alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಗಣೇಶನ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಹಾಗಾಗಿ ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ. ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಪ್ರವಾಸ ಮತ್ತು ರುಚಿ ರುಚಿಯಾದ ಭೋಜನ ಸವಿಯುವ ಅವಕಾಶವಿದೆ. ಕಳೆದು ಹೋಗಿರುವ ವಸ್ತು ಇಂದು ಮರಳಿ ಸಿಗಬಹುದು.

ವೃಷಭ ರಾಶಿ

ಇಂದು ಆನಂದವಾಗಿ ಸಮಯ ಕಳೆಯುತ್ತೀರಿ. ಎಲ್ಲಾ ಕಾರ್ಯಗಳನ್ನೂ ವ್ಯವಸ್ಥಿತವಾಗಿ ಮಾಡಿ ಮುಗಿಸಲಿದ್ದೀರಿ. ಯೋಜನೆಗೆ ಅನುಸಾರವಾಗಿ ಕೆಲಸ ಮಾಡಲಿದ್ದೀರಿ. ಅಪೂರ್ಣ ಕೆಲಸಗಳು ಕೂಡ ಯಶಸ್ವಿಯಾಗಲಿವೆ.

ಮಿಥುನ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಸಂಗಾತಿ ಮತ್ತು ಮಕ್ಕಳ ಬಗ್ಗೆ ಚಿಂತೆ ಕಾಡುತ್ತದೆ. ಇದರಿಂದ ಮನಸ್ಸು ಉದ್ವೇಗಗೊಳ್ಳುತ್ತದೆ. ಹೊಟ್ಟೆಯಲ್ಲಿ ಅಜೀರ್ಣದಿಂದಾಗಿ ಆರೋಗ್ಯ ಕೂಡ ಸ್ವಲ್ಪ ಏರುಪೇರಾಗಬಹುದು.

ಕರ್ಕ ರಾಶಿ

ಇಂದು ಸ್ವಲ್ಪ ಜಾಗರೂಕರಾಗಿರಿ. ಮಾನಸಿಕ ಪ್ರಸನ್ನತೆ ಮತ್ತು ಶಾರೀರಿಕ ಸ್ಪೂರ್ತಿ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು. ಎದೆ ನೋವು ಅಥವಾ ಇತರ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

ಸಿಂಹ ರಾಶಿ

ಒಡಹುಟ್ಟಿದವರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ರಮಣೀಯ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇವತ್ತು ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆರ್ಥಿಕ ಲಾಭವಾಗಲಿದೆ.

ಕನ್ಯಾ ರಾಶಿ

ಇವತ್ತು ನಿಮಗೆ ಶುಭದಿನ. ಮಧುರ ಮಾತುಗಳಿಂದ ಇತರರ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲಿದ್ದೀರಿ. ಕುಟುಂಬದಲ್ಲೂ ಉತ್ತಮ ವಾತಾವರಣವಿರುತ್ತದೆ. ಆದ್ರೂ ಮಾತಿನ ಮೇಲೆ ಹಿಡಿತ ಇಟ್ಟುಕೊಂಡಲ್ಲಿ ವಾದ-ವಿವಾದಗಳಿಂದ ಪಾರಾಗಬಹುದು.

ತುಲಾ ರಾಶಿ

ಪ್ರತಿ ಕಾರ್ಯವನ್ನೂ ಆತ್ಮವಿಶ್ವಾಸದಿಂದ ಮಾಡುತ್ತೀರಿ. ಆರ್ಥಿಕ ಯೋಜನೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನತೆಯ ಅನುಭವವಾಗಲಿದೆ. ವಸ್ತ್ರಾಭರಣ ಮತ್ತು ಮೋಜು ಮಸ್ತಿಗಾಗಿ ಹಣ ಖರ್ಚಾಗಲಿದೆ.

ವೃಶ್ಚಿಕ ರಾಶಿ

ಇವತ್ತು ಮೋಜು ಮಸ್ತಿ ಮತ್ತು ಮನರಂಜನೆಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಆರೋಗ್ಯದಲ್ಲೂ ಸ್ವಲ್ಪ ಏರುಪೇರಾಗಬಹುದು. ಮನಸ್ಸು ಚಿಂತಾಗ್ರಸ್ಥವಾಗಲಿದೆ. ದುರ್ಘಟನೆಯಿಂದ ಪಾರಾಗಿ. ಕುಟುಂಬ ಮತ್ತು ಒಡಹುಟ್ಟಿದವರೊಂದಿಗೆ ತಪ್ಪು ಗ್ರಹಿಕೆಯ ಅನುಭವವಾಗಬಹುದು.

ಧನು ರಾಶಿ

ಆರ್ಥಿಕ ಲಾಭ ಮತ್ತು ಸಾಮಾಜಿಕ ಪ್ರತಿಷ್ಠೆಯಿಂದಾಗಿ ಕುಟುಂಬದಲ್ಲಿ ಕೂಡ ಸುಖ-ಶಾಂತಿಯ ಅನುಭವವಾಗುತ್ತದೆ. ಆದಾಯದಲ್ಲಿ ವೃದ್ಧಿಯಾಗಲಿದೆ, ವ್ಯಾಪಾರದಲ್ಲೂ ಲಾಭ ದೊರೆಯುತ್ತದೆ. ಪ್ರೀತಿಪಾತ್ರರೊಂದಿಗೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ.

ಮಕರ ರಾಶಿ

ಕುಟುಂಬ ಮತ್ತು ಮಕ್ಕಳ ವಿಚಾರದಲ್ಲಿ ಸಂತೋಷದ ಅನುಭವವಾಗಲಿದೆ. ಮಿತ್ರರು ಮತ್ತು ಆತ್ಮೀಯರೊಂದಿಗಿನ ಭೇಟಿಯಿಂದ ಮನಸ್ಸು ಪ್ರಸನ್ನವಾಗುತ್ತದೆ. ಉದ್ಯಮದಲ್ಲಿ ಹಣ ತೊಡಗಿಸಲು ಬೇರೆಯವರ ಸಹಾಯ ಪಡೆಯಬೇಕಾಗಿ ಬರುತ್ತದೆ.

ಕುಂಭ ರಾಶಿ

ಪ್ರತಿಸ್ಪರ್ಧಿಗಳೊಂದಿಗೆ ವಾದ-ವಿವಾದ ಬೇಡ. ಶಾರೀರಿಕ ಅಸ್ವಸ್ಥತೆ ಉಂಟಾಗಲಿದೆ. ಒಂದು ರೀತಿಯ ಆಲಸ್ಯ ನಿಮ್ಮನ್ನು ಕಾಡಬಹುದು. ಆದರೂ ಮಾನಸಿಕವಾಗಿ ನೆಮ್ಮದಿಯಾಗಿರುತ್ತೀರಿ. ಹಿರಿಯ ಅಧಿಕಾರಿಗಳೊಂದಿಗೆ ಜಾಗರೂಕವಾಗಿ ವರ್ತಿಸಿ.

ಮೀನ ರಾಶಿ

ಅನೈತಿಕ ಕಾರ್ಯಗಳಲ್ಲಿ ತೊಡಗಬೇಡಿ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ. ಆರೋಗ್ಯದ ವಿಷಯದಲ್ಲಿ ಎಚ್ಚರದಿಂದಿರಿ. ಸರ್ಕಾರ ವಿರೋಧಿ ಪ್ರವೃತ್ತಿ ಬೇಡ. ಚಿಕಿತ್ಸೆಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...