alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹೊಸ ಯೋಜನೆ ಬಗ್ಗೆ ನಿರ್ಧಾರ ಮಾಡಬಹುದು.ಮಾತಿನ ಮೇಲೆ ನಿಯಂತ್ರಣ ಇಲ್ಲದೇ ಇರುವುದರಿಂದ ವಾದ-ವಿವಾದದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ವೃಷಭ ರಾಶಿ

ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಸ್ನೇಹಿತರಿಗಾಗಿ ಹಣ ಖರ್ಚು ಮಾಡಬೇಕಾದ ಸಂದರ್ಭ ಬರಬಹುದು. ಮಕ್ಕಳಿಂದ ಶುಭ ಸಮಾಚಾರ ದೊರೆಯುವ ಸಾಧ್ಯತೆ ಇದೆ.

ಮಿಥುನ ರಾಶಿ

ಅನೈತಿಕ ಕಾರ್ಯ, ವಿಚಾರ ಮತ್ತು ಮಾತುಗಳಿಂದ ದೂರವಿರಿ. ಆರ್ಥಿಕ ತೊಂದರೆ ಎದುರಾಗಬಹುದು. ಆಸ್ತಿ, ವಾಹನ ದಸ್ತಾವೇಜುಗಳ ಬಗ್ಗೆ ಜಾಗರೂಕರಾಗಿರಿ.

ಕರ್ಕ ರಾಶಿ

ವ್ಯಾಪಾರ ಮತ್ತು ಆರ್ಥಿಕ ಲಾಭವಾಗಲಿದೆ. ಆದ್ರೆ ಮಧ್ಯಾಹ್ನದ ನಂತರ ಸ್ವಲ್ಪ ಜಾಗರೂಕರಾಗಿರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಹದಗೆಡಬಹುದು.

ಸಿಂಹ ರಾಶಿ

ಉದ್ಯೋಗ ಮತ್ತು ಉದ್ಯಮ ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿದೆ.ಆರೋಗ್ಯವೂ ಉತ್ತಮವಾಗಿರುತ್ತದೆ. ಗೌರವ-ಪ್ರತಿಷ್ಠೆ ಹೆಚ್ಚಲಿದೆ. ಶರೀರ ಮತ್ತು ಮನಸ್ಸು ಪ್ರಸನ್ನವಾಗಿರುತ್ತದೆ.

ಕನ್ಯಾ ರಾಶಿ

ಕುಟುಂಬದವರೊಂದಿಗೆ ಸುತ್ತಾಡಲು ಅಥವಾ ಸಮೀಪದ ಸ್ಥಳಕ್ಕೆ ಪ್ರವಾಸ ತೆರಳಲಿದ್ದೀರಿ. ಆಧ್ಯಾತ್ಮಿಕ ಸಿದ್ಧಿ ದೊರೆಯಲಿದೆ. ಹೊಸ ಕಾರ್ಯ ಆರಂಭಕ್ಕೆ ಶುಭ ಸಮಯವಲ್ಲ.

ತುಲಾ ರಾಶಿ

ಸಂಬಂಧಿಕರು ಮತ್ತು ಸ್ನೇಹಿತರ ಭೇಟಿಯಿಂದ ಮನಸ್ಸು ಪ್ರಸನ್ನವಾಗಲಿದೆ. ಉದ್ಯಮದಲ್ಲಿ ಹಣದ ಹೂಡಿಕೆಗಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ವ್ಯಾಪಾರದಲ್ಲಿ ಆದಾಯ ಹೆಚ್ಚಲಿದೆ.

ವೃಶ್ಚಿಕ ರಾಶಿ

ಇವತ್ತಿನ ದಿನವನ್ನು ಆನಂದವಾಗಿ ಕಳೆಯಲಿದ್ದೀರಿ. ಕೆಲಸ ಕಾರ್ಯಗಳೆಲ್ಲ ವ್ಯವಸ್ಥಿತವಾಗಿ ನಡೆಯಲಿವೆ. ಅಪೂರ್ಣವಾಗಿದ್ದ ಕೆಲಸಗಳನ್ನೆಲ್ಲ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ಅಧಿಕ ಪರಿಶ್ರಮ ಪಟ್ಟರೂ ತಕ್ಕ ಪ್ರತಿಫಲ ದೊರೆಯದೇ ಇರುವುದರಿಂದ ನಿರಾಸೆ ಆವರಿಸಬಹುದು.

ಮಕರ ರಾಶಿ

ಆದಾಯ ವೃದ್ಧಿಯಾಗುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಪದೋನ್ನತಿಯ ಸಾಧ್ಯತೆಗಳಿವೆ. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಸ್ನೇಹದಿಂದಿರುತ್ತೀರಿ.

ಕುಂಭ ರಾಶಿ

ಹಠಮಾರಿ ವರ್ತನೆಯನ್ನು ಬಿಟ್ಟುಬಿಡಿ, ಇಲ್ಲದೇ ಇದ್ದಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಇವತ್ತು ಪ್ರವಾಸಕ್ಕೆ ಯೋಜನೆ ಹಾಕಿಕೊಂಡಲ್ಲಿ ಅದು ಪೂರ್ಣಗೊಳ್ಳುವುದು ಅನುಮಾನ.

ಮೀನ ರಾಶಿ

ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಮೂಡದಂತೆ ಎಚ್ಚರ ವಹಿಸಿ. ನಕಾರಾತ್ಮಕ ಭಾವನೆ ಮೂಡಿದರೂ ಅದನ್ನು ಆದಷ್ಟು ಬೇಗ ದೂರಮಾಡಿಕೊಳ್ಳುವುದು ಒಳಿತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...