alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭ ದಿನ. ದಿನವಿಡೀ ಮನಸ್ಸು ಪ್ರಸನ್ನವಾಗಿರುತ್ತದೆ. ಕುಟುಂಬ ನಿರ್ವಹಣೆಗೆ ಸಂಬಂಧಪಟ್ಟಂತೆ ಸಹೋದರರೊಂದಿಗೆ ಚರ್ಚಿಸಲಿದ್ದೀರಿ.

ವೃಷಭ ರಾಶಿ

ಇಂದು ಹೆಚ್ಚು ಸಂವೇದನಾಶೀಲರಾಗಿರುತ್ತೀರಾ. ಇದರಿಂದಾಗಿ ಕೌಟುಂಬಿಕ ಸಮಸ್ಯೆಗಳು ಉದ್ಭವಿಸುತ್ತವೆ. ಇದೇ ಕಾರಣಕ್ಕೆ ಮನಸ್ಸಿನಲ್ಲಿ ಆತಂಕ ಮೂಡಬಹುದು.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕ ಸುಖ ದೊರೆಯುತ್ತದೆ. ಉದ್ಯೋಗದಲ್ಲಿ ಹೆಚ್ಚು ಪರಿಶ್ರಮ ಪಡಬೇಕು. ಅದಕ್ಕೆ ತಕ್ಕ ಪ್ರತಿಫಲ ಕೂಡ ದೊರೆಯುತ್ತದೆ.

ಕರ್ಕ ರಾಶಿ

ಸಾಹಿತ್ಯ ಮತ್ತು ಲೇಖನದಲ್ಲಿ ಹೊಸ ಪ್ರಯತ್ನ ಮಾಡಲಿದ್ದೀರಿ. ಪ್ರಿಯ ವ್ಯಕ್ತಿಯೊಂದಿಗಿನ ಭೇಟಿ ಸುಖಮಯವಾಗಿರುತ್ತದೆ. ಮಕ್ಕಳ ಬಗ್ಗೆ ಶುಭ ಸಮಾಚಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.

ಸಿಂಹ ರಾಶಿ

ವ್ಯವಹಾರದಲ್ಲಿ ಹೊರಗಿನವರ ಹಸ್ತಕ್ಷೇಪವಿರುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಶತ್ರುಗಳಿಂದ ತೊಂದರೆಯಾಗಬಹುದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುತ್ತವೆ.

ಕನ್ಯಾ ರಾಶಿ

ಇಂದು ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಪದೋನ್ನತಿ ಯೋಗವಿದೆ. ವ್ಯಾಪಾರಿಗಳಿಗೆ ಬಾಕಿ ಹಣ ದೊರೆಯಲಿದೆ. ಹಿರಿಯರಿಂದ ಲಾಭವಾಗಲಿದೆ.

ತುಲಾ ರಾಶಿ

ದಿನದ ಆರಂಭದಲ್ಲೇ ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕುಟುಂಬ ಸದಸ್ಯರೊಂದಿಗೆ ಸೌಹಾರ್ದಪೂರ್ಣವಾಗಿ ವರ್ತಿಸಿ.

ವೃಶ್ಚಿಕ ರಾಶಿ

ಕೃಷಿಕರಿಗೆ ಮತ್ತು ವ್ಯಾಪಾರಿಗಳಿಗೆ ಬೆಳಗಿನ ಸಮಯ ಉತ್ತಮವಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಪ್ರತಿಸ್ಪರ್ಧಿಗಳಿಂದ ದೂರವಿರಿ. ವೃಥಾ ಚರ್ಚೆಯಲ್ಲಿ ತೊಡಗಿಕೊಳ್ಳಬೇಡಿ.

ಧನು ರಾಶಿ

ವಾದ-ವಿವಾದಗಳಿಂದ ದೂರವಿರುವ ಮೂಲಕ ಮನೆಯ ವಾತಾವರಣ ಹದಗೆಡದಂತೆ ಎಚ್ಚರವಹಿಸಿ. ಧನ ಪ್ರತಿಷ್ಠೆಗೆ ಹಾನಿಯಾಗಬಹುದು. ಮಹಿಳೆಯರ ಜೊತೆಗಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಅತಿಯಾಗಿ ಭಾವುಕರಾಗಬೇಡಿ.

ಮಕರ ರಾಶಿ

ಇವತ್ತಿನ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ಸ್ನೇಹಿತರು ಸಂಬಂಧಿಕರಿಂದ ಉಡುಗೊರೆ ದೊರೆಯಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದ ನೀವು ಕೂಡ ಪ್ರಸನ್ನವಾಗಿರುತ್ತೀರಿ.

ಕುಂಭ ರಾಶಿ

ಇಂದು ಕೋಪ ಮತ್ತು ಮಾತನ್ನು ನಿಯಂತ್ರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಗಮನವಿರಲಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ಮಾನಸಿಕವಾಗಿ ವ್ಯಗ್ರರಾಗಿರುತ್ತೀರಿ. ಕುಟುಂಬದಲ್ಲಿ ಜಗಳವಾಗುವ ಸಾಧ್ಯತೆ ಇದೆ.

ಮೀನ ರಾಶಿ

ಹೊಸ ಸ್ನೇಹಿತರು ದೊರೆಯುತ್ತಾರೆ. ವ್ಯಾಪಾರ ಮತ್ತು ಆರ್ಥಿಕ ಲಾಭವಾಗಲಿದೆ. ಆದ್ರೆ ಮಧ್ಯಾಹ್ನದ ನಂತರ ಸ್ವಲ್ಪ ಜಾಗರೂಕರಾಗಿರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಹದಗೆಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...