alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಆರ್ಥಿಕ ಲಾಭವಾಗಲಿದೆ. ದೀರ್ಘಾವಧಿಗೆ ಆರ್ಥಿಕ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ವ್ಯಾಪಾರದಲ್ಲಿ ತೊಡಗಿದ್ದರೆ ಅದನ್ನು ವಿಸ್ತರಿಸಲು ಯೋಜನೆ ಹಾಕಿಕೊಳ್ಳಬಹುದು. ಶರೀರ ಮತ್ತು ಮನಸ್ಸಿಗೆ ಆಹ್ಲಾದದ ಅನುಭವವಾಗಲಿದೆ.

ವೃಷಭ ರಾಶಿ

ನಿಮ್ಮ ಮಾತಿನಿಂದ್ಲೇ ಇತರರನ್ನು ಮಂತ್ರಮುಗ್ಧರನ್ನಾಗಿಸಿ ಅದರ ಲಾಭ ಪಡೆಯುತ್ತೀರಿ. ನಿಮ್ಮ ವೈಚಾರಿಕ ಸಮೃದ್ಧಿ ಹೆಚ್ಚಾಗಲಿದೆ. ಮನಸ್ಸು ಉಲ್ಲಾಸಮಯವಾಗಿರುತ್ತದೆ.

ಮಿಥುನ ರಾಶಿ

ನಿಮ್ಮ ಮನಸ್ಸಿನಲ್ಲಿ ಅನೇಕ ರೀತಿಯ ವಿಚಾರಗಳು ಬರಬಹುದು. ಅದರಲ್ಲಿ ನೀವು ಕಳೆದುಹೋಗುತ್ತೀರಿ. ಬೌದ್ಧಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಯಾವುದೇ ರೀತಿಯ ವಾದ-ವಿವಾದದಲ್ಲಿ ತೊಡಗಿಕೊಳ್ಳಬೇಡಿ. ಇಂದು ಹೆಚ್ಚು ಸಂವೇದನಾಶೀಲರಾಗಿರುತ್ತೀರಿ.

ಕರ್ಕ ರಾಶಿ

ಇವತ್ತು ನಿಮಗೆ ಶುಭ ದಿನ. ಹೊಸ ಕಾರ್ಯ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಮಿತ್ರರು ಮತ್ತು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ದೂರ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಸಿಂಹ ರಾಶಿ

ಇವತ್ತು ನಿಮಗೆ ಮಧ್ಯಮ ಫಲದಾಯಕ ದಿನ. ಆರ್ಥಿಕ ಲಾಭವೂ ಇದೆ. ಖರ್ಚು ಸಹ ಹೆಚ್ಚಾಗಲಿದೆ. ಸಂಬಂಧಿಕರಿಂದ ಶುಭ ಸಮಾಚಾರ ದೊರೆಯಲಿದೆ. ವ್ಯಾಪಾರ ವೃದ್ಧಿಸಲಿದೆ.

ಕನ್ಯಾ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ವಿಚಾರಗಳ ಶ್ರೀಮಂತಿಕೆ ಹೆಚ್ಚಲಿದೆ. ನಿಮ್ಮ ಮಾತುಗಳಿಂದ್ಲೇ ಮಧುರ ಸಂಬಂಧಗಳು ಏರ್ಪಡಲಿವೆ. ವ್ಯಾಪಾರದ ದೃಷ್ಟಿಕೋನದಿಂದ್ಲೂ ಇಂದು ಲಾಭದಾಯಕ ದಿನ.

ತುಲಾ ರಾಶಿ

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಅವಿವೇಕದ ನಡವಳಿಕೆಯಿಂದ ನಿಮಗೆ ತೊಂದರೆ ಉಂಟಾಗಲಿದೆ. ಅಂತಹ ವರ್ತನೆಯಿಂದ ದೂರವಿರಿ. ದುರ್ಘಟನೆ ಬಗ್ಗೆ ಜಾಗರೂಕರಾಗಿರಿ. ಹೆಚ್ಚು ಹಣ ಖರ್ಚಾಗಲಿದೆ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ನೌಕರಿ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಸುಂದರ ಸ್ಥಳಕ್ಕೆ ತೆರಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

ಧನು ರಾಶಿ

ಇವತ್ತು ನಿಮ್ಮ ಕಾರ್ಯಗಳು ಯಶಸ್ವಿಯಾಗಲಿವೆ. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿದೆ. ವ್ಯಾಪಾರ ಅಥವಾ ಉದ್ಯಮವನ್ನು ವಿಸ್ತರಿಸಬಹುದು. ಪದೋನ್ನತಿ ದೊರೆಯುವ ಸಾಧ್ಯತೆಯೂ ಇದೆ. ಗೃಹಸ್ಥ ಜೀವನವೂ ಸುಖಮಯವಾಗಿರುತ್ತದೆ.

ಮಕರ ರಾಶಿ

ಬೌದ್ಧಿಕ ಕಾರ್ಯ ಮತ್ತು ವ್ಯಾಪಾರದಲ್ಲಿ ಹೊಸ ಶೈಲಿ ಅಳವಡಿಸಿಕೊಳ್ಳುತ್ತೀರಿ. ಸಾಹಿತ್ಯ ಮತ್ತು ಬರವಣಿಗೆಗೆ ಪ್ರೋತ್ಸಾಹ ಸಿಗಲಿದೆ. ದೇಹದಲ್ಲಿ ಆಯಾಸದ ಅನುಭವವಾಗಬಹುದು. ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

ಕುಂಭ ರಾಶಿ

ಅನೈತಿಕ ಅಥವಾ ನಿಷೇಧಾತ್ಮಕ ಕೆಲಸ ಮಾಡಬೇಡಿ. ನಕಾರಾತ್ಮಕ ವಿಚಾರಗಳಿಂದ ದೂರವಿರಿ. ಅಧಿಕ ಚಿಂತೆ ಮತ್ತು ಕೋಪ ನಿಮ್ಮ ಮನಶಾಂತಿಯನ್ನು ಹಾಳುಗೆಡವುತ್ತದೆ. ಕುಟುಂಬದಲ್ಲಿ ಜಗಳವಾಗಬಹುದು.

ಮೀನ ರಾಶಿ

ವ್ಯಾಪಾರಿಗಳಿಗೆ ಉಜ್ವಲ ಭವಿಷ್ಯವಿದೆ. ಪಾಲುದಾರಿಕೆ ಮಾಡಿಕೊಳ್ಳಲು ಸಮಯ ಚೆನ್ನಾಗಿದೆ. ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...