alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಕುಟುಂಬದವರೊಂದಿಗೆ ಕುಳಿತು ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ರೂಪು ರೇಷೆ ಬದಲಾಯಿಸುವ ಬಗ್ಗೆ ಚಿಂತನೆ ನಡೆಯಲಿದೆ. ಹೊಸ ಬಗೆಯ ಅಲಂಕಾರವನ್ನೂ ಮಾಡಲಿದ್ದೀರಿ.

ವೃಷಭ ರಾಶಿ

ವಿದೇಶದಿಂದ ಶುಭ ಸಮಾಚಾರ ಬರುತ್ತದೆ. ವಿದೇಶಕ್ಕೆ ತೆರಳುವ ಇಚ್ಛೆಯುಳ್ಳವರಿಗೆ ಉತ್ತಮ ಅವಕಾಶ ದೊರೆಯುತ್ತದೆ. ಧಾರ್ಮಿಕ ಯಾತ್ರೆಯಿಂದ ನಿಮ್ಮ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಕೆಲಸದ ಒತ್ತಡ ಹೆಚ್ಚಾಗಿರುತ್ತದೆ.

ಮಿಥುನ ರಾಶಿ

ಇಂದು ಅಶುಭ ಘಟನೆಗಳು ಜರುಗುವ ಸೂಚನೆ ಇದೆ. ಹಾಗಾಗಿ ಅತ್ಯಂತ ಜಾಗರೂಕರಾಗಿರಿ. ಕೋಪದಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಹೆಚ್ಚು.

ಕರ್ಕ ರಾಶಿ

ಮಿತ್ರರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ. ವ್ಯಾಪಾರದಲ್ಲೂ ಲಾಭವಾಗುವ ಸಾಧ್ಯತೆ ಇದೆ. ಪಾಲುದಾರರಿಂದ್ಲೂ ಲಾಭವಿದೆ. ಸಮಾಜದಲ್ಲಿ ಗೌರವ ವೃದ್ಧಿಸಲಿದೆ.

ಸಿಂಹ ರಾಶಿ

ಇಂದು ಮನಸ್ಸಿನಲ್ಲಿ ಅನುಮಾನ ಮತ್ತು ಉದಾಸೀನತೆಯ ಭಾವನೆಗಳು ಹೆಚ್ಚಾಗಿರುತ್ತವೆ. ಯಾವುದಾದ್ರೂ ಕಾರಣದಿಂದ ದೈನಿಕ ಕಾರ್ಯಗಳಿಗೆ ಅಡಚಣೆ ಉಂಟಾಗಬಹುದು. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಕನ್ಯಾ ರಾಶಿ

ವಿದ್ಯಾರ್ಥಿಗಳಿಗೆ ಇಂದು ಕಠಿಣ ಸಮಯ. ಕುಟುಂಬಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಣಯ ತೆಗೆದುಕೊಳ್ಳಲಿದ್ದೀರಿ. ಷೇರು ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆಯಿಂದಿರಿ.

ತುಲಾ ರಾಶಿ

ದಿನವಿಡೀ ಅಸ್ವಸ್ಥತೆಯ ಅನುಭವವಾಗಲಿದೆ. ತಾಯಿಯ ಬಗ್ಗೆ ಚಿಂತೆ ಕಾಡಲಿದೆ. ಆಸ್ತಿ ಖರೀದಿ ದಸ್ತಾವೇಜಿಗೆ ಸಂಬಂಧಿಸಿದಂತೆ ಎಚ್ಚರ ವಹಿಸಿ. ಪ್ರವಾಸವನ್ನು ಮುಂದೂಡುವುದು ಒಳಿತು.

ವೃಶ್ಚಿಕ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭ ದಿನ. ದಿನವಿಡೀ ಮನಸ್ಸು ಪ್ರಸನ್ನವಾಗಿರುತ್ತದೆ. ಕುಟುಂಬ ನಿರ್ವಹಣೆಗೆ ಸಂಬಂಧಪಟ್ಟಂತೆ ಸಹೋದರರೊಂದಿಗೆ ಚರ್ಚಿಸಲಿದ್ದೀರಿ.

ಧನು ರಾಶಿ

ಇವತ್ತು ನಿಮ್ಮ ಮನಸ್ಸು ಗೊಂದಲಮಯವಾಗಿರುತ್ತದೆ. ಕುಟುಂಬದಲ್ಲಿ ಅನುಕೂಲಕರ ವಾತಾವರಣವಿರುವುದಿಲ್ಲ. ಇದರಿಂದ ಉದಾಸೀನಗೊಳ್ಳಲಿದ್ದೀರಿ. ನಿಗದಿತ ಕೆಲಸಗಳು ಪೂರ್ಣಗೊಳ್ಳಲಿವೆ.

ಮಕರ ರಾಶಿ

ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ಮನೆಯಲ್ಲಿ ಮಂಗಳಕರ ವಾತಾವರಣವಿರುತ್ತದೆ. ಮಿತ್ರರಿಂದ ಉಪಹಾರ ದೊರೆಯಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.

ಕುಂಭ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಕುಟುಂಬದವರೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಷೇರು ವಹಿವಾಟಿನಲ್ಲಿ ಜಾಗರೂಕರಾಗಿರಿ.

ಮೀನ ರಾಶಿ

ಆಕಸ್ಮಿಕ ಧನ ಲಾಭವಾಗಬಹುದು. ಹಳೆ ಮಿತ್ರರನ್ನು ಭೇಟಿಯಾಗಲಿದ್ದೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಮಿತ್ರರಿಂದ ಭವಿಷ್ಯದಲ್ಲಿ ಲಾಭವಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...