alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಲಕ್ಷ್ಮಿಯ ಕೃಪಾಕಟಾಕ್ಷ ದೊರೆಯಲಿದೆ. ಅವಿವಾಹಿತರಿಗೆ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಸಾಮಾಜಿಕವಾಗಿ ಯಶಸ್ಸು ಮತ್ತು ಕೀರ್ತಿ ನಿಮ್ಮದಾಗಲಿದೆ. ವ್ಯಾಪಾರದಲ್ಲೂ ಲಾಭ ದೊರೆಯಬಹುದು. ಪ್ರವಾಸಕ್ಕೆ ಹೋಗುವ ಸಂಭವವೂ ಇದೆ.

ವೃಷಭ ರಾಶಿ

ಹಣ ಹೂಡಲು ಒಂದು ಅದ್ಭುತ ಉಪಾಯ ಹೊಳೆಯಲಿದೆ. ಇತರರಿಗೆ ಸಹಾಯ ಮಾಡುತ್ತೀರಿ. ಎಲ್ಲಾ ಚರ್ಚೆಗಳೂ ನಿಮ್ಮ ಪರವಾಗಿ ಇರಲಿವೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಚೆನ್ನಾಗಿ ಯೋಚಿಸಿ. ಆರೋಗ್ಯ ಸುಧಾರಿಸಲಿದೆ.

ಮಿಥುನ ರಾಶಿ
ಇತರರು ನಿಮ್ಮ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ನಿಮ್ಮ ಯೋಜನೆಗಳು ಒಬ್ಬ ಅನಿರೀಕ್ಷಿತ ಅತಿಥಿಯ ಕಾರಣ ಹಾಳಾಗಬಹುದು, ಆದರೆ ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ.

ಕರ್ಕ ರಾಶಿ

ಮನಸ್ಸು ತ್ರಿಶಂಕು ಸ್ಥಿತಿಯಲ್ಲಿದೆ, ಯಾವುದೇ ಮಹತ್ವಪೂರ್ಣ ನಿರ್ಣಯ ತೆಗೆದುಕೊಳ್ಳಬೇಡಿ. ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕುಟುಂಬದ ಕೆಲಸಗಳಿಗಾಗಿ ಹಣ ಖರ್ಚಾಗಲಿದೆ.

ಸಿಂಹ ರಾಶಿ

ಮನಸ್ಸು ಚಿಂತೆಯಿಂದ ವ್ಯಗ್ರವಾಗಲಿದೆ. ಆಯಾಸ ಮತ್ತು ನಿಶ್ಯಕ್ತಿಯ ಅನುಭವವಾಗಲಿದೆ. ಇದರಿಂದ ಕೆಲಸದ ವೇಗ ಕುಂಠಿತವಾಗಲಿದೆ. ಕಚೇರಿಯಲ್ಲಿ ನಿಮ್ಮೊಂದಿಗೆ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ನಡವಳಿಕೆ ನಕಾರಾತ್ಮಕವಾಗಿರಲಿದೆ.

ಕನ್ಯಾ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ನೀವು ಹೆಚ್ಚು ಕೋಪಗೊಳ್ಳಲಿದ್ದೀರಿ. ಮಾತಿನ ಮೇಲೆ ಸಂಯಮವಿರಲಿ. ಹೆಚ್ಚು ಹಣ ಖರ್ಚಾಗಬಹುದು. ವಿರೋಧಿಗಳೊಂದಿಗೆ ಜಗಳಕ್ಕಿಳಿಯಬೇಡಿ.

ತುಲಾ ರಾಶಿ

ಇವತ್ತು ಮೋಜು-ಮಸ್ತಿ ಮತ್ತು ಮನರಂಜನೆಯಲ್ಲಿ ದಿನ ಕಳೆಯಲಿದ್ದೀರಿ. ಆರೋಗ್ಯ ಉತ್ತಮವಾಗಿರಲಿದೆ. ಸಮಾಜದಲ್ಲಿ ಜನರಿಂದ ಗೌರವ, ಪ್ರತಿಷ್ಠೆ ದೊರೆಯಲಿದೆ.

ವೃಶ್ಚಿಕ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭದಿನ. ಕುಟುಂಬಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಒಡಹುಟ್ಟಿದವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಆರ್ಥಿಕ ವೃದ್ಧಿಯಾಗಲಿದೆ. ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ.

ಧನು ರಾಶಿ

ಪ್ರೇಮದ ಸುಖ ಅನುಭವ ಪಡೆಯುವ ಸೌಭಾಗ್ಯ ದೊರೆಯಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಗೃಹಸ್ಥ ಜೀವನ ಸಂತೋಷಮಯವಾಗಿರಲಿದೆ. ಆದಾಯದಲ್ಲೂ ವೃದ್ಧಿಯಾಗಬಹುದು.

ಮಕರ ರಾಶಿ

ಉದ್ಯಮದಲ್ಲಿ ಹಣ, ಯಶಸ್ಸು ಮತ್ತು ಜನಪ್ರಿಯತೆ ನಿಮ್ಮದಾಗಲಿದೆ. ಉದ್ಯೋಗದಲ್ಲೂ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಕುಟುಂಬ ಮತ್ತು ಮಕ್ಕಳ ವಿಷಯದಲ್ಲೂ ಶುಭ ಸಮಾಚಾರ ದೊರೆಯಲಿದೆ. ಉದ್ಯೋಗದಲ್ಲಿ ಪದೋನ್ನತಿಯ ಸಾಧ್ಯತೆ ಇದೆ.

ಕುಂಭ ರಾಶಿ

ವಿದ್ಯಾರ್ಥಿಗಳು, ಕಲಾವಿದರು ಮತ್ತು ಕ್ರೀಡಾಪಟುಗಳಿಗೆ ಇವತ್ತು ಶುಭ ದಿನ. ತಂದೆ ಮತ್ತು ಸರ್ಕಾರದಿಂದ ಲಾಭವಾಗಲಿದೆ. ಆತ್ಮವಿಶ್ವಾಸದ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಮುನ್ನಡೆಯಿರಿ.

ಮೀನ ರಾಶಿ

ಇವತ್ತು ನಿಮಗೆ ಶುಭ ದಿನ. ಕಲೆಯ ಬಗ್ಗೆ ಒಲವು ಹೆಚ್ಚಲಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...