alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗುತ್ತದೆ. ವ್ಯರ್ಥ ಖರ್ಚಿನ ಪ್ರಮಾಣ ಹೆಚ್ಚಲಿದೆ. ನಿಮ್ಮಲ್ಲಿ ಸ್ಪೂರ್ತಿಯ ಕೊರತೆಯಿರುತ್ತದೆ. ಕುಟುಂಬದವರೊಂದಿಗೆ ಜಗಳವಾಗಲಿದೆ.

ವೃಷಭ ರಾಶಿ

ಇಂದು ಆನಂದದ ಅನುಭವವಾಗಲಿದೆ. ವ್ಯಾಪಾರ ಮತ್ತು ಆದಾಯ ವೃದ್ಧಿಯಾಗಲಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತೆ. ಕೆಲಸದ ಒತ್ತಡ ಮತ್ತು ಹೋಟೆಲ್ ಊಟ-ತಿಂಡಿಯಿಂದ ನಿಮ್ಮ ಆರೋಗ್ಯ ಹದಗೆಡಬಹುದು.

ಮಿಥುನ ರಾಶಿ

ನೀವು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕಾಗಿ ಬರುತ್ತದೆ. ಕಠಿಣ ಪರಿಶ್ರಮದ ಬಳಿಕ ನಿಮಗೆ ಪ್ರತಿಫಲ ದೊರೆಯುತ್ತದೆ. ಜೀವನ ಸಂಗಾತಿ ಜೊತೆಗೆ ಅನ್ಯೋನ್ಯತೆ ಇರಲಿದೆ.

ಕರ್ಕ ರಾಶಿ

ಹಣ ಗಳಿಸಲು ನಿಮಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಒಂದಕ್ಕಿಂತ ಹೆಚ್ಚಿನ ಪ್ರೇಮ ಸಂಬಂಧಗಳು ಏರ್ಪಡುವ ಸಾಧ್ಯತೆ ಇದೆ. ಆಸ್ತಿ, ಸಂಪತ್ತು ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ

ನಿಮ್ಮ ಮೈ ಮನಗಳಲ್ಲಿ ಉತ್ಸಾಹದ ಸಂಚಾರವಾಗಲಿದೆ. ಆದ್ರೂ ಒಂದು ರೀತಿಯ ಶಂಕೆ, ಅನುಮಾನಗಳು ಇರುತ್ತವೆ. ನಿಮ್ಮ ಕೋಪದಿಂದಾಗಿ ಕೆಲಸಗಳು ಕೈಗೂಡುವುದಿಲ್ಲ.

ಕನ್ಯಾ ರಾಶಿ

ಈ ಸಮಯ ಆರ್ಥಿಕವಾಗಿ ಭಾಗ್ಯಶಾಲಿಯಾಗಿದೆ. ಹಣ ಗಳಿಸಲು ವಿವಿಧ ರೀತಿಯ ಅವಕಾಶಗಳು ದೊರೆಯುತ್ತವೆ. ಬಾಕಿ ವಸೂಲಿ ಮಾಡಲಿದ್ದೀರಿ.

ತುಲಾ ರಾಶಿ

ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ. ಮನಸ್ಸು ಪ್ರಸನ್ನವಾಗಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಲಿದ್ದೀರಿ.

ವೃಶ್ಚಿಕ ರಾಶಿ

ತೀವ್ರ ಪೈಪೋಟಿ ಎದುರಾಗಲಿದೆ. ಪ್ರತಿಸ್ಪರ್ಧಿಗಳಿಂದ ಸವಾಲನ್ನು ಎದುರಿಸಲಿದ್ದೀರಿ. ಆದ್ರೆ ನಿಮ್ಮ ಬುದ್ಧಿಮತ್ತೆಯಿಂದಾಗಿ ಕಠಿಣ ಸ್ಥಿತಿಗಳನ್ನು ದೂರ ಮಾಡಿಕೊಳ್ಳಲಿದ್ದೀರಿ.

ಧನು ರಾಶಿ

ಮಾನಸಿಕ ಒತ್ತಡ ಕಡಿಮೆಯಿರುತ್ತದೆ. ಮಕ್ಕಳಿಗೆ ಸಂಬಂಧಪಟ್ಟ ಚಿಂತೆ ಕಾಡಲಿದೆ. ರಾಜಕೀಯ ಕೆಲಸಗಳಲ್ಲಿ ಲಾಭವಾಗಲಿದೆ.

ಮಕರ ರಾಶಿ

ಭಾಗ್ಯ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಲಿದ್ದೀರಿ. ಜೀವನದಲ್ಲಿ ದೊಡ್ಡ ಬದಲಾವಣೆ ಆಗಬಹುದು. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ.

ಕುಂಭ ರಾಶಿ

ನಿಮ್ಮ ವ್ಯಕ್ತಿತ್ವ ಆಕರ್ಷಣೀಯವಾಗಿರುತ್ತದೆ. ಹಾಗಾಗಿ ಜನರು ನಿಮ್ಮಿಂದ ಅತಿ ಶೀಘ್ರವಾಗಿ ಆಕರ್ಷಣೆಗೊಳಗಾಗುತ್ತಾರೆ. ಆರ್ಥಿಕ ತೊಂದರೆಗಳಿಲ್ಲ.

ಮೀನ ರಾಶಿ

ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಿ. ಊಟ-ತಿಂಡಿ ಬಗ್ಗೆ ಗಮನ ವಹಿಸಿ.

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...