alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಆಸ್ತಿಗೆ ಸಂಬಂಧಪಟ್ಟ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸಹೋದರರು, ಸಂಬಂಧಿಕರ ಸಂಪೂರ್ಣ ಸಹಕಾರ ಸಿಗಲಿದೆ. ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸುತ್ತೀರಿ.

ವೃಷಭ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆ ಉಂಟಾಗಲಿದೆ. ಇದರಿಂದ ವ್ಯಗ್ರತೆ ಹೆಚ್ಚಾಗುತ್ತದೆ. ಹಣ ಮತ್ತು ಕೀರ್ತಿಗೆ ಹಾನಿಯಾಗಬಹುದು.

ಮಿಥುನ ರಾಶಿ

ಇವತ್ತು ದಿನದ ಆರಂಭ ಅತ್ಯಂತ ಆರಾಮದಾಯಕವಾಗಿಯೂ ಮತ್ತು ಸ್ಪೂರ್ತಿದಾಯಕವಾಗಿಯೂ ಇರುತ್ತದೆ. ಮಿತ್ರರ ಜೊತೆಗೆ ಪಾರ್ಟಿಗೆ ತೆರಳಲು ಪ್ಲಾನ್ ಹಾಕಿಕೊಳ್ಳಬಹುದು.

ಕರ್ಕ ರಾಶಿ

ಇವತ್ತು ಇಡೀ ದಿನ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಅವಕಾಶ ಸಿಗುತ್ತದೆ. ನಿಗದಿತ ಕೆಲಸ ಪೂರ್ಣವಾಗಲಿದೆ, ಯಶಸ್ಸು ಸಿಗಲಿದೆ.

ಸಿಂಹ ರಾಶಿ

ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಒಲವು ಮೂಡಲಿದೆ. ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಉದರ ಸಂಬಂಧಿ ತೊಂದರೆಯಿಂದ ಶರೀರ ಅಸ್ವಸ್ಥವಾಗಲಿದೆ.

ಕನ್ಯಾ ರಾಶಿ

ಯಾವುದೇ ಕಾರಣಕ್ಕೂ ಕೋರ್ಟ್ ಕಚೇರಿಗಳಲ್ಲಿ ಸಾಕ್ಷ್ಯ ನುಡಿಯಲು ಹೋಗಬೇಡಿ. ಮನಸ್ಸು ವ್ಯಗ್ರವಾಗಿರುತ್ತದೆ. ಇದರಿಂದ ಶಾರೀರಿಕವಾಗಿಯೂ ಆಲಸ್ಯ ಮತ್ತು ಅನಾರೋಗ್ಯದ ಅನುಭವವಾಗುತ್ತದೆ.

ತುಲಾ ರಾಶಿ

ಕಚೇರಿಯಲ್ಲಿ ಹೆಚ್ಚುವರಿ ಜವಾಬ್ಧಾರಿ ಸಿಗಬಹುದು. ಹೊಸ ಕೆಲಸ ಆರಂಭಿಸುವ ಮನಸ್ಸು ಮಾಡುತ್ತೀರಾ. ಇತರರ ಮಾತನ್ನು ಗಮನವಿಟ್ಟು ಕೇಳಿ, ಸಕಾರಾತ್ಮಕವಾಗಿರಿ. ಕಚೇರಿ ಕೆಲಸಗಳಿಗೆ ಎದುರಾಗಿದ್ದ ವಿಘ್ನ ನಿವಾರಣೆಯಾಗಲಿದೆ. ಹಣ, ಸಮಯ, ಸಂಪನ್ಮೂಲದ ವಿಷಯದಲ್ಲಿ ವಿಘ್ನ ಎದುರಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ರಹಸ್ಯ ವಿಚಾರವೊಂದು ನಿಮ್ಮ ಮುಂದೆ ಬರಲಿದೆ. ಸ್ನೇಹಿತರು ಮತ್ತು ಇತರ ವ್ಯವಹಾರಗಳಲ್ಲಿ ಬ್ಯುಸಿಯಾಗಿರುತ್ತೀರಾ. ಈ ಭೇಟಿಯಿಂದ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಬದುಕೇ ಬದಲಾಗುವಂತಹ ಅವಕಾಶವೊಂದು ಸದ್ಯದಲ್ಲೇ ದೊರೆಯಲಿದೆ. ಆರೋಗ್ಯವೂ ಸುಧಾರಿಸಲಿದೆ. ಖರ್ಚು ಹೆಚ್ಚಾಗಲಿದೆ, ಕಳ್ಳತನದ ಅಪಾಯವೂ ಇದ್ದು ಎಚ್ಚರಿಕೆಯಿಂದಿರಿ.

ಧನು ರಾಶಿ

ಜನರು ನಿಮಗೆ ಸಲಹೆ ಜೊತೆಗೆ ಸಹಾಯವನ್ನೂ ಮಾಡಲಿದ್ದಾರೆ. ನೀವು ಅಂದುಕೊಂಡ ಕೆಲಸ ಕೈಗೂಡಲಿದೆ. ಈ ರಾಶಿಯ ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಯೋಗವಿದೆ. ಆದ್ರೆ ಕಚೇರಿ ವಾತಾವರಣ ಕೊಂಚ ಗಂಭೀರವಾಗಿರಲಿದೆ. ಸಮಾಧಾನವಾಗಿ ಕೆಲಸ ಮಾಡಿ. ಉದ್ಯೋಗದಲ್ಲಿ ಜವಾಬ್ಧಾರಿ ಹೆಚ್ಚುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತಿತರಾಗುತ್ತೀರಿ.

ಮಕರ ರಾಶಿ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಅವುಗಳಿಗಾಗಿ ಹಣ ಖರ್ಚಾಗಲಿದೆ. ಕೋರ್ಟು ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಾಗಿ ಬರಬಹುದು. ವ್ಯಾಪಾರದಲ್ಲಿ ವಿಘ್ನ ಎದುರಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಮಧುರ ಮಾತುಗಳಿಂದ್ಲೇ ನೀವು ಕಾರ್ಯ ಸಾಧಿಸುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ. ಬೌದ್ಧಿಕ ವಿಷಯಗಳ ಚರ್ಚೆಯಲ್ಲಿ ಪಾಲ್ಗೊಳ್ಳಬೇಡಿ. ಮೃಷ್ಟಾನ್ನ ಭೋಜನದ ಯೋಗವಿದೆ.

ಮೀನ ರಾಶಿ

ಇವತ್ತು ಸುಖ-ಶಾಂತಿಯಿಂದ ದಿನ ಕಳೆಯುತ್ತೀರಿ. ಸಹೋದರರೊಂದಿಗಿನ ಆತ್ಮೀಯತೆ ಹೆಚ್ಚಲಿದೆ. ಅವರ ಸಹಕಾರ ನಿಮಗೆ ಸಿಗಲಿದೆ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...