alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಉದ್ಯೋಗಿಗಳಿಗೆ ಶುಭ ದಿನ. ಹೊಸ ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಿದ್ದೀರಿ.

ವೃಷಭ ರಾಶಿ

ಹಣ, ಗೌರವ ಮತ್ತು ಪ್ರತಿಷ್ಠೆ ವೃದ್ಧಿಸಲಿದೆ. ವ್ಯಾಪಾರಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾಗುತ್ತದೆ. ಯಾವುದೇ ಹೊಸ ಕಾರ್ಯ ಆರಂಭಿಸಲು ದಿನ ಅನುಕೂಲಕರವಾಗಿಲ್ಲ.

ಮಿಥುನ ರಾಶಿ

ಶಾರೀರಿಕ ಅಸ್ವಸ್ಥತೆ ಕಾಡಲಿದೆ. ಇಂದು ಕೆಲಸ ಮಾಡುವ ಉತ್ಸಾಹ ನಿಮ್ಮಲ್ಲಿ ಕಡಿಮೆ ಇರುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಎಚ್ಚರಿಕೆಯಿಂದ ವ್ಯವಹರಿಸಿ. ಅಧಿಕ ಹಣ ಖರ್ಚಾಗಲಿದೆ.

ಕರ್ಕ ರಾಶಿ

ಅನಾರೋಗ್ಯಕ್ಕೆ ತುತ್ತಾಗಿರುವವರು ಇವತ್ತು ಸ್ವಲ್ಪ ಚೇತರಿಕೆ ಕಾಣಲಿದ್ದಾರೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಅರ್ಧಕ್ಕೆ ನಿಂತಿದ್ದ ಕೆಲಸವನ್ನು ಇವತ್ತು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ.

ಸಿಂಹ ರಾಶಿ

ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಮಹಿಳಾ ಮಿತ್ರರಿಗಾಗಿ ಹಣ ಖರ್ಚಾಗಲಿದೆ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಉತ್ಸಾಹದ ಕೊರತೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.

ಕನ್ಯಾ ರಾಶಿ

ಇವತ್ತು ನಿಮ್ಮ ಮನಸ್ಸು ಖುಷಿಯಾಗಿರುವುದಿಲ್ಲ. ಸ್ಪೂರ್ತಿಯ ಕೊರತೆ ಸಹ ಕಾಡಲಿದೆ. ಮನಸ್ಸಿನಲ್ಲಿ ಖಿನ್ನತೆ ಉಂಟಾಗಬಹುದು. ನಿದ್ದೆ ಬಾರದೇ ಒದ್ದಾಡುವ ಪರಿಸ್ಥಿತಿ ಬರುತ್ತದೆ. ಅಧಿಕ ಹಣ ಖರ್ಚಾಗಲಿದೆ.

ತುಲಾ ರಾಶಿ

ಮನಸ್ಸು ಚಿಂತಾಗ್ರಸ್ಥವಾಗಿರಲಿದೆ, ಗೊಂದಲಗಳು ಕಾಡಬಹುದು. ಇದರಿಂದಾಗಿ ಯಾವುದೇ ಕಾರ್ಯವನ್ನು ದೃಢನಿಶ್ಚಯದಿಂದ ಮಾಡಲು ಸಾಧ್ಯವಾಗುವುದಿಲ್ಲ. ಅದೃಷ್ಟ ನಿಮ್ಮ ಜೊತೆಗಿಲ್ಲದೇ ಇರುವುದರಿಂದ ಯಾವುದೇ ಮಹತ್ವದ ಕೆಲಸ ಮಾಡಬೇಡಿ.

ವೃಶ್ಚಿಕ ರಾಶಿ

ಮನಸ್ಸಿನಲ್ಲಿ ಪ್ರೇಮದ ಭಾವನೆಗಳು ಮೂಡಲಿವೆ. ಹಣ ಗಳಿಕೆಗಾಗಿ ಯೋಜನೆ ರೂಪಿಸುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಆಭರಣ, ವಸ್ತ್ರ, ಸೌಂದರ್ಯ ವರ್ಧಕಗಳ ಖರೀದಿಗೆ ಹಣ ವ್ಯಯವಾಗಲಿದೆ.

ಧನು ರಾಶಿ

ಇಂದು ನಿಮಗೆ ಶುಭದಿನ. ನಿಮ್ಮ ಸೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಸಲಿದೆ. ವೈಚಾರಿಕ ಸ್ಥಿರತೆಯಿಂದಾಗಿ ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಮಕರ ರಾಶಿ

ಇವತ್ತು ನಿಮಗೆ ಅತ್ಯಂತ ಲಾಭದಾಯಕ ದಿನ. ಆದಾಯದಲ್ಲಿ ವೃದ್ಧಿಯಾಗಲಿದೆ. ಇನ್ನಿತರ ವಿಧಾನಗಳಿಂದ್ಲೂ ಆರ್ಥಿಕ ಲಾಭವಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ.

ಕುಂಭ ರಾಶಿ

ವ್ಯವಹಾರಕ್ಕೆ ಇಂದು ಉತ್ತಮ ದಿನ. ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿವೆ.

ಮೀನ ರಾಶಿ

ಇಂದು ನಿಮಗೆ ಶುಭದಿನ. ಸಂಬಂಧಿಗಳೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಸ್ತ್ರೀ ಮಿತ್ರರಿಂದ ಲಾಭ ದೊರೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...