alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಶಾರೀರಿಕ, ಮಾನಸಿಕ, ಆರ್ಥಿಕ ದೃಷ್ಟಿಯಿಂದ ಇಂದು ದಿನ ಉತ್ತಮವಾಗಿದೆ. ಕುಟುಂಬದವರೊಂದಿಗೆ ಭೂರಿ ಭೋಜನ ಸವಿಯಲಿದ್ದೀರಿ. ಉಪಹಾರ ಮತ್ತು ಧನಪ್ರಾಪ್ತಿ ಯೋಗವಿದೆ.

ವೃಷಭ ರಾಶಿ

ಇಂದು ಮನಸ್ಸಿನಲ್ಲಿ ಅನುಮಾನ ಮತ್ತು ಉದಾಸೀನತೆಯ ಭಾವನೆಗಳು ಹೆಚ್ಚಾಗಿರುತ್ತವೆ. ಯಾವುದಾದ್ರೂ ಕಾರಣದಿಂದ ದೈನಿಕ ಕಾರ್ಯಗಳಿಗೆ ಅಡಚಣೆ ಉಂಟಾಗಬಹುದು. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಮಿಥುನ ರಾಶಿ

ಭೂಮಿ ಮತ್ತು ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಮಧ್ಯಾಹ್ನದ ನಂತರ ಸುಖ-ಶಾಂತಿಯ ಯೋಗವಿದೆ. ಸ್ನೇಹಿತರ ಸಹಕಾರ ದೊರೆಯುತ್ತದೆ. ಅಧಿಕ ಯೋಚನೆಯಿಂದ ಮನಸ್ಸು ವಿಚಲಿತಗೊಳ್ಳಬಹುದು.

ಕರ್ಕ ರಾಶಿ

ಇವತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ದಿನವಿಡೀ ಪ್ರಫುಲ್ಲತೆಯಿಂದ ಇರಲಿದ್ದೀರಿ. ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ಸಿಂಹ ರಾಶಿ

ಪತಿ-ಪತ್ನಿ ಮಧ್ಯೆ ಸಣ್ಣ ಪುಟ್ಟ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಸಂಗಾತಿಯ ಸ್ವಾಸ್ಥ್ಯದ ಬಗ್ಗೆ ಚಿಂತಿತರಾಗಲಿದ್ದೀರಿ. ಸಾಂಸಾರಿಕ ವಿಷಯಗಳಲ್ಲಿ ಉದಾಸೀನತೆ ತೋರಲಿದ್ದೀರಿ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಮನೆಯಲ್ಲೂ ಸುಖ- ಶಾಂತಿಯ ವಾತಾವರಣವಿರುತ್ತದೆ. ಆರ್ಥಿಕ ಲಾಭ ಮತ್ತು ಕೆಲಸದಲ್ಲಿ ಯಶಸ್ಸು ಸಿಗಲಿದೆ.

ತುಲಾ ರಾಶಿ

ಸಂಕಷ್ಟಗಳು ಎದುರಾಗಬಹುದು, ಜಾಗರೂಕರಾಗಿರಿ. ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಶುಭ ದಿನ. ಪರೋಪಕಾರಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ವ್ಯಾಪಾರದಲ್ಲಿ ಉಚಿತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ವ್ಯಾಪಾರ ವೃದ್ಧಿಸಲಿದೆ.

ಧನು ರಾಶಿ

ಮನಸ್ಸು ಚಂಚಲಗೊಳ್ಳುವ ಸಾಧ್ಯತೆ ಇದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನೋವು ಅನುಭವಿಸುತ್ತೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅಡಚಣೆ ಉಂಟಾಗಬಹುದು. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ.

ಮಕರ ರಾಶಿ

ಭೌತಿಕ ಸಾಧನ, ಬಟ್ಟೆ ಇತ್ಯಾದಿಗಳನ್ನು ಖರೀದಿಸಲಿದ್ದೀರಿ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಲಿದೆ. ಉತ್ತಮ ಭೋಜನ, ವಾಹನ ಸುಖದ ಯೋಗವಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರದಲ್ಲೂ ಇಂದು ಲಾಭದಾಯಕ ದಿನ.

ಕುಂಭ ರಾಶಿ

ಆರ್ಥಿಕ ವಿಷಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ವ್ಯಾಪಾರ ಇನ್ನಷ್ಟು ವೃದ್ಧಿಯಾಗಲಿದೆ. ತ್ರಿಪಕ್ಷೀಯ ಪಾಲುದಾರಿಕೆಯಿಂದ ಶುಭವಾಗುತ್ತದೆ. ಆದ್ರೆ ಅದರಿಂದ ಸಂಬಂಧಗಳಿಗೆ ಕುಂದುಂಟಾಗುವ ಸಾಧ್ಯತೆಯೂ ಇದೆ.

ಮೀನ ರಾಶಿ

ಆತ್ಮೀಯ ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸುತ್ತಾಡಲಿದ್ದೀರಿ. ಇದರಿಂದ ಮನಸ್ಸಿಗೆ ಅತೀವ ಆನಂದ ದೊರೆಯಲಿದೆ. ಸುಂದರ ವಸ್ತ್ರ, ಆಭರಣ, ರುಚಿಕರ ಭೋಜನ ಸವಿಯುವ ಯೋಗವೂ ಇದೆ. ಖರ್ಚು ಹೆಚ್ಚಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...