alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದ ತುಂಬಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯ ಪೀಡಿತರ ದೇಹಸ್ಥಿತಿ ಸುಧಾರಿಸಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

ವೃಷಭ ರಾಶಿ

ಮನಸ್ಸು ಮತ್ತು ದೇಹಕ್ಕೆ ಸ್ಪೂರ್ತಿಯ ಕೊರತೆಯಿಲ್ಲ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ.

ಮಿಥುನ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಬೌದ್ಧಿಕ ಕಾರ್ಯಗಳಲ್ಲಿ ಹೊಸ ವಿಚಾರಗಳಿಂದ ಪ್ರಭಾವಿತರಾಗುತ್ತೀರಿ, ಅದನ್ನು ಅಳವಡಿಸಿಕೊಳ್ತೀರಿ. ಸೃಜನಾತ್ಮಕ ಶಕ್ತಿಯ ಪರಿಚಯವಾಗಲಿದೆ.

ಕರ್ಕ ರಾಶಿ

ವಸ್ತ್ರಾಭರಣಗಳ ಖರೀದಿ ನಿಮಗೆ ರೋಮಾಂಚಕ ಹಾಗೂ ಆನಂದದಾಯಕವಾಗಿರುತ್ತದೆ. ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ಸಿಂಹ ರಾಶಿ

ವ್ಯಾಪಾರ ವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಿದ್ದೀರಿ. ಹೊಸ ಯೋಜನೆಗಳಿಂದಾಗಿ ವ್ಯಾಪಾರ ಇನ್ನಷ್ಟು ಲಾಭ ತಂದುಕೊಡಲಿದೆ. ಆದ್ರೆ ನಿರೀಕ್ಷಿತ ಯಶಸ್ಸು ಸಿಗಲು ಕೊಂಚ ವಿಳಂಬವಾಗಬಹುದು.

ಕನ್ಯಾ ರಾಶಿ

ವ್ಯಾಪಾರದಲ್ಲಿ ಬೆಳವಣಿಗೆಯ ಯೋಗವಿದೆ. ಕಮಿಷನ್ ರೂಪದಲ್ಲಿಯೂ ಹಣ ಸಿಗಲಿದೆ. ಪ್ರೇಮಿಗಳಿಗೆ ಇವತ್ತು ಪ್ರಣಯದ ಪರಿಚಯವಾಗಲಿದೆ. ಒಳ್ಳೆ ಭೋಜನ, ವಸ್ತ್ರ ಹಾಗೂ ವಾಹನ ಸುಖದ ಯೋಗವಿದೆ.

ತುಲಾ ರಾಶಿ

ನಿಮ್ಮ ಭಾವನೆಗಳಿಗೆ ಕೆಲವರು ನೋವುಂಟು ಮಾಡುವ ಪ್ರಸಂಗ ಎದುರಾಗಬಹುದು. ತಾಯಿಯ ಅನಾರೋಗ್ಯದ ಆತಂಕ ಉಂಟಾಗಲಿದೆ. ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇರಲಿ.

ವೃಶ್ಚಿಕ ರಾಶಿ

ಇಂದು ನಿಮಗೆ ತೀವ್ರ ಸಂವೇದನಶೀಲತೆಯ ಅನುಭವವಾಗಲಿದೆ. ಆರ್ಥಿಕ ಯೋಜನೆಗಳಲ್ಲಿ ಆರಂಭಿಕ ವಿಘ್ನ ಎದುರಾಗಲಿದೆ. ಆದ್ರೆ ನಂತರ ನಿಮ್ಮ ಕಾರ್ಯ ಸುಲಭವಾಗಿ ನೆರವೇರಲಿದೆ.

ಧನು ರಾಶಿ

ಇಂದು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಉತ್ಸಾಹದಿಂದ ಇರುತ್ತೀರಿ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಅಪೂರ್ಣವಾಗಿದ್ದ ಕೆಲಸಗಳೆಲ್ಲ ಪೂರ್ಣಗೊಳ್ಳಲಿವೆ. ಮಿತ್ರರೊಂದಿಗೆ ಉಪಹಾರ ಮಾಡಲಿದ್ದೀರಿ.

ಮಕರ ರಾಶಿ

ಮಹತ್ವಪೂರ್ಣ ಕಾರ್ಯವನ್ನು ಇವತ್ತು ಪೂರ್ಣಗೊಳಿಸಿ. ಧನಲಾಭದ ಸಂಭವ ಇದೆ. ಮನಸ್ಸಿನ ಉದಾಸೀನತೆ ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟು ಮಾಡಬಹುದು ಎಚ್ಚರ ವಹಿಸಿ.

ಕುಂಭ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇವತ್ತು ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ಮೀನ ರಾಶಿ

ಇವತ್ತು ನಿಮಗೆ ಶುಭದಿನ. ಧನವೃದ್ಧಿ ಹಾಗೂ ಪದೋನ್ನತಿಯ ಯೋಗವಿದೆ. ಉದ್ಯಮದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ. ಮನಸ್ಸು ಕೂಡ ಚಿಂತೆರಹಿತವಾಗಿರಲಿದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...