹಿರಿಯ ಅಧಿಕಾರಿಗಳ ಸಹಯೋಗದಿಂದ ನಿಮಗೆ ಯಶಸ್ಸು ಸುಲಭವಾಗಿ ದೊರೆಯುತ್ತದೆ.

ಕರ್ಕ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಭಾಗ್ಯವೃದ್ಧಿ ಯೋಗವೂ ಇದೆ. ವಿದೇಶದಿಂದ ಶುಭ ಸಮಾಚಾರ ಬರಲಿದೆ. ಧಾರ್ಮಿಕ ಕಾರ್ಯ, ದೇವರ ದರ್ಶನ ಹಾಗೂ ಯಾತ್ರೆಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ.

ಸಿಂಹ ರಾಶಿ

ಅನಾರೋಗ್ಯದಿಂದಾಗಿ ಹಣ ಖರ್ಚಾಗಲಿದೆ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಹೊರಗಿನ ತಿಂಡಿ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಅನೈತಿಕ ಕೆಲಸಗಳಲ್ಲಿ ತೊಡಗಿಕೊಳ್ಳಬೇಡಿ.

ಕನ್ಯಾ ರಾಶಿ

ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಲಾಭದ ಜೊತೆಗೆ ಖ್ಯಾತಿಯೂ ದೊರೆಯಲಿದೆ. ಸ್ತ್ರೀಯರಿಂದ ವಿಶೇಷ ಲಾಭವಿದೆ. ದಾಂಪತ್ಯ ಜೀವನದಲ್ಲಿ ಸುಖದ ಅನುಭವವಾಗುತ್ತದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ತುಲಾ ರಾಶಿ

ಉದ್ಯೋಗಿಗಳಿಗೆ ಇಂದು ಅತ್ಯಂತ ಲಾಭದಾಯಕ ದಿನ. ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಮನೆಯಲ್ಲೂ ಸೌಹಾರ್ದಮಯ ವಾತಾವರಣವಿರಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಹಣಕಾಸಿನ ಯೋಜನೆ ರೂಪಿಸಲು ಶುಭದಿನ.

ವೃಶ್ಚಿಕ ರಾಶಿ

ದೇಹ ಮತ್ತು ಮನಸ್ಸಿಗೆ ಉಲ್ಲಾಸದ ಅಭಾವವಿರುತ್ತದೆ. ಮನೆಯಲ್ಲಿ ಜಗಳದ ವಾತಾವರಣವಿರುವುದರಿಂದ ಬೇಸರಗೊಳ್ಳುತ್ತೀರಿ. ತಾಯಿಯ ಆರೋಗ್ಯ ಹದಗೆಡಲಿದೆ. ಸಾರ್ವಜನಿಕ ಬದುಕಿನಲ್ಲಿ ಅವಮಾನವಾಗಬಹುದು.

ಧನು ರಾಶಿ

ಇಂದು ಸುಖವಾಗಿ ದಿನ ಕಳೆಯುತ್ತೀರಿ. ಮನೆಯಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರ ದಂಧೆಯಲ್ಲಿ ಆರ್ಥಿಕ ಲಾಭವಾಗಲಿದೆ. ಪಾಲುದಾರಿಕೆಯಿಂದ ಲಾಭವಿದೆ. ಒಡಹುಟ್ಟಿದವರೊಂದಿಗೆ ಸಮಯ ಕಳೆಯಲಿದ್ದೀರಿ. ಹೊಸ ಕಾರ್ಯವನ್ನು ಇಂದು ಆರಂಭಿಸಬಹುದು.

ಮಕರ ರಾಶಿ

ಮನಸ್ಸಿನ ಗೊಂದಲದಿಂದ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ದ್ವಂದ್ವಗಳು ಕಾಡುತ್ತವೆ. ಆರೋಗ್ಯ ಕೂಡ ಕೊಂಚ ಏರುಪೇರಾಗಬಹುದು. ಅತಿಯಾದ ಮಾತಿನಿಂದ ವಾದ- ವಿವಾದದಲ್ಲಿ ಸಿಲುಕಿಕೊಳ್ಳುತ್ತೀರಿ. ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗಬಹುದು.

ಕುಂಭ ರಾಶಿ

ಆನಂದ, ಉತ್ಸಾಹ ಮತ್ತು ಪ್ರಸನ್ನತೆಯ ಅನುಭವವಾಗಲಿದೆ. ಹೊಸ ಕಾರ್ಯದ ಆರಂಭ ಲಾಭದಾಯಕವೆನಿಸಲಿದೆ. ಮಿತ್ರರೊಂದಿಗೆ ಭೋಜನ ಮಾಡಲಿದ್ದೀರಿ. ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಮೀನ ರಾಶಿ

ಇವತ್ತು ಉತ್ಸಾಹದಿಂದ ದಿನ ಕಳೆಯಲಿದ್ದೀರಿ. ಹೊಸ ಕಾರ್ಯ ಆರಂಭಿಸಿದರೆ ಅದರಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದವರೊಂದಿಗೆ ಮೃಷ್ಠಾನ್ನ ಭೋಜನ ಮಾಡುವ ಅವಕಾಶ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...