alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಹೊಸ ಕಾರ್ಯ ಆರಂಭಿಸಲಿದ್ದೀರಿ. ನಿಮ್ಮ ಮನಸ್ಸು ಶೀಘ್ರ ಪರಿವರ್ತನೆಯಾಗಲಿದೆ. ಇದರಿಂದ ಗೊಂದಲ ಮೂಡಬಹುದು. ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಎದುರಿಸಬೇಕಾಗುತ್ತದೆ.

ವೃಷಭ ರಾಶಿ

ಸೂಕ್ತ ನಿರ್ಣಯಕ್ಕೆ ಬರಲಾಗದೇ ಕೈಯಲ್ಲಿರುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದರಿಂದ ಬರಬಹುದಾಗಿದ್ದ ಲಾಭವೂ ನಿಮಗೆ ದೊರೆಯುವುದಿಲ್ಲ. ಚಿಂತೆಯಲ್ಲಿ ಮುಳುಗಿ ಹೋಗುವುದರಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಮಿಥುನ ರಾಶಿ

ಇಂದು ಮಿತ್ರರು ಮತ್ತು ಕುಟುಂಬ ಸದಸ್ಯರೊಂದಿಗೆ ಭೋಜನ ಸವಿಯಲಿದ್ದೀರಿ. ಸುಂದರ ವಸ್ತ್ರವನ್ನು ಧರಿಸುತ್ತೀರಿ. ಆರ್ಥಿಕ ದೃಷ್ಟಿಯಿಂದ್ಲೂ ನಿಮಗೆ ಇಂದು ಶುಭದಿನ. ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಿ.

ಕರ್ಕ ರಾಶಿ

ಯಾವುದೇ ದೃಢ ನಿಶ್ಚಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಸಮಂಜಸತೆಯಿಂದಾಗಿ ಮನಸ್ಸು ಮಂಕಾಗಬಹುದು. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಕೌಟುಂಬಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ.

ಸಿಂಹ ರಾಶಿ

ಗೊಂದಲದ ಮನಸ್ಥಿತಿಯಿಂದಾಗಿ ಅವಕಾಶ ನಿಮ್ಮ ಕೈತಪ್ಪಲಿದೆ. ಮನಸ್ಸು ಚಿಂತೆಯ ಗೂಡಾಗಬಹುದು. ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಸ್ತ್ರೀ ಮಿತ್ರರನ್ನು ಭೇಟಿಯಾಗಲಿದ್ದೀರಿ. ಅವರಿಂದ ಲಾಭವಾಗಲಿದೆ.

ಕನ್ಯಾ ರಾಶಿ

ಪದೋನ್ನತಿ ದೊರೆಯುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಂದ ಲಾಭವಿದೆ. ಹಣ ಮತ್ತು ಗೌರವ ದೊರೆಯಲಿದೆ. ತಂದೆಯಿಂದ ಲಾಭವಾಗಬಹುದು. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಆರೋಗ್ಯದಲ್ಲೂ ಸಮಸ್ಯೆಯಿಲ್ಲ.

ತುಲಾ ರಾಶಿ

ಹೊಸ ಕಾರ್ಯ ಆರಂಭಿಸಲು ಶುಭದಿನ. ವ್ಯಾಪಾರದಲ್ಲಿ ಲಾಭದ ಅವಕಾಶ ಸಿಗುತ್ತದೆ. ವಿದೇಶದಲ್ಲಿ ನೆಲೆಸಿರುವ ಮಿತ್ರರಿಂದ ಶುಭ ಸಮಾಚಾರ ಬರಬಹುದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗುವುದಿಲ್ಲ.

ವೃಶ್ಚಿಕ ರಾಶಿ

ಹೊಸ ಕೆಲಸವನ್ನು ಆರಂಭಿಸಬೇಡಿ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯ. ಅನೈತಿಕ ಕೆಲಸದಿಂದ ದೂರವಿರಿ. ರಾಜಕೀಯ ಮತ್ತು ಸರ್ಕಾರಿ ವಿಷಯಗಳಿಂದ್ಲೂ ದೂರವಿರುವುದು ಒಳಿತು.

ಧನು ರಾಶಿ

ಪ್ರಿಯ ವ್ಯಕ್ತಿಗಳ ಭೇಟಿ ರೋಮಾಂಚನಕಾರಿಯಾಗಿರಲಿದೆ. ವಿಚಾರಗಳಲ್ಲಿ ಶೀಘ್ರ ಪರಿವರ್ತನೆಯಾಗಬಹುದು. ಲೇಖಕರಿಗೆ ಶುಭದಿನ. ಬೌದ್ಧಿಕ ಮತ್ತು ತಾರ್ಕಿಕ ವಿಚಾರ ವಿನಿಮಯ ನಡೆಯಲಿದೆ. ಪಾಲುದಾರಿಕೆಯಲ್ಲಿ ಲಾಭವಿದೆ.

ಮಕರ ರಾಶಿ

ಅವಶ್ಯಕ ಕೆಲಸಗಳಿಗಾಗಿ ಹಣ ಖರ್ಚಾಗಲಿದೆ. ಸಹೋದ್ಯೋಗಿಗಳಿಂದ ಸೂಕ್ತ ಸಹಕಾರ ಸಿಗುತ್ತದೆ. ಉದ್ಯಮಿಗಳಿಗೆ ಕಾನೂನಿನ ತೊಡಕು ಎದುರಾಗಬಹುದು. ವಿದೇಶದೊಂದಿಗೆ ವಹಿವಾಟು ಸುಧಾರಿಸಲಿದೆ. ಶತ್ರುಗಳ ವಿರುದ್ಧ ಜಯ ಸಿಗಲಿದೆ.

ಕುಂಭ ರಾಶಿ

ಪ್ರಯಾಣವನ್ನು ಮುಂದೂಡಿ. ಮಕ್ಕಳ ಬಗ್ಗೆ ಚಿಂತೆ ಕಾಡಬಹುದು. ಬರವಣಿಗೆ ಮತ್ತು ಸೃಜನಾತ್ಮಕ ಕೆಲಸಗಳಿಗೆ ದಿನ ಉತ್ತಮವಾಗಿದೆ. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ. ಆಕಸ್ಮಿಕವಾಗಿ ಹಣ ಖರ್ಚಾಗಬಹುದು.

ಮೀನ ರಾಶಿ

ಮನಸ್ಸು ಪ್ರಫುಲ್ಲವಾಗಿರುವುದಿಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹದಗೆಡಬಹುದು. ಮಹಿಳೆಯರೊಂದಿಗೆ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಹಣ ಮತ್ತು ಗೌರವಕ್ಕೆ ಧಕ್ಕೆ ಬರಬಹುದು. ಉದ್ಯೋಗದಲ್ಲೂ ಸಮಸ್ಯೆ ಎದುರಾಗಲಿದೆ.

 

 

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...